ನವದೆಹಲಿ: ಟೋಕಿಯೊ ಒಲಂಪಿಕ್ಸ್ ಕ್ರೀಟಾಕೂಟದಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಸೈಖೋಮ್ ಮೀರಾಬಾಯಿ ಚಾನು ಈಗ ದೇಶದ ಮನೆಮಾತಾಗಿದ್ದಾರೆ. ಅವರ ಸಾಧನೆಗೆ ಇಡೀ ದೇಶವೇ ಸಲಾಂ ಎಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು ಅನೇಕ ಗಣ್ಯರು ಮೀರಾಬಾಯಿಯವರ ಗುಣಗಾಣ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಜಪಾನ್ ನ ಟೋಕಿಯೊ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಡೆದ ಮಹಿಳಾ 49 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ವೇಟ್ ಲಿಫ್ಟರ್ ಮೀರಾಬಾಯಿ ಚಾನು(Mirabai Chanu) ಬೆಳ್ಳಿ ಪದಕ ಗೆಲ್ಲುವ ಮೂಲಕ ಶುಭಾರಂಭ ಮಾಡಿದ್ದರು. ಪದಕ ಗೆದ್ದು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಅವರಿಗೆ ಭಾರೀ ಬಿಗಿ ಭದ್ರತೆ ನಡುವೆ ಅದ್ದೂರಿ ಸ್ವಾಗತ ಕೋರಲಾಗಿತ್ತು. ಅವರ ತವರು ರಾಜ್ಯ ಇಂಪಾಲ್ ಗೆ ಆಗಮಿಸಿದ್ದ ವೇಳೆ ಬೆಳ್ಳಿ ಗೆದ್ದ ಮೀರಾಬಾಯಿಯವರಿಗೆ ಚಿನ್ನದಂತಹ ಸ್ವಾಗತ ಸಿಕ್ಕಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾ (Social Media) ದಲ್ಲಿ ಸಖತ್ ವೈರಲ್ ಆಗಿದೆ.


Tokyo Olympics 2021: ಸ್ಪೇನ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಭಾರತ ಹಾಕಿ ತಂಡ


ಹೌದು, 26 ವರ್ಷದ ಮೀರಾಬಾಯಿ ಚಾನು ಅವರಿಗೆ ಇಂಪಾಲ್ (Imphal) ನಲ್ಲಿ ಅದ್ದೂರಿ ಸ್ವಾಗತ ಸಿಕ್ಕಿದೆ. ಬಿಜೆಪಿ ಹಿರಿಯ ನಾಯಕ ನವೀನ್ ಕುಮಾರ್ ಜಿಂದಾಲ್ ತಮ್ಮ ಟ್ವೀಟರ್ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿದ್ದಾರೆ. ‘ನೀವು ಏನಾದರೂ ದೊಡ್ಡದನ್ನು ಸಾಧಿಸಿದರೆ ರಾಜರಾಗುತ್ತಿರಿ, ಇಂಫಾಲ್‌ನಲ್ಲಿ ಮೀರಾಬಾಯಿ ಚಾನು ಅವರಿಗೆ ದೊರೆತ ಆತ್ಮೀಯ ಸ್ವಾಗತ’ ಎಂದು ಕ್ಯಾಪ್ಶನ್ ನೀಡಿದ್ದಾರೆ. 


ಈ ವಿಡಿಯೋದಲ್ಲಿ ಇಂಫಾಲ್‌ನ ರಸ್ತೆಯ ಒಂದು ಬದಿ, ಒಂದರ ಹಿಂದೊಂದರಂತೆ ಸಾಲುಗಟ್ಟಿ ಕಾರುಗಳು ಬರುತ್ತಿವೆ. ಈ ವೇಳೆ ಸಾವಿರಾರು ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತುಕೊಂಡು ನೋಡುತ್ತಿದ್ದರು. ಮುಂಭಾಗದ ಕಾರೊಂದರಲ್ಲಿ ಕುಳಿತಿದ್ದ ಮೀರಾಬಾಯಿ ಚಾನು(Mirabai Chanu)ನೆರೆದಿದ್ದ ಜನರತ್ತ ಕೈಬಿಸುತ್ತಿದ್ದಾರೆ. ಜನರು ಮೀರಾಬಾಯಿ... ಮೀರಾಬಾಯಿ... ಎಂದು ಕೂಗುತ್ತಾ ಹರ್ಷೋದ್ಗಾರ ಮೊಳಗಿಸಿದ್ದಾರೆ. ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಬೆಳ್ಳಿ ಗೆದ್ದು ದೇಶದ ಕೀರ್ತಿ ಪತಾಕೆ ಹಾರಿಸಿದ ಮೀರಾಬಾಯಿಗೆ ಚಿನ್ನದಂತಹ ಸ್ವಾಗತ ಸಿಕ್ಕಿದೆ.


ಇದನ್ನೂ ಓದಿ: Tokyo Olympics 2020: ಎನ್‌ವೈ ಚೆಯುಂಗ್ ವಿರುದ್ಧ ಸತತ ಆರನೇ ಗೆಲುವು ಸಾಧಿಸಿದ ಪಿ.ವಿ ಸಿಂಧು


ಟೋಕಿಯೊ ಒಲಂಪಿಕ್ಸ್(Tokyo Olympic 2020) ನಲ್ಲಿ ಬೆಳ್ಳಿ ಗೆದ್ದು ಇಡೀ ದೇಶಕ್ಕೆ ಹೆಮ್ಮೆ ತಂದುಕೊಟ್ಟಿರುವ ತಮ್ಮ ತವರಿನ ಪುತ್ರಿಗೆ ಇಂಪಾಲ್ ದ ಜನತೆ ಭರ್ಜರಿ ಸ್ವಾಗತ ನೀಡಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾವಿರಾರು ಜನರು ವೀಕ್ಷಿಸಿದ್ದು, ದೇಶದ ಹೆಮ್ಮೆಯ ಪುತ್ರಿಯ ಸಾಧನೆಯನ್ನು ಕೊಂಡಾಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