ಏಷ್ಯಾ ಕಪ್ 2022 ರಲ್ಲಿ ತಮ್ಮ ಎರಡೂವರೆ ವರ್ಷಗಳ ಶತಕದ ಬರವನ್ನು ಕೊನೆಗೊಳಿಸಿದ ಸ್ಟಾರ್ ಇಂಡಿಯಾ ಬ್ಯಾಟರ್ ವಿರಾಟ್ ಕೊಹ್ಲಿ, ಇಡೀ ಪಂದ್ಯಾವಳಿಯಲ್ಲಿ ಸ್ಮರಣೀಯ ಹಂತವನ್ನು ತಲುಪಿದ್ದಾರೆ. ಇದೀಗ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ತವರಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ಮತ್ತು ತಮ್ಮ ವೃತ್ತಿಜೀವನದ ಮತ್ತೊಂದು ಮೈಲಿಗಲ್ಲು ಸಾಧಿಸಲು ಸಜ್ಜಾಗಿದ್ದಾರೆ ಎನ್ನಬಹುದು. ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಹಿಂದಿಕ್ಕಲು ಅವರು ಕೇವಲ 207 ರನ್‌ಗಳ ದೂರದಲ್ಲಿದ್ದಾರೆ. ಒಂದು ವೇಳೆ ಈ ಸಾಧನೆ ಮಾಡಿದರೆ ಭಾರತದ ಎಲ್ಲಾ ಸ್ವರೂಪಗಳಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ಹೊರ ಹೊಮ್ಮಲಿದ್ದಾರೆ. ಈ ಅಂಕವನ್ನು ಸಾಧಿಸಿದಾಗ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿಯೂ ಕಾಣಿಸಿಕೊಳ್ಳಲಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ICC New Rules: October 1 ರಿಂದ ಕ್ರಿಕೆಟ್ ನ ಈ ನಿಯಮಗಳು ಬದಲಾಗುತ್ತಿವೆ, ಐಸಿಸಿ ಘೋಷಣೆ


ಭಾರತದ ಶ್ರೇಷ್ಠ ರಾಹುಲ್ ದ್ರಾವಿಡ್ ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆರನೇ ಮತ್ತು ಭಾರತದ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. 509 ಪಂದ್ಯಗಳಲ್ಲಿ, ಅವರು 605 ಇನ್ನಿಂಗ್ಸ್‌ಗಳಲ್ಲಿ 45.41 ಸರಾಸರಿಯಲ್ಲಿ 24,208 ರನ್ ಗಳಿಸಿದ್ದಾರೆ. ಅವರು ತಮ್ಮ ವೃತ್ತಿಜೀವನದಲ್ಲಿ 48 ಶತಕಗಳು ಮತ್ತು 146 ಅರ್ಧ ಶತಕಗಳನ್ನು ಗಳಿಸಿದ್ದು, ವೃತ್ತಿಜೀವನದ ಅತ್ಯುತ್ತಮ ಸ್ಕೋರ್ 270 ರನ್ ಬಾರಿಸಿದ್ದಾರೆ.


ಇದುವರೆಗೆ 478 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಕೊಹ್ಲಿ 24,002 ರನ್ ಗಳಿಸಿದ್ದಾರೆ. ODI ಸ್ವರೂಪದಲ್ಲಿ 12,344 ರನ್‌ಗಳು ಗಳಿಸಿದ್ದಾರೆ. ಇನ್ನು ಸುದೀರ್ಘ ಸ್ವರೂಪದಲ್ಲಿ 8,074 ರನ್‌ಗಳನ್ನು ಹೊಂದಿದ್ದು,  ಟಿ20ಯಲ್ಲಿ 3,584 ರನ್ ಗಳಿಸಿದ್ದಾರೆ.


ಬಲಗೈ ಬ್ಯಾಟ್ಸ್ ಮನ್ ಕೊಹ್ಲಿ ಕೊನೆಯದಾಗಿ ನವೆಂಬರ್ 2019 ರಲ್ಲಿ ಬಾಂಗ್ಲಾದೇಶ ವಿರುದ್ಧದ ಡೇ ಆಂಡ್ ನೈಟ್ ಟೆಸ್ಟ್‌ನಲ್ಲಿ ಶತಕ ಗಳಿಸಿದ್ದರು. ನಂತರ ಅವರು ತಮ್ಮ ಮುಂದಿನ ಶತಕವನ್ನು ದಾಖಲಿಸುವ ಮೊದಲು ಸುಮಾರು ಮೂರು ವರ್ಷಗಳ ಅಂತರ ಕಾಯ್ದುಕೊಂಡರು.


ಮೊಹಾಲಿಯಲ್ಲಿ ಇಂದು ಸಂಜೆ ಆಸ್ಟ್ರೇಲಿಯಾ ವಿರುದ್ಧ ಭಾರತ ಮೈದಾನಕ್ಕಿಳಿಯಲಿದ್ದು, ಕೊಹ್ಲಿ ತಮ್ಮ ಉತ್ತಮ ಫಾರ್ಮ್ ಅನ್ನು ಮುಂದುವರಿಸಲು ಎದುರು ನೋಡುತ್ತಿದ್ದಾರೆ.  


ಇದನ್ನೂ ಓದಿ: IND vs AUS T20: ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯಲಿದೆ ಭಾರತ: ಪಂತ್ ಗಿಂತ ಕಾರ್ತಿಕ್ ಗೆ ಹೆಚ್ಚು


ಇದಕ್ಕೂ ಮೊದಲು, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು ಸಚಿನ್ ತೆಂಡೂಲ್ಕರ್ ಅವರ 100 ಅಂತರಾಷ್ಟ್ರೀಯ ಶತಕಗಳ ಸಾಧನೆಯನ್ನು ಮೀರಿಸುವುದು ವಿರಾಟ್ ಕೊಹ್ಲಿಗೆ "ಸಾಧ್ಯ" ಎಂದು ಹೇಳಿದ್ದರು,


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.