Video ನೋಡಿ: ಕಣ್ಣೀರಿಡುತ್ತಲೇ ಬಾರ್ಸಿಲೋನಾ ಎಫ್‌ಸಿ ತಂಡಕ್ಕೆ ಗುಡ್ ಬೈ ಹೇಳಿದ ಲಿಯೊನೆಲ್ ಮೆಸ್ಸಿ..!
ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ಅರ್ಜೆಂಟೀನಾದ ಸ್ಟಾರ್ ಫುಟ್‌ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ.
ಬಾರ್ಸಿಲೋನಾ: ಕಣ್ಣೀರಿಡುತ್ತಲೇ ಬಾರ್ಸಿಲೋನಾ ಎಫ್‌ಸಿ ತಂಡವನ್ನು ತೊರೆಯುವುದಾಗಿ ಅರ್ಜೆಂಟೀನಾದ ಹಿರಿಯ ಫುಟ್‌ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ(Lionel Messi) ಘೋಷಿಸಿದ್ದಾರೆ. ಬಾರ್ಸಿಲೋನಾ ಎಫ್‌ಸಿ ತಂಡದ ಯಶಸ್ಸಿನಲ್ಲಿ ಮೆಸ್ಸಿ ಮಹತ್ವದ ಪಾತ್ರವನ್ನು ವಹಿಸಿದ್ದರು. ಆದರೆ ಮೆಸ್ಸಿಗೆ ಹೆಚ್ಚಿನ ವೇತನ ಪಾವತಿಸಲು ಸಾಧ್ಯವಿಲ್ಲವೆಂದು ಕ್ಲಬ್ ಸ್ಪಷ್ಟವಾಗಿ ಹೇಳಿತ್ತು. ಹೀಗಾಗಿ ಅನಿವಾರ್ಯವಾಗಿ ಮೆಸ್ಸಿ ಕ್ಲಬ್ ಗೆ ಗುಡ್ ಬೈ ಹೇಳಿದ್ದಾರೆ.
Lionel Messi) ಹೇಳಿಕೊಂಡಿದ್ದರು. ಆದರೆ ಈಗ ಅನಿವಾರ್ಯವಾಗಿ ತಂಡವನ್ನು ತೊರೆಯುತ್ತಿರುವುದಾಗಿ ತಿಳಿಸಿದ್ದಾರೆ. ‘ನಾನು ಅತೀವ ವಿನಯ ಹಾಗೂ ಗೌರವದಿಂದ ವರ್ತಿಸಲು ಪ್ರಯತ್ನಿಸಿದ್ದೇನೆ. ಬಾರ್ಸಿಲೋನಾ ತಂಡ ತೊರೆಯುವಾಗ ಇದೊಂದೇ ನನ್ನ ಬಳಿ ಉಳಿಯುತ್ತದೆ’ ಅಂತಾ ಸುದ್ದಿಗೋಷ್ಠಿಯಲ್ಲಿ ಮೆಸ್ಸಿ ಭಾವನಾತ್ಮಕವಾಗಿ ಹೇಳಿದ್ದಾರೆ.
Barca Camp Nou) ಕ್ರೀಡಾಂಗಣದ ಹೊರಗಡೆ ಅಭಿಮಾನಿಗಳ ದಂಡೇ ನೆರೆದಿತ್ತು.
Neeraj Chopra: 37 ವರ್ಷದಿಂದ ಅಪೂರ್ಣವಾಗಿ ಉಳಿದಿದ್ದ ಕನಸು ನನಸು ಮಾಡಿದ ನೀರಜ್ ಚೋಪ್ರಾ..!
