ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್(IPL) ಅಧ್ಯಕ್ಷ ರಾಜೀವ್ ಶುಕ್ಲಾ ಅವರು ಟೀಮ್ ಇಂಡಿಯಾದ ಶೆಡ್ಯೂಲ್ ಅನ್ನು ಟೀಕಿಸುತ್ತಾ,  ಆಡಳಿತಗಾರರ ಸಮಿತಿಯನ್ನು ದೂಷಿಸಿದರು. ಟೀಮ್ ಇಂಡಿಯಾ ಶೆಡ್ಯೂಲ್ ಮಾಡುವಾಗ ಆಟಗಾರರ ಹಿತಾಸಕ್ತಿಗಳನ್ನು ಗಣನೆಗೆ ತೆಗೆದುಕೊಳ್ಳಬೇಕು ಎಂದು ಶುಕ್ಲಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಶುಕ್ರವಾರ ಬಿಸಿಸಿಐ ಅನ್ನು ಟ್ಯಾಗ್ ಮಾಡಿ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಶುಕ್ಲಾ, "ಶೆಡ್ಯೂಲ್ ಬಹಳ ಟೈಟ್ ಆಗಿದೆ ಎಂಬ  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ (Virat Kohli) ಅವರ ಹೇಳಿಕೆಯನ್ನು ಒಪ್ಪುತ್ತೇನೆ. ಸರಣಿ ಮತ್ತು ಪಂದ್ಯಗಳು ಒಂದರ ನಂತರ ಒಂದರಂತೆ ಆಗಬಾರದು. ಆಟಗಾರರು ಸ್ವಲ್ಪ ವಿಶ್ರಾಂತಿ ಪಡೆಯಬೇಕು, ಜೊತೆಗೆ ಪರಿಸ್ಥಿತಿಗೆ ಬರಲು ಸಾಕಷ್ಟು ಸಮಯವನ್ನು ಪಡೆಯಬೇಕು. ವೇಳಾಪಟ್ಟಿಯನ್ನು ನಿರ್ಧರಿಸುವಾಗ ಸಿಒಎ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು" ಎಂದು ಹೇಳಿದ್ದಾರೆ.


ನ್ಯೂಜಿಲೆಂಡ್ ವಿರುದ್ಧದ ಕಾರ್ಯಕ್ರಮದ ವೇಳಾಪಟ್ಟಿಯ ಬಗ್ಗೆ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ ನಂತರ ಶುಕ್ಲಾ ಅವರ ಹೇಳಿಕೆ ಬಂದಿರುವುದು ಗಮನಾರ್ಹವಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದ ಮರುದಿನವೇ ಟೀಂ ಇಂಡಿಯಾ ಬೆಂಗಳೂರಿನಿಂದ ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳಬೇಕಾಯಿತು.


ವಿರಾಟ್ ಕೊಹ್ಲಿ ನ್ಯೂಜಿಲೆಂಡ್‌ನಲ್ಲಿ, "ಎರಡು ಸರಣಿಗಳ ನಡುವಿನ ಅಂತರವು ಕಿರಿದಾಗುತ್ತಿರುವ ರೀತಿ, ನಾವು ನೇರವಾಗಿ ಕ್ರೀಡಾಂಗಣಕ್ಕೆ ಇಳಿಯಬೇಕಾದ ದಿನವು ದೂರವಿಲ್ಲ ಎಂದು ತೋರುತ್ತದೆ. ಏಳೂವರೆ ಗಂಟೆಗಳ ಹೊಂದಾಣಿಕೆ ಮಾಡುವುದು ಕಷ್ಟ. ಭವಿಷ್ಯದಲ್ಲಿ ಈ ಬಗ್ಗೆ ಗಮನಹರಿಸಲಾಗುವುದು ಎಂದು ಆಶಿಸುತ್ತೇವೆ" ಎಂದಿದ್ದರು.


ಈ ಕುರಿತು ಬಿಸಿಸಿಐ ಅಧಿಕಾರಿ ವಿರಾಟ್ ಕೊಹ್ಲಿ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡುವ ಮೊದಲು ಬಿಸಿಸಿಐ ಜೊತೆ ಮಾತನಾಡಬೇಕಿತ್ತು ಎಂದು ಹೇಳಿದರು.