Viral Video: ಬೀದಿ ಬೀದಿಗಳಲ್ಲಿ ಕಡೆಲೆಕಾಯಿ ಮಾರಾಟಕ್ಕಿಳಿದ ಸ್ಟಾರ್ ಕ್ರಿಕೆಟರ್..!
ಟೀಂ ಇಂಡಿಯಾ ವಿರುದ್ಧ ಭರ್ಜರಿ ಬೌಲಿಂಗ್ ಪ್ರದರ್ಶಿಸಿ ಮಿಂಚಿದ್ದ ವಹಾಬ್ ರಿಯಾಜ್ ಇಂದು ಕಡಲೆಕಾಯಿ ಮಾರಾಟ ಮಾಡುವ ವಿಡಿಯೋ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ನವದೆಹಲಿ: ಡೆಕ್ಕನ್ ಗ್ಲಾಡಿಯೇಟರ್ಸ್ ತಂಡದ ನಾಯಕತ್ವದಡಿ ಇತ್ತೀಚೆಗೆ(2021-22) ಅಬುಧಾಬಿಯಲ್ಲಿ ಮುಕ್ತಾಯವಾದ T-10 ಲೀಗ್ ನಲ್ಲಿ ತಮ್ಮ ಚೊಚ್ಚಲ ಪ್ರಶಸ್ತಿ ಗೆದ್ದ ಪಾಕಿಸ್ತಾನದ ಅನುಭವಿ ವೇಗಿ ವಹಾಬ್ ರಿಯಾಜ್(Wahab Riaz) ಅವರು ಪಾಕಿಸ್ತಾನದ ಬೀದಿ ಬೀದಿಗಳಲ್ಲಿ ಕಡಲೆಕಾಯಿ ಮಾರಾಟದಲ್ಲಿ ನಿರತರಾಗಿದ್ದಾರೆ. 2011ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಮೊಹಾಲಿಯ ಪಿಸಿಎ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಅದ್ಭುತ ಬೌಲಿಂಗ್ ಮಾಡಿ ಕಮಾಲ್ ಮಾಡಿದ್ದ ವಹಾಬ್(Pakistan Pacer) 5 ವಿಕೆಟ್ ಉರುಳಿಸಿ ಗಮನ ಸೆಳೆದಿದ್ದರು.
ಅಂದು ವೀರೇಂದ್ರ ಸೆಹ್ವಾಗ್, ಎಂ.ಎಸ್.ಧೋನಿ ಮತ್ತು ವಿರಾಟ್ ಕೊಹ್ಲಿ ಅವರಂತಹ ಸ್ಟಾರ್ ಆಟಗಾರರ ವಿಕೆಟ್ಗಳನ್ನು ಕಬಳಿಸಿದ್ ವಹಾಬ್ ರಿಯಾಜ್ ಇಂದು ಪಾಕಿಸ್ತಾನದ ರಸ್ತೆಗಳಲ್ಲಿ ಕಡೆಲೆಕಾಯಿ ಮಾರಾಟ(Selling Chana)ಕ್ಕಿಳಿದಿದ್ದಾರೆ. ಕುತೂಹಲಕಾರಿಯಾಗಿ ಕೆಲವು ಸಮಯದಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಿರುವ ರಿಯಾಜ್ ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅವರು ಬಿಸಿ ಬಿಸಿ ಕಡಲೆಕಾಯಿ ಮಾರುತ್ತಿರುವುದನ್ನು ಕಾಣಬಹುದು. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಖತ್ ಸೌಂಡ್ ಮಾಡುತ್ತಿದೆ.
