IPL New Title Sponsor: ಟೈಟಲ್ ಸ್ಪಾನ್ಸರ್ ಬದಲಾಯಿಸಿದ IPL, VIVO ಬದಲಿಗೆ ಈ ಭಾರತೀಯ ಕಂಪನಿಗೆ ಸಿಕ್ತು ಸ್ಪಾನ್ಸರ್ಶಿಪ್ ಹೊಣೆ

IPL Title Sponsor - ಐಪಿಎಲ್ ಮುಂದಿನ ಆವೃತ್ತಿಗೂ ಮುನ್ನ IPL ತನ್ನ ಶೀರ್ಷಿಕೆ ಪ್ರಾಯೋಜಕರನ್ನು ಬದಲಾಯಿಸಲು ನಿರ್ಧರಿಸಿದೆ. ಈಗ ಚೀನಾದ ವಿವೋ ಕಂಪನಿಯಿಂದ ಈ ಜವಾಬ್ದಾರಿಯನ್ನು ಭಾರತದ ಟಾಟಾಗೆ ವಹಿಸಲಾಗಿದೆ. 

Written by - Nitin Tabib | Last Updated : Jan 11, 2022, 04:27 PM IST
  • IPL ಶೀರ್ಷಿಕೆ ಪ್ರಾಯೋಜಕತ್ವ ಬದಲಾವಣೆ
  • ಶೀರ್ಷಿಕೆ ಪ್ರಾಯೋಜಕತ್ವ ಕಳೆದುಕೊಂಡ VIVO.
  • ಟಾಟಾ ಕಂಪನಿಗೆ ಪ್ರಾಯೋಜಕತ್ವದ ಜವಾಬ್ದಾರಿ.
IPL New Title Sponsor: ಟೈಟಲ್ ಸ್ಪಾನ್ಸರ್ ಬದಲಾಯಿಸಿದ IPL, VIVO ಬದಲಿಗೆ ಈ ಭಾರತೀಯ ಕಂಪನಿಗೆ ಸಿಕ್ತು ಸ್ಪಾನ್ಸರ್ಶಿಪ್ ಹೊಣೆ title=
TATA IPL New Sponsor (File Photo)

ನವದೆಹಲಿ: TATA IPL New Sponsor - ಐಪಿಎಲ್ 2022 ಪ್ರಾರಂಭವಾಗುವ ಮುನ್ನವೇ ಮಹತ್ವದ ಸುದ್ದಿಯೊಂದು ಪ್ರಕಟಗೊಂಡಿದೆ. ಹೌದು, ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕರನ್ನು ಬದಲಾಯಿಸಲಾಗಿದೆ. ಐಪಿಎಲ್‌ನ ಆಯೋಜಕರು  ಚೀನಾದ ವಿವೋ (Vivo) ಕಂಪನಿಯಿಂದ ಟೈಟಲ್ ಪ್ರಾಯೋಜಕತ್ವವನ್ನು ಕಸಿದುಕೊಂಡು ಇದೀಗ ಭಾರತೀಯ ಕಂಪನಿ ಟಾಟಾಗೆ (Tata) ಸ್ಪಾನ್ಸರ್ಶಿಪ್ ಜವಾಬ್ದಾರಿ (IPL New Sponsor Tata) ನೀಡಿದ್ದಾರೆ. ವಿವೋ ಸ್ವತಃ ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕತ್ವದ ಹೆಸರನ್ನು ಹಿಂಪಡೆದಿದೆ.

