“ನಾವು ವಿಶ್ವಕಪ್ ಗೆಲ್ಲಲು ಈತ ಕಾರಣ”- ಗೆಲುವಿನ ಸಂಪೂರ್ಣ ಕ್ರೆಡಿಟ್ ಈ ಆಟಗಾರನಿಗೆ ನೀಡಿದ ವಿರಾಟ್ ಕೊಹ್ಲಿ! ಆತ ಬೇರಾರು ಅಲ್ಲ…
Virat Kohli Statement about Jasprit Bumrah: ಅಭಿಮಾನಿಗಳಿಂದ ತುಂಬಿದ್ದ ವಾಂಖೆಡೆ ಸ್ಟೇಡಿಯಂನಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ತನ್ನ ಮೆಚ್ಚಿನ ಆಟಗಾರ ಜಸ್ಪ್ರೀತ್ ಬುಮ್ರಾ ಎನ್ನುತ್ತಾ, ಅವರನ್ನು ಅಭಿನಂದಿಸಿದ್ದಾರೆ.
Virat Kohli Statement about Jasprit Bumrah: ವಿರಾಟ್ ಕೊಹ್ಲಿ ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಸದ್ಯ 2024ರ ಟಿ 20 ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ಸಂತಸದ ಕಡಲಲ್ಲಿ ತೇಲಾಡುತ್ತಿದ್ದಾರೆ. ಅಂದಹಾಗೆ ಇತ್ತೀಚೆಗೆ ಕೊಹ್ಲಿ ತಮ್ಮ ನೆಚ್ಚಿನ ಆಟಗಾರ ಯಾರೆಂದು ಬಹಿರಂಗಪಡಿಸಿದ್ದಲ್ಲದೆ, ಆತನ ಆಟವನ್ನು ಕೊಂಡಾಡಿದ್ದಾರೆ.
ಅಭಿಮಾನಿಗಳಿಂದ ತುಂಬಿದ್ದ ವಾಂಖೆಡೆ ಸ್ಟೇಡಿಯಂನಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ತನ್ನ ಮೆಚ್ಚಿನ ಆಟಗಾರ ಜಸ್ಪ್ರೀತ್ ಬುಮ್ರಾ ಎನ್ನುತ್ತಾ, ಅವರನ್ನು ಅಭಿನಂದಿಸಿದ್ದಾರೆ.
ಇದನ್ನೂ ಓದಿ: ಮನೆಯ ಮುಂದೆ ಇದೊಂದು ಗಿಡ ಬೆಳೆಸಿ… ಇಲಿ, ಹಲ್ಲಿ, ನೊಣ, ಸೊಳ್ಳೆ ಯಾವುದೂ ಬರಲ್ಲ!
ವಿರಾಟ್ ಕೊಹ್ಲಿ ಬುಮ್ರಾ ಬಗ್ಗೆ ಮಾತನಾಡುತ್ತಾ, “ಪ್ರತಿ ಕಷ್ಟದ ಪರಿಸ್ಥಿತಿಯಲ್ಲೂ ನಮ್ಮನ್ನು ಮತ್ತೆ ಮತ್ತೆ ಈ ಟಿ20 ವಿಶ್ವಕಪ್ ಗೆಲುವಿನತ್ತ ಕರೆತಂದ ವ್ಯಕ್ತಿಯ ಹೆಸರನ್ನು ತೆಗೆದುಕೊಳ್ಳಲು ನಾನು ಬಯಸುತ್ತೇನೆ. ಅವರು ಬೇರಾರು ಅಲ್ಲ, ಜಸ್ಪ್ರೀತ್ ಬುಮ್ರಾ, ಜಸ್ಪ್ರೀತ್ ಬುಮ್ರಾ ಎಂಟನೇ ಅದ್ಭುತ. ನಮ್ಮ ದೇಶಕ್ಕಾಗಿ ಆಡುತ್ತಿರುವುದು ನಮ್ಮ ಅದೃಷ್ಟ” ಎಂದು ಹೇಳಿದ್ದಾರೆ.