34ರ ಹರೆಯದ ಮೆಸ್ಸಿ ಕಳೆದ 21 ವರ್ಷಗಳಿಂದ ಬಾರ್ಸಿಲೋನಾ ತಂಡ(Barcelona Team)ದ ಭಾಗವಾಗಿದ್ದರು. ಅವರು ದಾಖಲೆಯ 682 ಗೋಲುಗಳನ್ನು ಗಳಿಸಿ ದಾಖಲೆ ನಿರ್ಮಿಸಿದ್ದಾರೆ. ವಿದಾಯದ ಭಾಷಣ ಮಾಡುವ ಮೊದಲು ಕಣ್ಣೀರು ಹಾಕಿದರು. ಈ ವೇಳೆ ಉಪಸ್ಥಿತರಿದ್ದ ಪ್ರಸ್ತುತ ಮತ್ತು ಮಾಜಿ ತಂಡದ ಸಹ ಆಟಗಾರು ಹಾಗೂ ತರಬೇತುದಾರರಿಂದ ಸುದೀರ್ಘವಾದ ಪ್ರಶಂಸೆಯನ್ನು ಸ್ವೀಕರಿಸಿದರು.
ಮೆಸ್ಸಿ ಭವಿಷ್ಯದ ಯೋಜನೆಗಳು ಏನು? ಮತ್ತು ಅವರು ಯಾವ ತಂಡ ಸೇರಲಿದ್ದಾರೆಂಬುದರ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ಫ್ರೆಂಚ್ ಪತ್ರಿಕೆಯೊಂದರ ವರದಿಯ ಪ್ರಕಾರ, ಮೆಸ್ಸಿಯವರು ‘ಪ್ಯಾರಿಸ್ ಸೇಂಟ್–ಜರ್ಮೈನ್ ಎಫ್‌ಸಿ’(Paris Saint Germain FC) ತಂಡ ಸೇರಲು ಸಜ್ಜಾಗಿದ್ದಾರೆಂದು ಅವರ ಮ್ಯಾನೇಜರ್ ಮಾರಿಶಿಯೊ ಪೊಚಿಟಿನೋ ಹೇಳಿದ್ದಾರೆಂದು ತಿಳಿದುಬಂದಿದೆ. ಮೆಸ್ಸಿ ಈಗ ಒಂದು ಆಯ್ಕೆಯಾಗಿದ್ದಾರೆ. ತಂಡ ಸೇರುವ ಸಾಧ್ಯತೆ ಬಗ್ಗೆ ಅರ್ಜೆಂಟೀನಾ ದೃಢಪಡಿಸಿದೆ. ಆದರೆ ಮೆಸ್ಸಿ ಈ ಸಂದರ್ಭದಲ್ಲಿ ಎಲ್ಲಿಯೂ ಹೋಗಲು ಒಪ್ಪಿಕೊಂಡಿಲ್ಲವೆಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: AB de vs Khaya Zondo : ಎಬಿಡಿಯಿಂದ ಈ ಕ್ರಿಕೆಟ್ ಆಟಗಾರನ ವೃತ್ತಿಜೀವನವೆ ಕೊನೆ ಆಯ್ತು..!
ವಿಶ್ವದಲ್ಲಿಯೇ ಅತಿಹೆಚ್ಚಿನ ಆದಾಯ ಹೊಂದಿರುವ ಮೆಸ್ಸಿ ಅವರೊಂದಿಗಿನ ಒಪ್ಪಂದ ಮುಂದುವರಿಸಲು ಬಾರ್ಸಿಲೋನಾ ಎಫ್‌ಸಿ ಆಸಕ್ತಿ ತೋರಿರಲಿಲ್ಲ. ವೇತನ ವಿಚಾರವಾಗಿ ಕ್ಲಬ್ ಮತ್ತು ಮೆಸ್ಸಿ ನಡುವೆ ಬಿರುಕು ಮೂಡಿತ್ತು. ನನ್ನ ದೇಹ ಆಟಕ್ಕೆ ಸ್ಪಂದಿಸುವವರೆಗೂ, ಎಲ್ಲಿವರೆಗೆ ನಾನು ಆರೋಗ್ಯದಿಂದ ಇರುತ್ತೇನೋ ಅಲ್ಲಿವರೆಗೆ ಆಡುತ್ತೇನೆ ಅಂತಾ ಮೆಸ್ಸಿ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