ನವದೆಹಲಿ : ಐಸಿಸಿ ಟಿ 20 ಕ್ರಿಕೆಟ್ ವಿಶ್ವಕಪ್ ಆರಂಭವಾಗಿದ್ದು, ಭಾರತ ತನ್ನ ಅತಿದೊಡ್ಡ ಎದುರಾಳಿ ಪಾಕಿಸ್ತಾನದ ವಿರುದ್ಧ ಅಕ್ಟೋಬರ್ 24 ರಂದು ಸೆಣೆಸಲಿದೆ. ಆದರೆ ಈ ಪಂದ್ಯಕ್ಕೆ ಇದೀಗ ವಿರೋಧ ಕೇಳಿ ಬರುತ್ತಿದೆ. ಯಾವುದೇ ಕಾರಣಕ್ಕೂ ಭಾರತವು ಪಾಕಿಸ್ತಾನದೊಂದಿಗೆ ಕ್ರಿಕೆಟ್ (India Pak Cricket) ಆಡಬಾರದು ಎನ್ನುವ ಮಾತುಗಳು ಕೇಳಿ ಬರುತ್ತಿದೆ. 


COMMERCIAL BREAK
SCROLL TO CONTINUE READING

"ಸೋಲು ಗೆಲುವು ಗಡಿಯಲ್ಲಿ ನಿರ್ಧಾರವಾಗಲಿ" : 
ಭಾರತ - ಪಾಕಿಸ್ತಾನ ಪಂದ್ಯಕ್ಕೆ (India Pak Cricket)  ಸಂಬಂಧಪಟ್ಟಂತೆ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಈಗಾಗಲೇ ಹೇಳಿಕೆ ನೀಡಿದ್ದಾರೆ. ಈಗ ವಿಶ್ವ ಹಿಂದೂ ಪರಿಷತ್ (VHP) ಕೂಡ ಈ ಪಂದ್ಯಕ್ಕೆ ವಿರೋಧ ವ್ಯಕ್ತಪಡಿಸಿದೆ. ಯಾವುದೇ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಪಂದ್ಯ ನಡೆಯಬಾರದು ಎಂದು ವಿಎಚ್‌ಪಿ ಹೇಳಿದೆ. ಉಭಯ ದೇಶಗಳ ನಡುವಿನ ಸೋಲು ಮತ್ತು ಗೆಲುವನ್ನು ಕ್ರಿಕೆಟ್ ಮೈದಾನದಲ್ಲಿ ನಿರ್ಧರಿಸದೆ ಗಡಿಯಲ್ಲಿರುವ ಸೇನೆಯ ಮೂಲಕ ನಿರ್ಧರಿಸಬೇಕು ಎಂದು  ಹೇಳಿದೆ . 


ಇದನ್ನೂ ಓದಿ : ICC Mens T20 World Cup Warm-up Match, 2021: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು


ಪಾಕಿಸ್ತಾನವನ್ನು ಶತ್ರು ರಾಷ್ಟ್ರವೆಂದು ಘೋಷಿಸಏಕು ಎಂದು, ವಿಎಚ್‌ಪಿ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ (Surendra Jain)  ಮನವಿ ಮಾಡಿದ್ದಾರೆ. ಪಾಕಿಸ್ತಾನ ನಮ್ಮೊಂದಿಗೆ ದ್ವೇಷವನ್ನು ಮುಂದುವರಿಸಲಿ, ನಾವು ಸ್ನೇಹವನ್ನು ನಿಭಾಯಿಸುತ್ತೇವೆ ಎಂದು ಹೇಳಿದ್ದಾರೆ. ಕಾಶ್ಮೀರದಲ್ಲಿ  (Kashmir) ಪಾಕಿಸ್ತಾನ ಪ್ರಾಯೋಜಿತ  ಹಿಂದೂಗಳ ಟಾರ್ಗೆಟ್ ಕಿಲ್ಲಿಂಗ್ ನಡೆಯುತ್ತಿದೆ. ಹಾಗಾಗಿ  ಪಾಕಿಸ್ತಾನದೊಂದಿಗೆ ಕ್ರಿಕೆಟ್ ಪಂದ್ಯವನ್ನು ಹೇಗೆ ಆಡಲಾಗುತ್ತದೆ ಎಂದು ಜೈನ್ ಪ್ರಶ್ನಿಸಿದ್ದಾರೆ. 


ಹಿಂದೂಗಳ ಹತ್ಯೆಯಾಗುತ್ತಿರುವುದಕ್ಕೆ ಆಕ್ರೋಶ : 
ಕಾಶ್ಮೀರದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ನಿರಂತರ ಹತ್ಯೆಗೆ ವಿಎಚ್‌ಪಿ ಪಾಕಿಸ್ತಾನವನ್ನು ಗುರಿಯಾಗಿಸಿಕೊಂಡಿದೆ, ಕಾಶ್ಮೀರದಲ್ಲಿ  ಪಾಕಿಸ್ತಾನದ ಆಜ್ಞೆಯ ಮೇರೆಗೆ ಹಿಂದೂಗಳ ಹತ್ಯೆಯಾಗುತ್ತಿದೆ ಎಂದು ಹೇಳಿದ್ದಾರೆ.  ಯಾವುದೇ ಕಾರಣಕ್ಕೂ ಭಾರತ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡಬಾರದು ಎಂದು ಹೇಳಿದ್ದಾರೆ.  


ಇದನ್ನೂ ಓದಿ : T20 World Cup 2021: ಕನ್ನಡಿಗ ಕೆ.ಎಲ್.ರಾಹುಲ್ ಬ್ಯಾಟಿಂಗ್ ಬಗ್ಗೆ ಕೊಹ್ಲಿ ಹೇಳಿದ್ದೇನು?


ಇಂದು ಯಾವುದೇ ಸುಸಂಸ್ಕೃತ ದೇಶ ಪಾಕಿಸ್ತಾನಕ್ಕೆ (Pakistan) ಹೋಗಿ ಕ್ರಿಕೆಟ್ ಆಡಲು ಸಿದ್ಧವಾಗಿಲ್ಲ ಮತ್ತು ಪಾಕಿಸ್ತಾನದ ತಂಡವನ್ನು ಇಲ್ಲಿಗೆ ಕರೆದರೆ ಭಾರತೀಯ ಸಮಾಜವು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.  ಯಾವುದೇ ಸಂದರ್ಭದಲ್ಲಿ, ಈ ಕ್ರಿಕೆಟ್ ಪಂದ್ಯವನ್ನು ನಡೆಸಬಾರದು ಏಕೆಂದರೆ ಕ್ರಿಕೆಟ್ ಮೈದಾನದಲ್ಲಿ ಆಡುವುದರಿಂದ ದ್ವೇಷವನ್ನು ಹೋಗಲಾಡಿಸಲು ಸಾಧ್ಯವಿಲ್ಲ ಎಂದವರು  ತಮ್ಮ ಅಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. 
 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.