“ಫೈನಲ್ ಪಂದ್ಯದ ಕೊನೆಯ 5 ಓವರ್’ಗಳಲ್ಲಿ ಆತನ ಬೌಲಿಂಗ್ ನಿಜಕ್ಕೂ ವಿಶೇಷ. ಎರಡು-ಮೂರು ಓವರ್ ಬೌಲ್ ಮಾಡಿ ಪಂದ್ಯಕ್ಕೆ ತಿರುವು ನೀಡಿದರು” ಎಂದು ಹೊಗಳಿದ್ದಾರೆ.
ಭಾರತ ತಂಡ 17 ವರ್ಷಗಳ ನಂತರ ವಿಶ್ವಕಪ್ ಗೆದ್ದುಕೊಂಡಿದೆ. ಈ ಐತಿಹಾಸಿಕ ವಿಜಯದ ನಂತರ, ಜುಲೈ 4 ರಂದು ಟೀಂ ಇಂಡಿಯಾ ತವರಿಗೆ ಮರಳಿದಾಗ ತಂಡವನ್ನು ಅತ್ಯಂತ ಉತ್ಸಾಹದಿಂದ ಸ್ವಾಗತಿಸಲಾಯಿತು. ಮೊದಲಿಗೆ ತಂಡದ ಆಟಗಾರರು ದೆಹಲಿಯಲ್ಲಿ ಅಭಿಮಾನಿಗಳೊಂದಿಗೆ ವಿಜಯೋತ್ಸವ ಆಚರಿಸಿದರು, ನಂತರ ಮುಂಬೈನಲ್ಲಿ ನಡೆದದ್ದು ನಂಬಲಸಾಧ್ಯವಾದ ದೃಶ್ಯ.
ವಿಜಯೋತ್ಸವ ಪರೇಡ್’ಗಾಗಿ ಭಾರತ ತಂಡ ಮರೈನ್ ಡ್ರೈವ್’ಗೆ ಆಗಮಿಸುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಬಸ್ ಅನ್ನು ಸುತ್ತುವರೆದಿರುವುದು ಕಂಡುಬಂದಿತು. ಇಷ್ಟು ಜನರನ್ನು ನೋಡಿ ಭಾರತೀಯ ಆಟಗಾರರೂ ಅಚ್ಚರಿಗೊಂಡಿದ್ದಲ್ಲದೆ, ಇದನ್ನು ಭಾವುಕರಾಗಿದ್ದರು.
ಇದನ್ನೂ ಓದಿ: ವಿಶ್ವಕಪ್’ನಲ್ಲಿ ಮ್ಯಾಚ್ ವಿನ್ನಿಂಗ್ ಕ್ಯಾಚ್ ಪಡೆದ ‘ನ್ಯಾಷನಲ್ ಹೀರೋ’ ಸೂರ್ಯಕುಮಾರ್ ಯಾದವ್ ಆಸ್ತಿ ಎಷ್ಟು ಕೋಟಿ?
ಆ ದಿನವನ್ನು ನೆನಪಿಸಿಕೊಂಡ ವಿರಾಟ್ ಕೊಹ್ಲಿ...
ಟಿ20 ಕ್ರಿಕೆಟ್’ನಲ್ಲಿ ವಿರಾಟ್ ಮತ್ತು ರೋಹಿತ್ ಯುಗ ಅಂತ್ಯಗೊಂಡಿದೆ. ಇಬ್ಬರೂ ಆಟಗಾರರು ದೀರ್ಘಕಾಲ ಒಟ್ಟಿಗೆ ಆಡಿದವರು. ಇನ್ನು ಫೈನಲ್ ಬಗ್ಗೆ ಮಾತನಾಡಿದ ವಿರಾಟ್, “ನಾನು ಅಳುತ್ತಿದ್ದೆ, ರೋಹಿತ್ ಕೂಡ ಅಳುತ್ತಿದ್ದರು. ಒಬ್ಬರನ್ನೊಬ್ಬರು ತಬ್ಬಿಕೊಂಡೆವು. ಆ ದಿನವನ್ನು ನಾನು ಎಂದಿಗೂ ಮರೆಯಲಾರೆ. ಪಂದ್ಯದಲ್ಲಿ ರೋಹಿತ್ ಅವರನ್ನು ಇಷ್ಟು ಭಾವುಕರಾಗಿ ನೋಡಿದ್ದು ಇದೇ ಮೊದಲು” ಎಂದು ಮನದಾಳದ ಮಾತನ್ನಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