IND vs AUS T20: ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯಲಿದೆ ಭಾರತ: ಪಂತ್ ಗಿಂತ ಕಾರ್ತಿಕ್ ಗೆ ಹೆಚ್ಚು ಆದ್ಯತೆ!

ಪಂದ್ಯಗಳನ್ನು ಗೆಲ್ಲುವುದರ ಜೊತೆಗೆ ಈ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ T20 ವಿಶ್ವಕಪ್‌ಗೆ ಪ್ಲೇಯಿಂಗ್ XI ಅನ್ನು ಹುಡುಕುವ ಪ್ರಯತ್ನದಲ್ಲಿರುವ ಎರಡೂ ತಂಡಗಳಿಗೆ ಈ ಸರಣಿ ನಿರ್ಣಾಯಕವಾಗಲಿದೆ

Written by - Bhavishya Shetty | Last Updated : Sep 20, 2022, 05:30 PM IST
    • T20I ಸರಣಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿ
    • ಇಂದಿನಿಂದ ಪ್ರಾರಂಭವಾಗುವ ಮೂರು ಪಂದ್ಯಗಳ T20I ಸರಣಿ
    • ಭಾರತದ ಬಗ್ಗೆ ಹೇಳುವುದಾದರೆ, ಬ್ಯಾಟಿಂಗ್ ವಿಭಾಗ ಉತ್ತಮವಾಗಿ ಕಾಣುತ್ತದೆ
IND vs AUS T20: ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯಲಿದೆ ಭಾರತ: ಪಂತ್ ಗಿಂತ ಕಾರ್ತಿಕ್ ಗೆ ಹೆಚ್ಚು ಆದ್ಯತೆ!  title=
India

ಇಂದಿನಿಂದ ಪ್ರಾರಂಭವಾಗುವ ಮೂರು ಪಂದ್ಯಗಳ T20I ಸರಣಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ. ಮೊದಲ ಪಂದ್ಯವು ಮೊಹಾಲಿಯಲ್ಲಿ ನಡೆಯಲಿದ್ದು, ಉಳಿದ ಎರಡು ಪಂದ್ಯಗಳು ನಾಗ್ಪುರ (ಸೆಪ್ಟೆಂಬರ್ 23) ಮತ್ತು ಹೈದರಾಬಾದ್ (ಸೆಪ್ಟೆಂಬರ್ 25) ನಲ್ಲಿ ನಡೆಯಲಿವೆ. 

ಇದನ್ನೂ ಓದಿ: IND vs AUS: ಟೀಂ ಇಂಡಿಯಾ ಈ ಸಮಸ್ಯೆ ಸರಿಪಡಿಸದಿದ್ದರೆ ಆಸ್ಟ್ರೇಲಿಯಾ ವಿರುದ್ಧ ಸೋಲೋದು ಖಂಡಿತ!

ಪಂದ್ಯಗಳನ್ನು ಗೆಲ್ಲುವುದರ ಜೊತೆಗೆ ಈ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ T20 ವಿಶ್ವಕಪ್‌ಗೆ ಪ್ಲೇಯಿಂಗ್ XI ಅನ್ನು ಹುಡುಕುವ ಪ್ರಯತ್ನದಲ್ಲಿರುವ ಎರಡೂ ತಂಡಗಳಿಗೆ ಈ ಸರಣಿ ನಿರ್ಣಾಯಕವಾಗಲಿದೆ

ಭಾರತದ ಬಗ್ಗೆ ಹೇಳುವುದಾದರೆ, ಬ್ಯಾಟಿಂಗ್ ವಿಭಾಗ ಉತ್ತಮವಾಗಿ ಕಾಣುತ್ತದೆ. ಬೌಲಿಂಗ್ ಕೂಡ ಹೆಚ್ಚು ಕಡಿಮೆ ಚೆನ್ನಾಗಿದೆ. ಆದರೆ ವಿಕೆಟ್‌ ಕೀಪರ್‌ಗಳಾದ ರಿಷಬ್ ಪಂತ್ ಮತ್ತು ದಿನೇಶ್ ಕಾರ್ತಿಕ್ ನಡುವಿನ ಆಯ್ಕೆಯಲ್ಲಿ ಆಯ್ಕೆದಾರರಿಗೆ ದೊಡ್ಡ ಸಂದಿಗ್ಧತೆ ಉಂಟಾದಂತೆ ಕಾಣುತ್ತದೆ. ಟೀಮ್ ಮ್ಯಾನೇಜ್‌ಮೆಂಟ್ ಇತ್ತೀಚಿನ ದಿನಗಳಲ್ಲಿ ಕಾರ್ತಿಕ್‌ಗೆ ಉತ್ತಮ ಗಮನವನ್ನು ನೀಡುತ್ತಿರುವಂತೆ ಕಾಣುತ್ತಿದೆ. ಆದರೆ ಬ್ಯಾಟಿಂಗ್ ಅವಕಾಶಗಳ ಕೊರತೆಯು ಆಟಗಾರನ ಫಾರ್ಮ್ ಅನ್ನು ನಿರ್ಧಾರ ಮಾಡುವಲ್ಲಿ ಅನುಮಾನಿಸುವಂತೆ ಮಾಡಿದೆ.

ಏನೇ ಆಗಲಿ, ಕಾರ್ತಿಕ್ ಖಂಡಿತವಾಗಿಯೂ ಪಂತ್‌ನ ದೊಡ್ಡ ಪ್ರತಿಸ್ಪರ್ಧಿಯಾಗಿದ್ದಾರೆ. ಇಲ್ಲಿಂದ ಇಬ್ಬರಲ್ಲಿ ಯಾರಾದರೂ ತಮ್ಮ ಪ್ರದರ್ಶನದಲ್ಲಿ ವಿಫಲರಾದರೆ, ಅದು ಇನ್ನೊಬ್ಬರಿಗೆ ಸ್ಥಾನ ನೀಡಿದಂತೆ ಸರಿ.

ಇದನ್ನೂ ಓದಿ: ICC Rules Changes: ಟಿ-20 ವಿಶ್ವಕಪ್‌ಗೂ ಮುನ್ನವೇ ಆಘಾತಕಾರಿ ನಿರ್ಧಾರ ಕೈಗೊಂಡ ಐಸಿಸಿ..!

ಮೊದಲ T20I ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಸಂಭಾವ್ಯ ಪ್ಲೇಯಿಂಗ್ XI ಹೀಗಿದೆ:

ಕೆಎಲ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಾಹಲ್,  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News