BAN vs IND: ಭಾರತಕ್ಕೆ ಸೋಲು, ಬಾಂಗ್ಲಾದೇಶಕ್ಕೆ ಐತಿಹಾಸಿಕ ಸರಣಿ ಜಯ

Bangladesh vs India, 2nd ODI: 83 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 8 ಬೌಂಡರಿ ಇದ್ದ ಅಜೇಯ 100 ರನ್‍ ಗಳಿಸಿದ ಮೆಹದಿ ಹಸನ್ ಟೀಂ ಇಂಡಿಯಾ ಬೌಲರ್‍ಗಳಿಗೆ ಮನಬಂದಂತೆ ದಂಡಿಸಿದರು.

Written by - Zee Kannada News Desk | Last Updated : Dec 8, 2022, 10:46 AM IST
  • ಬಾಂಗ್ಲಾದೇಶದ ವಿರುದ್ಧ 2ನೇ ಪಂದ್ಯದಲ್ಲಿ ಹೀನಾಯ ಸೋಲು ಕಂಡ ಭಾರತ
  • ಭಾರತದ ವಿರುದ್ಧ ಐತಿಹಾಸ ಸರಣಿ ಗೆಲುವು ಸಾಧಿಸಿದ ಬಾಂಗ್ಲಾ ಆಟಗಾರರ ಸಂಭ್ರಮ
  • ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಮತ್ತೊಮ್ಮೆ ಮುಗ್ಗರಿಸಿದ ರೋಹಿತ್ ಶರ್ಮಾ ಪಡೆ
BAN vs IND: ಭಾರತಕ್ಕೆ ಸೋಲು, ಬಾಂಗ್ಲಾದೇಶಕ್ಕೆ ಐತಿಹಾಸಿಕ ಸರಣಿ ಜಯ title=
ಭಾರತಕ್ಕೆ ಹೀನಾಯ ಸೋಲು

ಢಾಕಾ: ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಕಂಡಿದೆ. 5 ರನ್‍ಗಳ ರೋಚಕ ಗೆಲುವು ಸಾಧಿಸಿದ ಬಾಂಗ್ಲಾದೇಶ ಐತಿಹಾಸಿಕ ಸರಣಿ ಗೆಲುವು ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ನಿಗದಿತ 50 ಓವರ್‍ಗಳಲ್ಲಿ 7 ವಿಕೆಟ್ ಕಳೆದುಕೊಂಡು 271 ರನ್‍ಗಳ ಸ್ಪರ್ಧಾತ್ಮಕ ಮೊತ್ತ ಗಳಿಸಿತ್ತು. ಟಾರ್ಗೆಟ್ ಬೆನ್ನತ್ತಿದ ಭಾರತ ಕೊನೆ ಎಸೆತದವರೆಗೂ ಹೋರಾಟ ನಡೆಸಿ ಸೋಲು ಕಂಡಿತು.

ಮೆಹದಿ ಹಸನ್ ಭರ್ಜರಿ ಶತಕ

ಬಾಂಗ್ಲಾದೇಶದ ಪರ ಮೆಹದಿ ಹಸನ್(ಅಜೇಯ 100) ಭರ್ಜರಿ ಶತಕ ಭಾರಿಸುವ ಮೂಲಕ ಮತ್ತೊಮ್ಮೆ ಭಾರತೀಯ ಬೌಲರ್‍ಗಳನ್ನು ಕಾಡಿದರು. 83 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 8 ಬೌಂಡರಿ ಇದ್ದ ಅಜೇಯ 100 ರನ್‍ ಗಳಿಸಿದ ಮೆಹದಿ ಹಸನ್ ಟೀಂ ಇಂಡಿಯಾ ಬೌಲರ್‍ಗಳಿಗೆ ಮನಬಂದಂತೆ ದಂಡಿಸಿದರು. ಮೊಹಮ್ಮದುಲ್ಲಾ(77) ಸಹ ಭರ್ಜರಿ ಅರ್ಧಶತಕ ಭಾರಿಸಿ ತಂಡ ಬೃಹತ್ ಮೊತ್ತ ಗಳಿಸಲು ನೆರವಾದರು.

ರೋಹಿತ್ ಶರ್ಮಾ ಹೋರಾಟ ವ್ಯರ್ಥ

272 ರನ್‍ಗಳ ಗುರಿ ಬೆನ್ನತ್ತಿದ ಭಾರತ ತಂಡವು ಆರಂಭಿಕ ಆಘಾತ ಅನುಭವಿಸಿತು. 65 ರನ್ ಗಳಿಸುವಷ್ಟರಲ್ಲಿ ಟೀಂ ಇಂಡಿಯಾ 4 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ತಾಳ್ಮೆಯುತ ಆಟವಾಡಿದ ಶ್ರೇಯಸ್ ಅಯ್ಯರ್(82) ಭರ್ಜರಿ ಅರ್ಧಶತಕ ಭಾರಿಸಿದರು. ಅಕ್ಸರ್ ಪಟೇಲ್(56) ಸಹ ಉತ್ತಮ ಆಟವಾಡಿದರು.

7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ನಾಯಕ ರೋಹಿತ್ ಶರ್ಮಾ(ಅಜೇಯ 51) ಕೊನೆಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಡುವ ಆಸೆ ಚಿಗುರಿಸಿದ್ದರು. ಆದರೆ ಮೊಹಮ್ಮದ್ ಸಿರಾಜ್ 47 ಮತ್ತು 48ನೇ ಓವರ್‍ನಲ್ಲಿ ರನ್ ಗಳಿಸಲು ತಿಣುಕಾಡಿದರು. 47ನೇ ಓವರ್‍ನಲ್ಲಿ 4 ಬಾಲ್‍ಗಳಲ್ಲಿ ಕೇವಲ 1 ರನ್ ಗಳಿಸಿದ ಸಿರಾಜ್ 48ನೇ ಓವರ್‍ನಲ್ಲಿ ಒಂದೇ ಒಂದು ರನ್ ಗಳಿಸಲಿಲ್ಲ. ಹೀಗಾಗಿ ಭಾರತಕ್ಕೆ ಮತ್ತಷ್ಟು ಸಂಕಷ್ಟ ಹೆಚ್ಚಾಯಿತು. ಕೊನೆಯಲ್ಲಿ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರೂ ಪ್ರಯೋಜನವಾಗಲಿಲ್ಲ. ಭಾರತ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 266 ರನ್ ಗಳಿಸಲಷ್ಟೇ ಶಕ್ತವಾಯಿತು.

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

 

Trending News