ನವದೆಹಲಿ:  ಸೌತಾಂಪ್ಟನ್‌ನಲ್ಲಿ ಶನಿವಾರದಂದು ಅಫ್ಘಾನಿಸ್ತಾನ ವಿರುದ್ಧ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ ಪಂದ್ಯದ ವೇಳೆ ಐಸಿಸಿ ನೀತಿ ಸಂಹಿತೆಯ 1 ನೇ ಹಂತವನ್ನು ಉಲ್ಲಂಘಿಸಿದ್ದಕ್ಕಾಗಿ ಭಾರತದ ನಾಯಕ ವಿರಾಟ್ ಕೊಹ್ಲಿಗೆ ಅವರ ಪಂದ್ಯದ ಶುಲ್ಕದ ಶೇಕಡಾ 25 ರಷ್ಟು ದಂಡ ವಿಧಿಸಲಾಗಿದೆ. 


COMMERCIAL BREAK
SCROLL TO CONTINUE READING

ಆಘ್ಘಾನಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಅಂಪೈರ್ ಗೆ ಅತಿಯಾದ ಮನವಿ ಮಾಡಿದ ಹಿನ್ನಲೆಯಲ್ಲಿ, ಈಗ ಐಸಿಸಿ ದಂಡ ವಿಧಿಸಿದೆ. ಅಫ್ಘಾನಿಸ್ತಾನ ಇನ್ನಿಂಗ್ಸ್‌ನ 29 ನೇ ಓವರ್‌ನಲ್ಲಿ ಎಲ್‌ಬಿಡಬ್ಲ್ಯು ವಿಚಾರವಾಗಿ ಮನವಿ ಮಾಡುವಾಗ ಕೊಹ್ಲಿ ಅಂಪೈರ್ ಅಲೀಮ್ ದಾರ್ ಕಡೆಗೆ ಆಕ್ರಮಣಕಾರಿ ರೀತಿಯಲ್ಲಿ ವರ್ತಿಸಿದ್ದರು. ಕೊಹ್ಲಿ ಎಮಿರೇಟ್ಸ್ ಐಸಿಸಿ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ಪ್ರಸ್ತಾಪಿಸಿದ ದಂಡವನ್ನು ಒಪ್ಪಿಕೊಂಡರು.


ಇದರ ಜೊತೆಗೆ, ಕೊಹ್ಲಿಯ ಶಿಸ್ತಿನ ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸೇರಿಸಲಾಗಿದೆ, ಇದು ಸೆಪ್ಟೆಂಬರ್ 2016 ರಲ್ಲಿ ಪರಿಷ್ಕೃತ ಸಂಹಿತೆಯನ್ನು ಜಾರಿಗೊಳಿಸಿದ ನಂತರದ ಎರಡನೇ ಅಪರಾಧವಾಗಿದೆ. 15 ಜನವರಿ 2018 ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಿಟೋರಿಯಾ ಟೆಸ್ಟ್ ಸಮಯದಲ್ಲಿ ಒಂದು ಡಿಮೆರಿಟ್ ಪಾಯಿಂಟ್ ಪಡೆದ ನಂತರ ಕೊಹ್ಲಿಗೆ ಈಗ ಎರಡು ಡಿಮೆರಿಟ್ ಪಾಯಿಂಟ್ ಗಳಿವೆ.


ಆನ್-ಫೀಲ್ಡ್ ನಲ್ಲಿದ್ದ ಅಂಪೈರ್ ಅಲೀಮ್ ಡಾರ್ ಮತ್ತು ರಿಚರ್ಡ್ ಇಲಿಂಗ್ವರ್ತ್, ಮೂರನೇ ಅಂಪೈರ್ ರಿಚರ್ಡ್ ಕೆಟಲ್ಬರೋ ಮತ್ತು ನಾಲ್ಕನೇ ಅಧಿಕಾರಿ ಮೈಕೆಲ್ ಗೌಗ್  ಕೊಹ್ಲಿ ವಿರುದ್ಧ ಆರೋಪಗಳನ್ನು ಮಂಡಿಸಿದರು.