Video: MS Dhoni ಮನೆಗೆ ಪುಟ್ಟ ಅತಿಥಿ ಆಗಮನ, ವಿಡಿಯೋ ಶೇರ್ ಮಾಡಿ `ಟಚ್‌ವುಡ್` ಎಂದ ಸಾಕ್ಷಿ
ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಸಾಕ್ಷಿ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಧೋನಿಯವರ ಹೊಸ ಕುದುರೆ ಮೈದಾನದಾದ್ಯಂತ ಓಡುತ್ತಿರುವುದು ಕಂಡುಬರುತ್ತದೆ.
ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಅವರ ಫಾರ್ಮ್ ಹೌಸ್ನಲ್ಲಿದ್ದ ಚೇತಕ್ ಅವರನ್ನು ಬೆಂಬಲಿಸಲು ಮತ್ತೊಂದು ಕುದುರೆ ಆಗಮನವಾಗಿದೆ. ಶೆಟ್ಲ್ಯಾಂಡ್ ಕುದುರೆ ತಳಿಯ ಈ ಕುದುರೆ ಸ್ಕಾಟ್ಲೆಂಡ್‌ನಿಂದ ರಾಂಚಿಯನ್ನು ತಲುಪಿದೆ. ಮಾಹಿತಿಯ ಪ್ರಕಾರ, ಈ ಕುದುರೆ ವಿಶ್ವದ ಅತ್ಯಂತ ಚಿಕ್ಕ ತಳಿ ಕುದುರೆಯಾಗಿದ್ದು, ಇದರ ವಯಸ್ಸು ಸುಮಾರು 2 ವರ್ಷಗಳು ಮತ್ತು ಅದರ ಎತ್ತರವು ಕೇವಲ 3 ಅಡಿಗಳು ಎಂದು ತಿಳಿದುಬಂದಿದೆ.
ವಿಡಿಯೋ ಹಂಚಿಕೊಂಡಿರುವ ಧೋನಿ ಪತ್ನಿ ಸಾಕ್ಷಿ :
ಎಂ.ಎಸ್. ಧೋನಿಯ ಪತ್ನಿ ಸಾಕ್ಷಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಧೋನಿಯ ಹೊಸ ಕುದುರೆ ಮೈದಾನದಾದ್ಯಂತ ಓಡುತ್ತಿರುವುದು ಕಂಡುಬರುತ್ತದೆ. ಧೋನಿಯ ಇತರ ಮೂರು ಸಾಕುಪ್ರಾಣಿಗಳು ಸಹ ಹೊಸ ಅತಿಥಿಯೊಂದಿಗೆ ಮೋಜು ಮಾಡುತ್ತಿವೆ. 'ಗೋಲ್ಡನ್ ಫ್ರೆಂಡ್ ಶಿಪ್ ಟಚ್‌ವುಡ್' ಎಂದು ಸಾಕ್ಷಿ ವಿಡಿಯೋದ ಶೀರ್ಷಿಕೆ ಬರೆದಿದ್ದಾರೆ.
ಇದನ್ನೂ ಓದಿ- MS Dhoni : ದೇಶದ ಪ್ರತಿಷ್ಠಿತ ನಗರದಲ್ಲಿ ಮನೆ ಖರೀದಿಸಿದ್ದಾರೆ MS ಧೋನಿ!
ಮೋಟಾರು ವಾಹನಗಳ ಜೊತೆಗೆ ಧೋನಿಯ ಸಾಕುಪ್ರಾಣಿಗಳ ಪ್ರೀತಿ:
ಬೈಕು ಮತ್ತು ಕಾರಿನ ನಂತರ, ಧೋನಿಗೆ ಸಾಕುಪ್ರಾಣಿಗಳ ಬಗ್ಗೆ ಇರುವ ಮೋಹ ಇಲ್ಲರಿಗೂ ತಿಳಿದಿದೆ. ಮಹೇಂದ್ರ ಸಿಂಗ್ ಧೋನಿ ಅವರ ಗ್ಯಾರೇಜ್‌ನಲ್ಲಿ ನೂರಾರು ವಾಹನಗಳ ಸಂಗ್ರಹವಿದೆ. ಅದರ ಚಿತ್ರಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಅದೇ ಸಮಯದಲ್ಲಿ, ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ನಾಯಿಗಳನ್ನು ಕೂಡ ತುಂಬಾ ಇಷ್ಟಪಡುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಧೋನಿ ನಾಯಿಗಳಿಗೆ ತರಬೇತಿ ನೀಡುವ ಮತ್ತು ಅವುಗಳೊಂದಿಗೆ ಆಡುವ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಕಾಣಬಹುದು. ಈಗ ಕಾರುಗಳು ಮತ್ತು ಸಾಕು ನಾಯಿಗಳ ನಂತರ, ಎರಡು ಕುದುರೆಗಳು ಧೋನಿಯ ಮನೆಯಲ್ಲಿ ಹೊಸ ಅತಿಥಿಗಳಾಗಿವೆ.
ಇದನ್ನೂ ಓದಿ- MS Dhoni's Farm House: ಆಧುನಿಕ ಸೌಲಭ್ಯಗಳಿಂದ ತುಂಬಿರುವ ಧೋನಿಯ ತೋಟದ ಮನೆಯ ಕಾಣದ ಚಿತ್ರಗಳು
ಮಹೇಂದ್ರ ಸಿಂಗ್ ಧೋನಿಗೆ ಅಪಾರ ಅಭಿಮಾನಿಗಳಿದ್ದಾರೆ:
ಮಹೇಂದ್ರ ಸಿಂಗ್ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರೂ, ಅವರ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಧೋನಿಯ ದರ್ಶನಕ್ಕಾಗಿ ಅನೇಕ ಜನರು ಕಾಯುತ್ತಿರುತ್ತಾರೆ ಮತ್ತು ಧೋನಿಯ ಅಭಿಮಾನಿಗಳ ಆಶಯವನ್ನು ಧೋನಿ ಅವರ ಪತ್ನಿ ಸಾಕ್ಷಿ (Sakshi) ಪೂರೈಸುತ್ತಾರೆ. ಮಹೇಂದ್ರ ಸಿಂಗ್ ಧೋನಿ ಮನೆಯಲ್ಲಿದ್ದಾಗಲೆಲ್ಲಾ ಸಾಕ್ಷಿ ಪತಿಯ ಚಿತ್ರಗಳು, ಅವರು ಮನೆಯಲ್ಲಿ ತಮ್ಮ ಸಾಕು ಪ್ರಾಣಿಗಳೊಂದಿಗೆ ಕಾಲ ಕಳೆಯುವ ಕೆಲವು ವಿಶೇಷ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಫೋಟೋಗಳು ಹಾಗೂ ವಿಡಿಯೋಗಳು ಸಾಕಷ್ಟು ಅಭಿಮಾನಿಗಳಿಂದ ಮೆಚ್ಚುಗೆಯನ್ನೂ ಪಡೆಯುತ್ತವೆ. ಇನ್ನು ಇತ್ತೀಚಿಗೆ ಸಾಕ್ಷಿ ಹಂಚಿಕೊಂಡಿರುವ ಈ ಹೊಸ ಅಥಿತಿಯ ವೀಡಿಯೊವನ್ನು ಸುಮಾರು 3,00,000 ಜನರು ಇಷ್ಟಪಟ್ಟಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.