‘ಸಾರಾ ಹೇಗಿದ್ದಾರೆ’ ಅಂತ ಕೇಳುತ್ತಿದ್ದಂತೆ ಫ್ಯಾನ್ಸ್ ಕಡೆ ನೋಡಿ ಡ್ಯಾನ್ಸ್ ಮಾಡಿದ Virat: Shubhmanರನ್ನು ಚುಡಾಯಿಸಿದ್ರಾ ಕೊಹ್ಲಿ?
Virat Kohli Hilarious Reaction: ಇನ್ನು ಈ ಸರಣಿಯಲ್ಲಿ ಶುಭ್ಮನ್ ಗಿಲ್ ಅಬ್ಬರಿಸಿರೋದಂತು ಎಲ್ಲರೂ ಕಂಡಿದ್ದೇವೆ. ಮೊದಲನೇ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದರು. ಈ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂದರೆ ಅದು ಗಿಲ್. ಮೊದಲ ODIನಲ್ಲಿ ದ್ವಿಶತಕ, ಎರಡನೇ ಪಂದ್ಯದಲ್ಲಿ ನಿರ್ಣಾಯಕ 40, ನಂತರ ಮೂರನೇ ಮತ್ತು ಅಂತಿಮ ODI ನಲ್ಲಿ ಬೆರಗುಗೊಳಿಸುವ ಶತಕ. ಹೀಗೆ ಮೂರು ಪಂದ್ಯಗಳ ಉದ್ದಕ್ಕೂ ಅವರ ಅದ್ಭುತ ಮತ್ತು ಸ್ಥಿರವಾದ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಪ್ಲೇಯರ್ ಆಫ್ ದಿ ಸಿರೀಸ್ ಪ್ರಶಸ್ತಿಯನ್ನು ಪಡೆದರು.
Virat Kohli Hilarious Reaction: ಇಂದೋರ್: ಹೋಲ್ಕರ್ ಸ್ಟೇಡಿಯಂನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟಾಮ್ ಲಾಥಮ್ ನೇತೃತ್ವದ ನ್ಯೂಜಿಲೆಂಡ್ ತಂಡ ಟೀಂ ಇಂಡಿಯಾ ವಿರುದ್ಧ ಸೋಲು ಕಂಡಿದೆ. ಈ ಮೂಲಕ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಐಸಿಸಿ ಏಕದಿನ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದೆ. ನ್ಯೂಜಿಲೆಂಡ್ ತಂಡವನ್ನು 3-0 ಅಂತರದಿಂದ ಸೋಲಿಸಿ ಕ್ಲೀನ್ ಸ್ವೀಪ್ ಜಯ ಸಾಧಿಸಿದ್ದಾರೆ.
ಇನ್ನು ಈ ಸರಣಿಯಲ್ಲಿ ಶುಭ್ಮನ್ ಗಿಲ್ ಅಬ್ಬರಿಸಿರೋದಂತು ಎಲ್ಲರೂ ಕಂಡಿದ್ದೇವೆ. ಮೊದಲನೇ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದರು. ಈ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂದರೆ ಅದು ಗಿಲ್. ಮೊದಲ ODIನಲ್ಲಿ ದ್ವಿಶತಕ, ಎರಡನೇ ಪಂದ್ಯದಲ್ಲಿ ನಿರ್ಣಾಯಕ 40, ನಂತರ ಮೂರನೇ ಮತ್ತು ಅಂತಿಮ ODI ನಲ್ಲಿ ಬೆರಗುಗೊಳಿಸುವ ಶತಕ. ಹೀಗೆ ಮೂರು ಪಂದ್ಯಗಳ ಉದ್ದಕ್ಕೂ ಅವರ ಅದ್ಭುತ ಮತ್ತು ಸ್ಥಿರವಾದ ಬ್ಯಾಟಿಂಗ್ ಪ್ರದರ್ಶನಕ್ಕಾಗಿ ಪ್ಲೇಯರ್ ಆಫ್ ದಿ ಸಿರೀಸ್ ಪ್ರಶಸ್ತಿಯನ್ನು ಪಡೆದರು.
ಇದನ್ನೂ ಓದಿ: ಇತಿಹಾಸ ಸೃಷ್ಟಿಸಿದ Suryakumar Yadav: ‘ICC T20I ವರ್ಷದ ಕ್ರಿಕೆಟಿಗ-2022’ ಪ್ರಶಸ್ತಿಗೆ ಭಾಜನರಾದ ಮಿಸ್ಟರ್ 360
ಇನ್ನು ಭಾರತದ ಯುವ ಆರಂಭಿಕ ಆಟಗಾರ ಎರಡನೇ ಇನ್ನಿಂಗ್ಸ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಮತ್ತೊಮ್ಮೆ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದರು. ಹೋಲ್ಕರ್ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರು ಬೌಂಡರಿ ಲೇನ್ ಬಳಿ ಗಿಲ್ ಇರುವುದನ್ನು ಕಂಡು ಜೋರಾಗಿ ಸಾರಾ ಹೇಗಿದ್ದಾರೆ ಎಂದು ಕೂಗಿದ್ದಾರೆ. ಆದರೆ ಆ ಕ್ಷಣ ಅಷ್ಟೊಂದು ಹೈಲೈಟ್ ಆಗಿರಲಿಲ್ಲ. ಇದಕ್ಕೆ ಕೂಗಿಗೆ ವಿರಾಟ್ ಕೊಹ್ಲಿ ನೀಡಿದ ಪ್ರತಿಕ್ರಿಯೆಯು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋ ನೋಡಿ:
Karnataka Football : ಕರ್ನಾಟಕ ಯುವ ಫುಟ್ ಬಾಲ್ ಆಟಗಾರರಿಗೆ ಭರ್ಜರಿ ಅವಕಾಶ!
ಇದೀಗ ವಿರಾಟ್ ಕೊಹ್ಲಿ ಮೈದಾನದಲ್ಲಿ ಸಾರಾ ಹೆಸರು ಕೇಳುತ್ತಿದ್ದಂತೆ ಜೋರಾಗಿ ನಕ್ಕಿದ್ದಾರೆ. ಅಷ್ಟೇ ಅಲ್ಲ ಪ್ರೇಕ್ಷಕರ ಜೊತೆಗೆ ಕೊಹ್ಲಿ ಕೂಡ ಶುಭ್ಮನ್ ಅವರನ್ನು ಚುಡಾಯಿಸುವಂತೆ ಕಂಡುಬಂದಿದೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ವಿರಾಟ್ ಕೊಹ್ಲಿ ಅವರ ತಮಾಷೆಯ ವರ್ತನೆ ಕಂಡು ಎಲ್ಲರೂ ನಕ್ಕು ನಕ್ಕು ಸುಸ್ತಾಗಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.