India vs Bangladesh : ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ, ವಿರಾಟ್ ಕೊಹ್ಲಿಯ ಒಂದು ತಪ್ಪಿನಿಂದ ಟೀಂ ಇಂಡಿಯಾಗೆ ಇಂದು ಬಹಳಷ್ಟು ನಷ್ಟವಾಗಿದೆ. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ, ಭಾರತ ತಂಡದ ಆಡಳಿತವು ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಓಪನಿಂಗ್ ವಿರಾಟ್ ಕೊಹ್ಲಿಯನ್ನು ಕಳುಹಿಸಿತು. ಆದರೆ, ಕೊಹ್ಲಿ ಕೇವಲ 5 ರನ್ ಗಳಿಸಿ ಔಟಾದರು. ವಿರಾಟ್ ಕೊಹ್ಲಿಯನ್ನು ಓಪನಿಂಗ್ ಮಾಡಿದ್ದು ಟೀಂ ಇಂಡಿಯಾದ ದೊಡ್ಡ ತಪ್ಪು ಎಂದು ಹೇಳಲಾಗುತ್ತಿದೆ. ಎರಡನೇ ಏಕದಿನ ಪಂದ್ಯದ ವೇಳೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಗಾಯಗೊಂಡು ಪಂದ್ಯದಿಂದ ಹೊರಗುಳಿದಿದ್ದು, ನಂತರ 'ಹಿಟ್‌ಮ್ಯಾನ್' ಬದಲಿಗೆ ವಿರಾಟ್ ಕೊಹ್ಲಿಯನ್ನು ಓಪನಿಂಗ್‌ಗೆ ಕಳುಹಿಸಲಾಯಿತು.


COMMERCIAL BREAK
SCROLL TO CONTINUE READING

ಇಂದು ಕೊಹ್ಲಿಯಿಂದ ಓಪನಿಂಗ್


ಭಾರತ ತಂಡದ ಮ್ಯಾನೇಜ್‌ಮೆಂಟ್‌ಗೆ ಕೆಎಲ್ ರಾಹುಲ್ ಕೂಡ ಓಪನಿಂಗ್ ಹೋಗುವ ಅವಕಾಶವಿತ್ತು, ಆದರೆ ಉತ್ತಮ ಆರಂಭದ ನಿರೀಕ್ಷೆಯಲ್ಲಿ ಟೀಂ ಇಂಡಿಯಾ ವಿರಾಟ್ ಕೊಹ್ಲಿಯನ್ನು ಶಿಖರ್ ಧವನ್ ಅವರೊಂದಿಗೆ ಓಪನಿಂಗ್ ಮಾಡಲು ಕಳುಹಿಸಿತು. ವಿರಾಟ್ ಕೊಹ್ಲಿ ಓಪನಿಂಗ್ ಮಾಡಿದಾಗ ಟೀಂ ಇಂಡಿಯಾ ಲಾಭದ ಬದಲು ನಷ್ಟವನ್ನು ಎದುರಿಸಬೇಕಾಯಿತು. 7 ರನ್ ಗಳಿಸಿದ್ದಾಗ ವಿರಾಟ್ ರೂಪದಲ್ಲಿ ಟೀಂ ಇಂಡಿಯಾಗೆ ಮೊದಲ ಪೆಟ್ಟು ಬಿದ್ದಿತು. ವಿರಾಟ್ ಕೊಹ್ಲಿ 5 ರನ್ ಗಳಿಸಿ ಔಟಾದರು. ಬಾಂಗ್ಲಾದೇಶದ ವೇಗಿ ಇಬಾದತ್ ಹುಸೇನ್ ವಿರಾಟ್ ಕೊಹ್ಲಿ ಬೌಲ್ಡ್ ಮಾಡಿ ಪೆವಿಲಿಯನ್ ಮರಳಿದರು.


ಇದನ್ನೂ ಓದಿ : IND vs BAN : ಟೀಂ ಇಂಡಿಯಾಗೆ ಈ ಸೋಮಾರಿ ಬೌಲರ್‌ಗಳ ಕಾಟ!


