Virat Kohli Harpreet Brar Viral Video: ಮೈದಾನದಲ್ಲಿ ವಿರಾಟ್ ಕೊಹ್ಲಿ ಮತ್ತು ಹರ್‌ಪ್ರೀತ್ ಬ್ರಾರ್ ನಡುವೆ ವಾಗ್ವಾದ ನಡೆದಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ 2024 ರ ಆರನೇ ಪಂದ್ಯದಲ್ಲಿ ಈ ಘಟನೆ ನಡೆದಿದೆ.


COMMERCIAL BREAK
SCROLL TO CONTINUE READING

ಹರ್‌ಪ್ರೀತ್ ಬ್ರಾರ್ ಮೂರನೇ ಓವರ್ ಅನ್ನು ಪ್ರಾರಂಭಿಸಲು ಆತುರದಲ್ಲಿದ್ದರು. ಆಗ ಆರ್‌ಸಿಬಿ ಬ್ಯಾಟ್ಸ್‌ಮನ್ ವಿರಾಟ್‌ ಕೊಹ್ಲಿ ಅವರನ್ನು ಅಡ್ಡಿಪಡಿಸಿದರು. ಆರ್‌ಸಿಬಿ ಗೆಲುವಿಗೆ 8 ಓವರ್‌ಗಳಲ್ಲಿ 74 ರನ್‌ಗಳ ಅಗತ್ಯವಿತ್ತು. ಈ ಸಂದರ್ಭದ ವಿಡಿಯೋ ವೈರಲ್‌ ಆಗಿದೆ.


ಇದನ್ನೂ ಓದಿ: ಐಪಿಎಲ್‌ನಲ್ಲಿ ಅರ್ಧಶತಕ ಪೂರೈಸಿ ಹೊಸ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ 


ಆರ್‌ಸಿಬಿ ಬ್ಯಾಟಿಂಗ್ ಇನಿಂಗ್ಸ್‌ನ 13ನೇ ಓವರ್‌ ಆರಂಭಕ್ಕೂ ಮುನ್ನ ನಡೆದ ಘನಟೆಯ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. ಬ್ರಾರ್ ಅವರು ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಬೌಲಿಂಗ್ ಮಾಡಲು ತಯಾರಿ ನಡೆಸುತ್ತಿದ್ದರು. ಈ ವೇಳೆ ವಿರಾಟ್‌ ಕೊಹ್ಲಿ ನಾನ್‌ಸ್ಟ್ರೈಕರ್‌ನ ತುದಿಯಲ್ಲಿದ್ದರು. ಬ್ರಾರ್‌ಗೆ “Ruka jaa B******, saans to lene de” ಎಂದು ಹೇಳಿದ್ದಾರೆ. ಇದರ ಅರ್ಥ "ತಡೆಯೋ B******, ಉಸಿರಾಡೋಕಾದ್ರೂ ಟೈಮ್‌ ಕೊಡು" ಎಂದು ಬ್ರಾರ್‌ಗೆ ಕೊಹ್ಲಿ ಹೇಳಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. 


 



 


ವಿರಾಟ್ ಕೊಹ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಅದ್ಭುತ ಇನ್ನಿಂಗ್ಸ್ ಆಡಿದರು. ಕೊಹ್ಲಿ ಕೇವಲ 49 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 77 ರನ್ ಗಳಿಸಿದ್ದಾರೆ. ಕೊಹ್ಲಿ ಆಟದ ನೆರವಿನಿಂದ ಆರ್‌ಸಿಬಿ 19.2 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 177 ರನ್‌ಗಳ ಗುರಿಯನ್ನು ಸಾಧಿಸಿತು. ದಿನೇಶ್ ಕಾರ್ತಿಕ್ ಅಜೇಯ 28 ರನ್ ಗಳಿಸಿ RCB ಗೆ ಸುಲಭ ಜಯ ತಂದುಕೊಟ್ಟರು.


ಇದನ್ನೂ ಓದಿ: RCB ಗೆಲುವಿನ ಬಳಿಕ ಮಡದಿ-ಮಕ್ಕಳೊಂದಿಗೆ ವಿರಾಟ್ ಕೊಹ್ಲಿ ವಿಡಿಯೋ ಕಾಲ್: ವಾಚ್ ಕ್ಯೂಟ್ ವಿಡಿಯೋ 


ಪಂಜಾಬ್ ಕಿಂಗ್ಸ್ ಸ್ಪಿನ್ನರ್ ಹರ್ಪ್ರೀತ್ ಬ್ರಾರ್ ಅವರ ಬೌಲಿಂಗ್ ಪ್ರದರ್ಶನವು ಸಾಕಷ್ಟು ಶ್ಲಾಘನೀಯವಾಗಿತ್ತು. ಎಡಗೈ ಸ್ಪಿನ್ನರ್ ತಮ್ಮ 4 ಓವರ್‌ಗಳಲ್ಲಿ ಕೇವಲ 13 ರನ್‌ಗಳನ್ನು ನೀಡಿ, ಎರಡು ವಿಕೆಟ್ ಪಡೆದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.