IPL New Title Sponsor: ಟೈಟಲ್ ಸ್ಪಾನ್ಸರ್ ಬದಲಾಯಿಸಿದ IPL, VIVO ಬದಲಿಗೆ ಈ ಭಾರತೀಯ ಕಂಪನಿಗೆ ಸಿಕ್ತು ಸ್ಪಾನ್ಸರ್ಶಿಪ್ ಹೊಣೆ
ಅಂದು ಟೀಂ ಇಂಡಿಯಾ ವಿರುದ್ಧ ಭರ್ಜರಿ ಮಿಂಚಿದ್ದ ವಹಾಬ್ ರಿಯಾಜ್(Wahab Riaz) ಇಂದು ಕಡಲೆಕಾಯಿ ಮಾರಾಟ(Wahab Riaz Selling Chana) ಮಾಡುವ ವಿಡಿಯೋ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ವಿಡಿಯೋ ನೋಡಿದ ಅನೇಕರು ಈ ಪಾಕ್ ವೇಗಿ, ಸ್ಟಾರ್ ಕ್ರಿಕೆಟರ್ ಏಕೆ ಕಡಲೆಕಾಯಿ ಮಾರಾಟ ಮಾಡುತ್ತಿದ್ದಾರೆಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಕಡಲೆಕಾಯಿ ಹುರಿಯುತ್ತಿರುವ ವಿಡಯೋ ಪೋಸ್ಟ್ ಮಾಡಿರುವ ವಹಾಬ್ ‘ಕಡ್ಲೆಕಾಯಿ ಬೇಕಾ ಕಡ್ಲೆಕಾಯಿ…’ ಎಂದು ಜನರನ್ನು ಕೇಳುತ್ತಿರುವುದು ಕಂಡುಬಂದಿದೆ. ‘ನಾನು ಕಡಲೆಕಾಯಿ ಮಾರುತ್ತಿದ್ದೇನೆ. ನನಗೆ ನನ್ನ ಬಾಲ್ಯದ ಸುಂದರ ದಿನಗಳು ನೆನಪಾಗುತ್ತಿದೆ. ಈ ವಿಶೇಷ ಕೈಗಾಡಿಯಲ್ಲಿ ನಾಡು ಕಡಲೆಕಾಯಿ ಮಾರಾಟ ಮಾಡುತ್ತಿರುವುದು ಖುಷಿ ನೀಡಿದೆ’ ಅಂತಾ ಕ್ಯಾಪ್ಶನ್ ಬರೆದುಕೊಂಡಿದ್ದಾರೆ.
Pakistan)ದ ಕ್ರಿಕೆಟಿಗ ಅಹ್ಮದ್ ಶೆಹಜಾದ್ ಅವರು ರಿಯಾಜ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದು, ‘ನನಗೂ ಸ್ವಲ್ಪ ಕಡಲೆಕಾಯಿ ಬೇಕು’ ಅಂತಾ ಕೇಳಿದ್ದಾರೆ. ವಹಾಬ್ ರಿಯಾಜ್ ಕಳೆದ 1 ವರ್ಷದಿಂದ ಪಾಕಿಸ್ತಾನ ಕ್ರಿಕೆಟ್ ತಂಡದ ಭಾಗವಾಗಿಲ್ಲ. ಈ ವೇಗದ ಬೌಲರ್ 2020ರಿಂದ ಕೊನೆಯದಾಗಿ ಯಾವುದೇ ODI ಅಥವಾ T20 ಪಂದ್ಯವನ್ನೂ ಆಡಿಲ್ಲ. ಆದರೆ ಅವರು 2018ರಲ್ಲಿ ರಾಷ್ಟ್ರೀಯ ತಂಡಕ್ಕಾಗಿ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು.
ಇದನ್ನೂ ಓದಿ: ಸೈನಾ ನೆಹ್ವಾಲ್ ವಿರುದ್ಧ ನಟ ಸಿದ್ದಾರ್ಥ್ ಆಕ್ಷೇಪಾರ್ಹ ಟ್ವೀಟ್; "ಉತ್ತಮ ಪದಗಳನ್ನು ಬಳಸಬಹುದಿತ್ತು" ಎಂದ ಬ್ಯಾಡ್ಮಿಂಟನ್ ತಾರೆ
ವಹಾಬ್ ರಿಯಾಜ್(Wahab Riaz) ಅವರ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಹದಗೆಟ್ಟಿಲ್ಲ. ಅವರು ಈಗಲೂ ಹಲವು ಲೀಗ್ ಗಳಲ್ಲಿ ಟಿ-20 ಪಂದ್ಯಗಳನ್ನು ಆಡುತ್ತಿದ್ದಾರೆ. ವಹಾಬ್ ಪಾಕಿಸ್ತಾನದ ಪರ 91 ಏಕದಿನ ಪಂದ್ಯಗಳನ್ನಾಡಿದ್ದು, 120 ವಿಕೆಟ್ ಪಡೆದಿದ್ದಾರೆ. 27 ಟೆಸ್ಟ್ ಪಂದ್ಯಗಳಲ್ಲಿ 83 ವಿಕೆಟ್ ಹಾಗೂ 36 ಟಿ-20 ಪಂದ್ಯಗಳಿಂದ 34 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.