ಹರ್ಭಜನ್ ಸಿಂಗ್ ಗೆ Mr. I Know It All ಎಂದ ಅಖ್ತರ್...! ಭಜ್ಜಿ ನೀಡಿದ ಉತ್ತರ ಏನಿತ್ತು ಗೊತ್ತೇ ?

ಈ ಹಿಂದೆ ಹರ್ಭಜನ್ ಸಿಂಗ್ ಮತ್ತು ಯುವರಾಜ್ ಸಿಂಗ್ ಜೊತೆಗಿನ ಸ್ನೇಹದ ಬಗ್ಗೆ ಶೋಯೆಬ್ ಅಖ್ತರ್ ಹಲವು ಬಾರಿ ಮಾತನಾಡಿದ್ದಾರೆ.ಯಾವಾಗಲೂ ಅಖ್ತರ್ ಮತ್ತು ಹರ್ಭಜನ್ ಸಿಂಗ್ ಒಬ್ಬರೊನ್ನೋಬ್ಬರು ಕಾಲನ್ನು ಎಳೆಯಲು ಇಷ್ಟಪಡುತ್ತಾರೆ.ಈಗ ಈ ಇಬ್ಬರೂ ಆಟಗಾರರು ಮತ್ತೆ ಪರಸ್ಪರ ಕಾಲೆಳೆದು ಮತ್ತೆ ಸುದ್ದಿಯಲ್ಲಿದ್ದಾರೆ.

Written by - Zee Kannada News Desk | Last Updated : Oct 18, 2021, 06:55 PM IST
  • ಈ ಹಿಂದೆ ಹರ್ಭಜನ್ ಸಿಂಗ್ ಮತ್ತು ಯುವರಾಜ್ ಸಿಂಗ್ ಜೊತೆಗಿನ ಸ್ನೇಹದ ಬಗ್ಗೆ ಶೋಯೆಬ್ ಅಖ್ತರ್ ಹಲವು ಬಾರಿ ಮಾತನಾಡಿದ್ದಾರೆ.
  • ಯಾವಾಗಲೂ ಅಖ್ತರ್ ಮತ್ತು ಹರ್ಭಜನ್ ಸಿಂಗ್ ಒಬ್ಬರೊನ್ನೋಬ್ಬರು ಕಾಲನ್ನು ಎಳೆಯಲು ಇಷ್ಟಪಡುತ್ತಾರೆ.ಈಗ ಈ ಇಬ್ಬರೂ ಆಟಗಾರರು ಮತ್ತೆ ಪರಸ್ಪರ ಕಾಲೆಳೆದು ಮತ್ತೆ ಸುದ್ದಿಯಲ್ಲಿದ್ದಾರೆ.
ಹರ್ಭಜನ್ ಸಿಂಗ್ ಗೆ Mr. I Know It All ಎಂದ ಅಖ್ತರ್...! ಭಜ್ಜಿ ನೀಡಿದ ಉತ್ತರ ಏನಿತ್ತು ಗೊತ್ತೇ ? title=
file photo

ನವದೆಹಲಿ: ಈ ಹಿಂದೆ ಹರ್ಭಜನ್ ಸಿಂಗ್ ಮತ್ತು ಯುವರಾಜ್ ಸಿಂಗ್ ಜೊತೆಗಿನ ಸ್ನೇಹದ ಬಗ್ಗೆ ಶೋಯೆಬ್ ಅಖ್ತರ್ ಹಲವು ಬಾರಿ ಮಾತನಾಡಿದ್ದಾರೆ.ಯಾವಾಗಲೂ ಅಖ್ತರ್ ಮತ್ತು ಹರ್ಭಜನ್ ಸಿಂಗ್ ಒಬ್ಬರೊನ್ನೋಬ್ಬರು ಕಾಲನ್ನು ಎಳೆಯಲು ಇಷ್ಟಪಡುತ್ತಾರೆ.ಈಗ ಈ ಇಬ್ಬರೂ ಆಟಗಾರರು ಮತ್ತೆ ಪರಸ್ಪರ ಕಾಲೆಳೆದು ಮತ್ತೆ ಸುದ್ದಿಯಲ್ಲಿದ್ದಾರೆ.

ಇದನ್ನೂ ಓದಿ: Cricketers : ಈ ಸ್ಟಾರ್ ಕ್ರಿಕೆಟಿಗರು ತಮ್ಮ ಪತ್ನಿಯರಿಗೆ 'ಪ್ರಪೋಸ್' ಮಾಡಿದ್ದು ಹೇಗೆ? ಇಲ್ಲಿದೆ ಇಂಟರಸ್ಟಿಂಗ್ ಸ್ಟೋರಿಗಳು!

