Virat kohli - Paul Collingwood : ಟೀಮ್ ಇಂಡಿಯಾದ ರನ್‌ ಮಶಿನ್‌ ಮಾಜಿ ನಾಯಕ ವಿರಾಟ್‌ ಕೊಹ್ಲಿ ಸದ್ಯ ಎಲ್ಲಾ ಮಾದರಿಯಲ್ಲೂ ಫಾರ್ಮ್‌ ಮರಳಿದ್ದಾರೆ. ಇದು ಎದುರಾಳಿ ತಂಡಗಳಿಗೆ ಭೀತಿ ತಂದಿದೆ ಎಂದು ಇಂಗ್ಲೆಂಡ್‌ ಮಾಜಿ ನಾಯಕ ಪಾಲ್‌ ಕಾಲಿಂಗ್‌ವುಡ್‌ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಖಾಸಗಿ ಸುದ್ದಿ ವಾಹಿನಿ ಜೊತೆ ಮಾತನಾಡಿರುವ ಆಂಗ್ಲ ಮಾಜಿ ಆಟಗಾರ ವಿರಾಟ್‌ ಕೊಹ್ಲಿಯ ಬ್ಯಾಟಿಂಗ್‌ ಸಾಮರ್ಥ್ಯದ ಬಗ್ಗೆ ಹಾಡಿ ಹೊಗಳಿದ್ದಾರೆ. ಕೊಹ್ಲಿ ಎಲ್ಲಾ ಫಾರ್ಮೆಟ್‌ನಲ್ಲೂ ಫಾರ್ಮ್‌ಗೆ ಮರಳಿರುವ ಕಾರಣ ಎದುರಾಳಿ ತಂಡಗಳಿಗೆ ಭಯ ಶುರುವಾಗಿದೆ ಎಂದಿದ್ದಾರೆ ಹೇಳಿದ್ದಾರೆ. ವಿಶ್ವದ ಯಾವುದೇ ತಂಡದ ವಿರುದ್ಧ ಹಾಗೂ ಯಾವುದೇ ಸನ್ನಿವೇಶದಲ್ಲಿ ರನ್‌ ಕಲೆಹಾಕುವ ಸಾಮರ್ಥ್ಯ ಹಾಗೂ ಕೌಶಲ್ಯವನ್ನು ವಿರಾಟ್‌ ಹೊಂದಿದ್ದಾರೆ ಎಂದು ಪಾಲ್‌ ಕಾಲಿಂಗ್‌ವುಡ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  


ಇದನ್ನೂ ಓದಿ: Sachin Tendulkar : ಬಿಸಿಸಿಐ ಮುಂದಿನ ಅಧ್ಯಕ್ಷ ಸಚಿನ್ ತೆಂಡೂಲ್ಕರ್? : ಮಾಸ್ಟರ್ ಬ್ಲಾಸ್ಟರ್ ಹೇಳಿದ್ದು ಹೀಗೆ!


ಇನ್ನೂ ಕಳೆದ ವರ್ಷ ಡಿಸೆಂಬರ್‌ 30 ರಂದು ಕಾರು ಅಫಘಾತದಲ್ಲಿ ಗಂಭೀರ ಗಾಯಗೊಂಡಿರುವ ಟೀಮ್‌ ಇಂಡಿಯಾ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಬಗ್ಗೆ  ಕಾಲಿಂಗ್‌ವುಡ್‌ ಮಾತನಾಡಿದ್ದಾರೆ. ಆದಷ್ಟು ಬೇಗ ಪಂತ್‌ ಗುಣಮುಖರಾಗಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಬೇಕೆಂದು ಆಶಿಸಿದ್ದಾರೆ. "ರಿಷಭ್‌ ಪಂತ್‌ ತುಂಬಾ ಬುದ್ದಿವಂತಿಕೆ ಆಟಗಾರ.ಅವರು ಬ್ಯಾಟ್‌ ಬೀಸುವ ರೀತಿ ಅದ್ಭುತ. ಪಂದ್ಯವನ್ನು ಯಾವುದೇ ಸನ್ನಿವೇಶದಲ್ಲಿ ಬದಲಿಸುವ ಸಾಮರ್ಥ್ಯ ಅವರಿಗಿದೆ. ಅವರು ಮೈದಾನಕ್ಕೆ ಇಳಿದು ರನ್‌ ಗಳಿಸುವುದನ್ನು ನೋಡಲು ನಾನು ಇಷ್ಟಪಡುತ್ತೇನೆ. ವಿಶ್ವ ಕ್ರಿಕೆಟ್‌ಗೆ ಅವರ ರಿಷಬ್‌ ಅಗತ್ಯವಿದೆ ಎಂದು ಪಾಲ್‌ ಕಾಲಿಂಗ್‌ವುಡ್ ಹೇಳಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.