ನವದೆಹಲಿ: ವಿರಾಟ್ ಕೊಹ್ಲಿ ಅದ್ಬುತ ನಾಯಕ ಆದರೆ ಒತ್ತಡ ಪರಿಸ್ಥಿತಿ ನಿಭಾಯಿಸಲು ಭಾರತ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿ ಅಗತ್ಯವೆಂದು ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಶೇನ್ ವಾರ್ನ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಆಸ್ಟ್ರೇಲಿಯಾ ವಿರುದ್ಧ ಮೊಹಾಲಿಯಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಧೋನಿ ಅವರ ಅನುಪಸ್ಥಿತಿಯಲ್ಲಿ ಭಾರತ ತಂಡ ಬೃಹತ್ ಮೊತ್ತ ಗಳಿಸಿದರು ಸಹಿತ ಗೆಲುವು ಸಾಧಿಸುವಲ್ಲಿ ವಿಫಲವಾಗಿತ್ತು ಈ ಹಿನ್ನಲೆಯಲ್ಲಿ ಈಗ ವಾರ್ನ್ ಅವರ ಹೇಳಿಕೆ ಬಂದಿದೆ.



ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಶೇನ್ ವಾರ್ನ್  ಚೆನ್ನಾಗಿ ನಡೆಯುತ್ತಿರುವಾಗ ತಂಡವನ್ನು ಮುನ್ನಡೆಸುವುದು ಸುಲಭ ಆದರೆ ಕಠಿಣ ಸಂದರ್ಭಗಳಲ್ಲಿ ತಂಡವು ಗೆಲುವು ಸಾಧಿಸಲು ಧೋನಿಯಂತಹ ಅನುಭವಿ ಆಟಗಾರರ ಗತ್ಯವಿದೆ ಅಗತ್ಯವಿದೆ ಎಂದರು. 



"ಎಂಎಸ್ ಧೋನಿ ಒಬ್ಬ ಶ್ರೇಷ್ಠ ಆಟಗಾರನಾಗಿದ್ದು, ತಂಡಕ್ಕೆ ಅಗತ್ಯವಿದ್ದಾಗ ಅವರು ಯಾವಾಗ ಬೇಕಾದರೂ ಬ್ಯಾಟ್ ಮಾಡಬಹುದು, ಅವರು ಸುಲಭವಾಗಿ ಹೊಂದಿಕೊಳ್ಳಬಲ್ಲರು,ಅವರು ಟೀಕಿಸುವವರಿಗೆ ಅವರು ಏನು ಮಾತನಾಡುತ್ತಿದ್ದಾರೆಂದೇ ತಿಳಿದಿಲ್ಲ ಎಂದರು. ವಿರಾಟ್ ಕೊಹ್ಲಿ ಅವರಿಗೆ ಧೋನಿ ಅನುಭವ ನೆರವಿಗೆ ಬರುತ್ತದೆ ಎಂದು ಶೇನ್ ವಾರ್ನ್ ತಿಳಿಸಿದರು.


ಭಾರತ ಮತ್ತು ಇಂಗ್ಲೆಂಡ್ ತಂಡಗಳು 50 ಓವರ್ ಮಾದರಿಯ ಕ್ರಿಕೆಟ್ ನಲ್ಲಿ ಮೆಚ್ಚಿನ ತಂಡಗಳಾಗಿವೆ ಆದರೆ ಅಂತಿಮವಾಗಿ ಆಸ್ಟ್ರೇಲಿಯಾ ತಂಡವು ಗೆಲುವು ಸಾಧಿಸಲಿದೆ ಎಂದು ವಾರ್ನ್ ಹೇಳಿದರು