Virat Kohli : ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿ ಆಗಸ್ಟ್ 27 ರಿಂದ ಪ್ರಾರಂಭವಾಗುವ ಏಷ್ಯಾಕಪ್‌ಗೆ ಮುಂಚಿತವಾಗಿ, ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಅವರು ತಮ್ಮ ಶಾಟ್ ಆಯ್ಕೆಯನ್ನು ಬದಲಾಯಿಸಿದ್ದಾರೆ. ಅನೇಕ ಸುಧಾರಣೆಗಳನ್ನು ಮಾಡಿಕೊಂಡಿದ್ದಾರೆ. ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ಕೊನೆಯ ಬಾರಿಗೆ ಆಡಿದ ನಂತರ ಕೊಹ್ಲಿ ಸುಮಾರು ಒಂದು ತಿಂಗಳ ಕಾಲ ಕ್ರಿಕೆಟ್‌ನಿಂದ ವಿಶ್ರಾಂತಿ ತೆಗೆದುಕೊಂಡರು. ಇದೀಗ ಅವರು ಟಿ20 ಮಾದರಿಯಲ್ಲಿ ಏಷ್ಯಾಕಪ್‌ನಿಂದ ಭಾರತ ತಂಡಕ್ಕೆ ಮರಳುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಚೊಚ್ಚಲ ಬಾರಿಗೆ ಮೌನ ಮುರಿದ ವಿರಾಟ್ ಕೊಹ್ಲಿ


ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆ ವಿರುದ್ಧದ ವೈಟ್-ಬಾಲ್ ಸರಣಿಯಿಂದ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ನವೆಂಬರ್ 2019 ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಗಳಿಸದ ಕಾರಣ ಕೊಹ್ಲಿ ದೀರ್ಘಕಾಲದವರೆಗೆ ಕಳಪೆ ಫಾರ್ಮ್‌ನಲ್ಲಿ ಹೋರಾಡುತ್ತಿದ್ದಾರೆ. ಆಗಸ್ಟ್ 28 ರಂದು ದುಬೈನಲ್ಲಿ ಪಾಕಿಸ್ತಾನ ವಿರುದ್ಧ ಏಷ್ಯಾಕಪ್‌ನ ಮೊದಲ ಪಂದ್ಯದಲ್ಲಿ ಕೊಹ್ಲಿ ಭಾರತದ ಪ್ಲೇಯಿಂಗ್ ಇಲೆವೆನ್‌ಗೆ ಮರಳಿದ್ದಾರೆ, ಇದು ಕೊಹ್ಲಿಗೆ 100 ನೇ ಟಿ20 ಪಂದ್ಯವಾಗಲಿದೆ.


ಇದನ್ನೂ ಓದಿ : ICC ODI Rankings : ಐಸಿಸಿ ODI ರಾಂಕಿಂಗ್ ಪಟ್ಟಿ ಪ್ರಕಟ : ಭರ್ಜರಿಯಾಗಿ ಮಿಂಚಿದ ಶುಭಮನ್ ಗಿಲ್!


ಇದು ಕಳಪೆ ಫಾರ್ಮ್‌ಗೆ ಕಾರಣ


ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನಡೆದ 'ಗೇಮ್ ಪ್ಲಾನ್' ಕಾರ್ಯಕ್ರಮದಲ್ಲಿ ಮಾತನಾಡಿದ ಕೊಹ್ಲಿ, 'ಇಂಗ್ಲೆಂಡ್‌ನಲ್ಲಿ ನಡೆದದ್ದೇ ಬೇರೆ, ನಾನು ನನ್ನ ಶಾಟ್ ಆಯ್ಕೆಯನ್ನು ಸುಧಾರಿಸಿದೆ. ಈಗ ನನಗೆ ಬ್ಯಾಟಿಂಗ್‌ನಲ್ಲಿ ಯಾವುದೇ ತೊಂದರೆಯಾಗಿಲ್ಲ ಎಂದು ಕೊಹ್ಲಿ ದೀರ್ಘಕಾಲದವರೆಗಿನ ಕಳಪೆ ಫಾರ್ಮ್‌ನಲ್ಲಿರುವ ಈ ಹಂತದ ಪ್ರಾಮುಖ್ಯತೆಯನ್ನು ವಿವರಿಸಿದರು. ಇದು ಆಟದ ಜೊತೆಗೆ ಜೀವನದ ಬಗ್ಗೆ ಅವರ ದೃಷ್ಟಿಕೋನವನ್ನು ಸುಧಾರಿಸಿದೆ ಎಂದು ಹೇಳಿದರು.


ಈ ಹಂತದಿಂದ ಹೊರಬನ್ನಿ


ಇನ್ನು ಮುಂದುವರೆದು ಮಾತನಾಡಿದ ವಿರಾಟ್ ಕೊಹ್ಲಿ, 'ನಾನು ಎಲ್ಲಿಯವರೆಗೆ ಉತ್ತಮವಾಗಿ ಕಾರ್ಯನಿರ್ವಹಿಸಲು ನೋಡುತ್ತೇನೋ ಅಲ್ಲಿಯವರೆಗೆ, ಏರಿಳಿತಗಳು ಇರುತ್ತವೆ ಎಂದು ನನಗೆ ಗೊತ್ತು. ನಾನು ಈ ಹಂತದಿಂದ ಹೊರಬಂದಾಗ, ನಾನು ಎಷ್ಟು ಸ್ಥಿರವಾಗಿರಬಹುದು ಎಂದು ನನಗೆ ತಿಳಿದಿದೆ. ನನ್ನ ಅನುಭವಗಳು ನನಗೆ ಮುಖ್ಯ ಎಂದು ಹೇಳಿದ್ದಾರೆ.


ಇದನ್ನೂ ಓದಿ : ವಿರಾಟ್ ಮತ್ತು ಬಾಬರ್ ಇಬ್ಬರಲ್ಲಿ ಏಷ್ಯಾದ ಶ್ರೇಷ್ಠ ಬ್ಯಾಟ್ಸ್‌ಮನ್ ಯಾರು? ಅಂಕಿ-ಅಂಶಗಳು ಏನು ಹೇಳುತ್ತೆ?


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.