ನವದೆಹಲಿ: ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಡೇವಿಡ್ ವಾರ್ನರ್ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತಮ್ಮ ಪತ್ನಿ, ಮಕ್ಕಳೊಂದಿಗೆ ಭಾರತೀಯ ಸಿನಿಮಾ ಹಾಡುಗಳಿಗೆ ಡ್ಯಾನ್ಸ್ ಮಾಡುವುದು, ನಟಿಸುವುದು ಮಾಡುವ ಮೂಲಕ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಲಕ್ಷಾಂತರ ಭಾರತೀಯ ಅಭಿಮಾನಿಗಳು ಅವರ ಫಾಲೋವರ್ಸ್ ಆಗಿದ್ದಾರೆ. ಇದೀಗ ಡೇವಿಡ್ ವಾರ್ನರ್ ಮಾಡಿರುವ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.  


COMMERCIAL BREAK
SCROLL TO CONTINUE READING

ಆಸ್ಟ್ರೇಲಿಯಾ(Australia) ತಂಡದ ಆರಂಭಿಕ ಆಟಗಾರ ವಾರ್ನರ್ ತಮ್ಮ ರಾಷ್ಟ್ರೀಯ ತಂಡದೊಂದಿಗೆ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಹೋಗಿಲ್ಲ. ಆದರೆ ಕುಟುಂಬದೊಂದಿಗೆ ತಮ್ಮ ಅಮೂಲ್ಯ ಸಮಯ ಕಳೆಯುತ್ತಿದ್ದಾರೆ. ಇದೀಗ ಮತ್ತೊಂದು ಫನ್ನಿ ವಿಡಿಯೋದಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ. ಈ ವಿಡಿಯೋದಲ್ಲಿ ಅವರು ‘ಭಾರತ್ ಮಾತಾಕೀ ಜೈ’ ಎಂದಿರುವುದು ಭಾರತೀಯ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಖುಷಿ ತಂದಿದೆ.


Tokyo Olympic 2020: ಸಾನಿಯಾ ಮಿರ್ಜಾ ಮಸ್ತ್ ಮಸ್ತ್ ಡ್ಯಾನ್ಸ್, ವಿಡಿಯೋ ವೈರಲ್


ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿಈ ವಿಡಿಯೋ ಶೇರ್ ಮಾಡಿರುವ ವಾರ್ನರ್(David Warner), ‘ಇದು ನನ್ನ ಫೆವರಿಟ್’ ನಿಮ್ಮದು ಯಾವುದು..?’ ಎಂದು ಪಶ್ನಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ನಟನೆ ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾದಲ್ಲಿನ ‘ನನ್ನ ತಾಯ್ನಾಡು ಬಿಟ್ಟು ತೋಲಗಿ, ಇದು ನನ್ನ ದೇಶ, ನನ್ನ ನೆಲ, ನಿಮಗೇಕೆ ಕೊಡಬೇಕು ಕಪ್ಪ, ಭಾರತ್ ಮಾತಾಕೀ ಜೈ’ ಎನ್ನುವ ಡೈಲಾಗ್ ಇರುವ ದೃಶ್ಯಗಳನ್ನು ವಾರ್ನರ್ ಎಡಿಟ್ ಮಾಡಿದ್ದು, ಅದಕ್ಕೆ ತಮ್ಮ ಮುಖವನ್ನು ಜೋಡಿಸಿ ಶೇರ್ ಮಾಡಿದ್ದಾರೆ. ಈ ವಿಡಿಯೋ ಸದ್ಯ ಸಾಕಷ್ಟು ವೈರಲ್ ಆಗಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಅನೇಕರು ವಾರ್ನರ್ ಡೈಲಾಗ್ ಗೆ ಫಿದಾ ಆಗಿದ್ದು, ಅವರ ನ್ಯೂ ಗೇಟಪ್ ಗೆ ಜೈ ಜೈ ಎಂದಿದ್ದಾರೆ.


ಇದನ್ನೂ  ಓದಿ: "ಜನರು ನಿವೃತ್ತರಾದಾಗ ದಂತಕಥೆಗಳಾಗುತ್ತಾರೆ. ಕೊಹ್ಲಿ 30 ನೇ ವಯಸ್ಸಿನಲ್ಲಿಯೇ ದಂತಕಥೆ"


ರಣವೀರ್ ಸಿಂಗ್ ನಿಂದ ಹಿಡಿದು ಪ್ರಭಾಸ್ ವರೆಗೆ ಅನೇಕ ಬಾಲಿವುಡ್ ನಟರ ಮೂವಿ ಸೀನ್ ಗಳನ್ನು ಎಡಿಟ್ ಮಾಡಿ ಅದಕ್ಕೆ ತಮ್ಮ ಮುಖವನ್ನು ಹೊಂದಿಸಿ ವಾರ್ನರ್ ಸೋಷಿಯಲ್ ಮೀಡಿಯಾ(Social Media)ದಲ್ಲಿ ಹಂಚಿಕೊಳ್ಳುತ್ತಾರೆ. ಸಲ್ಮಾನ್ ಖಾನ್ ರಿಂದ ಹಿಡಿದು ಆಯುಷ್ಮಾನ್ ಖುರಾನಾವರೆಗೆ ಡಾನ್ಸ್ ಮಾಡಿರುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಡೇವಿಡ್ ವಾರ್ನರ್ ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿದ್ದರು. ಆದರೆ ಕಳಪೆ ಪ್ರದರ್ಶನ ಹಿನ್ನೆಲೆ ಅವರು ನಾಯಕ ಸ್ಥಾನದಿಂದ ಕೆಳಗಿಳಿಯಬೇಕಾಯಿತು.   


ಭಾರತೀಯ ಅಭಿಮಾನಿಗಳು ಆಸ್ಟ್ರೇಲಿಯಾ ಕ್ರಿಕೆಟಿಗರನ್ನು ತುಂಬಾ ಇಷ್ಟಪಡುತ್ತಾರೆ. ಕೆಲ ವರ್ಷಗಳ ಹಿಂದೆ ಆಸೀಸ್ ಮಾಜಿ ವೇಗಿ ಬ್ರೆಟ್ ಲೀ ಒಂದು ಸಾಂಗ್ ರಿಲೀಸ್ ಮಾಡಿದ್ದರಲ್ಲದೆ, ಸಿನಿಮಾದಲ್ಲಿಯೂ ನಟಿಸಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.