ಇದನ್ನೂ ಓದಿ-ಸೈನಾ ನೆಹ್ವಾಲ್ ವಿರುದ್ಧ ನಟ ಸಿದ್ದಾರ್ಥ್ ಆಕ್ಷೇಪಾರ್ಹ ಟ್ವೀಟ್‌; "ಉತ್ತಮ ಪದಗಳನ್ನು ಬಳಸಬಹುದಿತ್ತು" ಎಂದ ಬ್ಯಾಡ್ಮಿಂಟನ್ ತಾರೆ

ಟಾಟಾಗೆ ಜವಾಬ್ದಾರಿ ಸಿಕ್ಕಿತು
ಚೀನಾದ ಮೊಬೈಲ್ ತಯಾರಕ ವಿವೋ (Vivo Pulled Out) ಬದಲಿಗೆ ಭಾರತದ ಅತಿದೊಡ್ಡ ವ್ಯಾಪಾರ ಸಮೂಹಗಳಲ್ಲಿ ಒಂದಾದ ಟಾಟಾ ಗ್ರೂಪ್ ಈ ವರ್ಷದಿಂದ ಐಪಿಎಲ್ ಪ್ರಾಯೋಜಕತ್ವ ವಹಿಸಿಕೊಳ್ಳಲಿದೆ. ಮಂಗಳವಾರ ನಡೆದ ಐಪಿಎಲ್‌ನ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಸುದ್ದಿ ಸಂಸ್ಥೆ PTI ಗೆ ಮಾಹಿತಿ ನೀಡಿರುವ ಐಪಿಎಲ್ ಅಧ್ಯಕ್ಷ ಬ್ರಿಜೇಶ್ ಪಟೇಲ್, "ಹೌದು, ಟಾಟಾ ಸಮೂಹವು ಇನ್ಮುಂದೆ ಐಪಿಎಲ್ ಅನ್ನು ಪ್ರಾಯೋಜಿಸಲಿದೆ " ಎಂದು ಹೇಳಿದ್ದಾರೆ.

ಇದನ್ನೂ ಓದಿ-IPL 2022 : ಹಾರ್ದಿಕ್ ಪಾಂಡ್ಯ ಬಗ್ಗೆ 'ಬಿಗ್ ನ್ಯೂಸ್' : ಈ ಐಪಿಎಲ್ ಟೀಂ ಕ್ಯಾಪ್ಟನ್!

ಚೀನಾದೊಂದಿಗೆ ವಿವಾದ
Vivo 2018 ರಿಂದ 2022 ರವರೆಗಿನ IPL ಪ್ರಾಯೋಜಕತ್ವದ ಹಕ್ಕುಗಳನ್ನು 2200 ಕೋಟಿಗೆ ಖರೀದಿಸಿತ್ತು ಆದರೆ 2020 ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ನಡುವಿನ ಮಿಲಿಟರಿ ಮುಖಾಮುಖಿಯ ನಂತರ Vivo ಒಂದು ವರ್ಷದ ವಿರಾಮವನ್ನು ಪಡೆದುಕೊಂಡಿತ್ತು ಮತ್ತು ಅದರ ಸ್ಥಾನದಲ್ಲಿ Dream11 ಟೈಟಲ್ ಸ್ಪಾನ್ಸರ್ಶಿಪ್ ವಹಿಸಿತ್ತು. ವಿವೋ 2021 ರಲ್ಲಿ ಮತ್ತೆ ಪ್ರಾಯೋಜಕತ್ವ ವಹಿಸಿಕೊಂಡಿತು. ಆದರೆ, ಬಳಿಕ ಸರಿಯಾಗಿ ಬಿಡ್ ಮಾಡುವವರಿಗೆ IPL ಈ ಅವಕಾಶವನ್ನು ಸ್ವತ ನೀಡಲು ಬಯಸಿತ್ತು ಎನ್ನಲಾಗಿದ್ದು, ಕಂಪನಿಯ ನಿರ್ಧಾರಕ್ಕೆ ಬಿಸಿಸಿಐ ಕೂಡ ಬೆಂಬಲಿಸಿದೆ ಎಂಬ ಊಹಾಪೋಹಗಳು ಕೇಳಿಬಂದಿದ್ದವು.

ಇದನ್ನೂ ಓದಿ-ಧೋನಿ-ಅಫ್ರಿದಿ, ಯುವರಾಜ್ ಅಲ್ಲ; ಕ್ರಿಕೆಟ್ ಇತಿಹಾಸದಲ್ಲಿ ಅತಿ ದೂರದ ಸಿಕ್ಸರ್ ಬಾರಿಸಿದ ಈ ಆಟಗಾರ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News