ಟಿ 20 ವಿಶ್ವಕಪ್ 2021 ರಲ್ಲಿ ಮುಂಬರುವ ಭಾರತ-ಪಾಕಿಸ್ತಾನ ಪಂದ್ಯದ ಕುರಿತು ಚರ್ಚಿಸಲು ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಹರ್ಭಜನ್ ಸಿಂಗ್ (Harbhajan Singh) ಮತ್ತು ಅಖ್ತರ್ ತಮ್ಮ ಸಾಮಾಜಿಕ ಮಾಧ್ಯಮಗಳ ವೇದಿಕೆಯ ಮೂಲಕ ಕಾರ್ಯಕ್ರಮದ ಪೋಟೋಗಳನ್ನು ಹಂಚಿಕೊಂಡು ಒಬ್ಬರಿಗೊಬ್ಬರು ಕಿಚಾಯಿಸಿದ್ದಾರೆ.

ಮಾಜಿ ಪಾಕಿಸ್ತಾನದ ಬೌಲರ್ ಅಖ್ತರ್ ಹರ್ಭಜನ್ ಸಿಂಗ್ ಅವರನ್ನು ಟ್ರೋಲ್  ಮಾಡುತ್ತಾ ಅವರಿಗೆ  Mr. I know it all ಎಂದು ವ್ಯಂಗ್ಯವಾಡಿದರು.ಆದರೆ ಇದಕ್ಕೆ ಭಜ್ಜಿ ಮಾತ್ರ ಭರ್ಜರಿ ತಿರುಗೇಟನ್ನು ನೀಡಿದ್ದಾರೆ.

'400 ಅಧಿಕ ವಿಕೆಟ್ ಗಳನ್ನು ಪಡೆದಿರುವ ವ್ಯಕ್ತಿಗೆ 200ಕ್ಕೂ ಕಡಿಮೆ ವಿಕೆಟ್ ಗಳನ್ನು ಪಡೆದಿರುವ ವ್ಯಕ್ತಿಗಿಂತ ಹೆಚ್ಚಿನ ಕ್ರಿಕೆಟ್ ತಿಳಿದಿರುತ್ತದೆ ಎನ್ನುವುದು ನಿಮಗೆ ಗೊತ್ತಿರುತ್ತದೆ' ಎಂದು ಅವರು ಉತ್ತರಿಸಿದ್ದಾರೆ.

ಇದನ್ನೂ ಓದಿ: Malaika Arora : ಶೀಘ್ರದಲ್ಲೇ ಅಭಿಮಾನಿಗಳಿಗೆ 'ಬಿಗ್ ಸರ್​ಪ್ರೈಸ್' ನೀಡಲಿದ್ದಾರೆ ಮಲೈಕಾ ಅರೋರಾ!

'ನಾನು ಶೋಯೆಬ್ ಅಖ್ತರ್‌ಗೆ ಹೇಳಿದ್ದೇನೆ, ನಮ್ಮ ವಿರುದ್ಧ ಆಡುವುದರ ಅರ್ಥವೇನು? ನೀವು ನಮಗೆ ಒಂದು ವಾಕ್ ಓವರ್ ನೀಡಬೇಕು" ಎಂದು ಹರ್ಭಜನ್ ಸ್ಟಾರ್ ಸ್ಪೋರ್ಟ್ಸ್‌ಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಹರ್ಭಜನ್ ಸಿಂಗ್, ಗೀತಾ ಬಸ್ರಾ ದಂಪತಿಗೆ ಗಂಡು ಮಗು

'ನೀವು ನಮ್ಮ ವಿರುದ್ಧ ಆಡುತ್ತೀರಿ, ಮತ್ತೆ ಸೋತು ನಿರಾಶರಾಗುತ್ತೀರಿ.ಏನು ಪ್ರಯೋಜನ? ಶೋಯೆಬ್ ಅಖ್ತರ್, ಯಾವುದೇ ಅವಕಾಶವಿಲ್ಲ.ನಮ್ಮಲ್ಲಿ ತುಂಬಾ ಗಟ್ಟಿ ತಂಡವಿದೆ, ತುಂಬಾ ಬಲಿಷ್ಠ ತಂಡವಿದೆ. ಅದು ನಿಮ್ಮ ತಂಡವನ್ನು ಸೋಲಿಸುತ್ತದೆ" ಎಂದು ಹರ್ಭಜನ್ ಹೇಳಿದರು.

ಅಕ್ಟೋಬರ್ 24 ರಂದು ನಡೆಯಲಿರುವ ಬಹು ನಿರೀಕ್ಷಿತ ಟಿ 20 ವಿಶ್ವಕಪ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗುತ್ತವೆ. ಇದು ಎರಡೂ ತಂಡಗಳಿಗೆ ಟೂರ್ನಿಯ ಮೊದಲ ಪಂದ್ಯವಾಗಿದೆ.ಪಾಕಿಸ್ತಾನ ಇದುವರೆಗೆ ಒಂದು ಏಕದಿನ ವಿಶ್ವಕಪ್ ಅಥವಾ ಟಿ 20 ವಿಶ್ವಕಪ್ ಪಂದ್ಯಗಳಲ್ಲಿ ಭಾರತವನ್ನು ಸೋಲಿಸಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News