ಈ ತಪ್ಪಿನಿಂದ ಟೀಂ ಇಂಡಿಯಾಗೆ ಭಾರಿ ಹೊಡೆತ


ವಿರಾಟ್ ಕೊಹ್ಲಿ ODI ಮತ್ತು ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾದಲ್ಲಿ 3 ನೇ ಸ್ಥಾನದಲ್ಲಿ ಬ್ಯಾಟ್ ಮಾಡುತ್ತಾರೆ.  ಕೊಹ್ಲಿ ತಮ್ಮ ಬ್ಯಾಟಿಂಗ್ ಕ್ರಮಾಂಕವನ್ನು ತಿದ್ದುವುದನ್ನು ಸಹಿಸುವುದಿಲ್ಲ. ಹೀಗಾಗಿ, ಭಾರತ ತಂಡದ ಮ್ಯಾನೇಜ್‌ಮೆಂಟ್ 3ನೇ ಕ್ರಮಾಂಕದಿಂದ ಕೊಹ್ಲಿಯನ್ನು ಓಪನಿಂಗ್‌ನಲ್ಲಿ ಬ್ಯಾಟಿಂಗ್‌ಗೆ ಕಳುಹಿಸಿದಾಗ ವಿರಾಟ್ ಲಯ ಹದಗೆಟ್ಟಿತು. ಕೊಹ್ಲಿಯ ಬ್ಯಾಟಿಂಗ್ ಕ್ರಮಾಂಕವನ್ನು ತಿದ್ದಿದಾಗ, ಈ ವಿಷಯ ವಿರಾಟ್ ಅವರ ಗಮನವನ್ನು ಆಟದಿಂದ ಬೇರೆಡೆಗೆ ತಿರುಗಿಸಿತು ಮತ್ತು ಅವರು ತಮ್ಮ ಆಟದ ಮೇಲಿನ ಗಮನವನ್ನು ಕಳೆದುಕೊಂಡರು. ಈ ಕಾರಣದಿಂದ ಟೀಂ ಇಂಡಿಯಾಗೆ ಉತ್ತಮ ಆರಂಭ ಪಡೆಯಲು ಸಾಧ್ಯವಾಗಲಿಲ್ಲ.


ರೋಹಿತ್ ಶರ್ಮಾ ಕೈಗೆ ಗಾಯ


ಎರಡನೇ ಏಕದಿನ ಪಂದ್ಯದಲ್ಲಿ ಕ್ಯಾಚ್ ಹಿಡಿಯಲು ಗಾಯಗೊಂಡಿದ್ದಾರೆ. ರೋಹಿತ್ ಎಡಗೈ ಹೆಬ್ಬೆರಳಿಗೆ ಗಾಯವಾದ ಕಾರಣವರನ್ನು ಸ್ಕ್ಯಾನ್ ಮಾಡಲು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಎರಡನೇ ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡಿದ ರೋಹಿತ್ ಶರ್ಮಾ ಅವರು ಮೊಹಮ್ಮದ್ ಸಿರಾಜ್ ಅವರ ಇನ್ನಿಂಗ್ಸ್‌ನ ಎರಡನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಅನಾಮುಲ್ ಹಕ್ ಅವರ ಕ್ಯಾಚ್ ಅನ್ನು ಕೈಬಿಟ್ಟರು ಮತ್ತು ಈ ಸಮಯದಲ್ಲಿ ಅವರ ಎಡಗೈ ಹೆಬ್ಬರಳಿಗೆ ಗಾಯವಾಗಿ ರಕ್ತಸ್ರಾವ ಪ್ರಾರಂಭವಾಯಿತು. ಬಿಸಿಸಿಐ ವೈದ್ಯಕೀಯ ತಂಡ ಅವರನ್ನು ಟೆಸ್ಟ್ ಮಾಡುತ್ತಿದೆ.


ಇದನ್ನೂ ಓದಿ : BAN vs IND: ಭಾರತಕ್ಕೆ ಹೀನಾಯ ಸೋಲು, ಬಾಂಗ್ಲಾದೇಶಕ್ಕೆ ಐತಿಹಾಸಿಕ ಸರಣಿ ಜಯ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.