Virat Kohli Record: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಹಲವು ದೊಡ್ಡ ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಸೇರಿಸಿಕೊಂಡಿದ್ದಾರೆ. ಇದೀಗ ಆ ಪಟ್ಟಿಗೆ ಮತ್ತೊಂದು ದಾಖಲೆ ಸೇರ್ಪಡೆಯಾಗಿದೆ. ವಿಶೇಷವೆಂದರೆ ಈ ಬಾರಿ ವಿರಾಟ್ ಕೊಹ್ಲಿ ಬ್ಯಾಟ್ಸ್ ಮನ್ ಆಗಿ ಅಲ್ಲ, ಫೀಲ್ಡರ್ ಆಗಿ ತಮ್ಮ ಹೆಸರಿನಲ್ಲಿ ವಿಶೇಷ ದಾಖಲೆ ಮಾಡಿದ್ದಾರೆ. 2023ರ ಏಷ್ಯಾಕಪ್‌’ನಲ್ಲಿ ನೇಪಾಳ ತಂಡದ ವಿರುದ್ಧ ನಡೆದ ಪಂದ್ಯದ ವೇಳೆ ಈ ದಾಖಲೆ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Dina Bhavishya: ಇಂದು ಈ ರಾಶಿಯವರಿಗೆ ಎಂಥಾ ಸಂಕಷ್ಟ ಬಂದರೂ ಕೈಹಿಡಿದು ಮುನ್ನಡೆಸುತ್ತಾನೆ ಆಂಜನೇಯ


ಈ ಪಂದ್ಯದ ಆರಂಭದಲ್ಲಿ ವಿರಾಟ್ ಕೊಹ್ಲಿ ಕ್ಯಾಚ್ ಕೈಬಿಟ್ಟಿದ್ದರು. ಆದರೆ ಇನಿಂಗ್ಸ್‌’ನ 30ನೇ ಓವರ್‌’ನಲ್ಲಿ ನೇಪಾಳದ ಆರಂಭಿಕ ಬ್ಯಾಟ್ಸ್‌’ಮನ್ ಆಸಿಫ್ ಶೇಖ್ ಅವರ ಅತ್ಯುತ್ತಮ ಕ್ಯಾಚ್ ಅನ್ನು ಕೊಹ್ಲಿ ಪಡೆದರು. ಇದು ಏಕದಿನ ಕ್ರಿಕೆಟ್‌’ನಲ್ಲಿ ವಿರಾಟ್ ಕೊಹ್ಲಿ ಅವರ 143ನೇ ಕ್ಯಾಚ್ ಆಗಿತ್ತು. ಇದರೊಂದಿಗೆ ಏಕದಿನ ಕ್ರಿಕೆಟ್‌’ನಲ್ಲಿ ಅತಿ ಹೆಚ್ಚು ಕ್ಯಾಚ್‌ ಪಡೆದವರಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಈ ವಿಚಾರದಲ್ಲಿ ಅವರು ನ್ಯೂಜಿಲೆಂಡ್‌’ನ ಮಾಜಿ ಕ್ರಿಕೆಟಿಗ ರಾಸ್‌ ಟೇಲರ್‌’ರನ್ನು ಹಿಂದಿಕ್ಕಿದ್ದಾರೆ.


ಮಹೇಲ ಜಯವರ್ಧನೆ ಅಗ್ರಸ್ಥಾನಿ:


ಏಕದಿನ ಕ್ರಿಕೆಟ್‌’ನಲ್ಲಿ ಅತಿ ಹೆಚ್ಚು ಕ್ಯಾಚ್‌’ಗಳನ್ನು ಪಡೆದ ದಾಖಲೆ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಹೆಸರಿನಲ್ಲಿದೆ. ಮಹೇಲಾ ಜಯವರ್ಧನೆ 448 ಪಂದ್ಯಗಳಲ್ಲಿ 218 ಕ್ಯಾಚ್‌’ಗಳನ್ನು ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಎರಡನೇ ಸ್ಥಾನದಲ್ಲಿದ್ದಾರೆ. ಅವರು 375 ಪಂದ್ಯಗಳಲ್ಲಿ 160 ಕ್ಯಾಚ್‌’ಗಳನ್ನು ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಕೂಡ ಸೇರಿದ್ದಾರೆ. ಅಜರುದ್ದೀನ್ 334 ಪಂದ್ಯಗಳಲ್ಲಿ 156 ಕ್ಯಾಚ್‌’ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ರಾಸ್ ಟೇಲರ್ 142 ಕ್ಯಾಚ್‌ಗಳೊಂದಿಗೆ 5 ನೇ ಸ್ಥಾನದಲ್ಲಿದ್ದಾರೆ.


ಏಕದಿನ ಕ್ರಿಕೆಟ್‌’ನಲ್ಲಿ ಅತಿ ಹೆಚ್ಚು ಕ್ಯಾಚ್‌ ಪಡೆದ ಆಟಗಾರರು:


  • ಮಹೇಲಾ ಜಯವರ್ಧನೆ (448 ಪಂದ್ಯಗಳಲ್ಲಿ 218 ಕ್ಯಾಚ್‌)

  • ರಿಕಿ ಪಾಂಟಿಂಗ್ (375 ಪಂದ್ಯಗಳಲ್ಲಿ 160 ಕ್ಯಾಚ್‌)

  • ಮೊಹಮ್ಮದ್ ಅಜರುದ್ದೀನ್ (334 ಪಂದ್ಯಗಳಲ್ಲಿ 156 ಕ್ಯಾಚ್‌)

  • ವಿರಾಟ್ ಕೊಹ್ಲಿ (277 ಪಂದ್ಯಗಳಲ್ಲಿ 143 ಕ್ಯಾಚ್‌)

  • ರಾಸ್ ಟೇಲರ್ (236 ಪಂದ್ಯಗಳಲ್ಲಿ 142 ಕ್ಯಾಚ್‌)


ಇದನ್ನೂ ಓದಿ: ಮುಂದಿನ 17 ವರ್ಷಗಳ ಕಾಲ ಈ ರಾಶಿಯವರಿಗೆ ಪ್ರತಿದಿನವೂ ಸುವರ್ಣಯುಗ: ಲಾಟರಿ ಹೊಡೆಯೋದು ಫಿಕ್ಸ್, ಅಖಂಡ ವರವೇ ಪ್ರಾಪ್ತಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