RCB Management: ಐಪಿಎಲ್ 2025ರ ಸೀಸನ್‌ಗೆ ಆಟಗಾರರನ್ನು ಉಳಿಸಿಕೊಳ್ಳುವ ಬಗ್ಗೆ ನಿರಂತರ ಗೊಂದಲವಿದೆ. ಆದರೆ ಇದೆಲ್ಲದರ ನಡುವೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಅತ್ಯಂತ ಸಂತೋಷಕರ ಸುದ್ದಿ ಬರುತ್ತಿದೆ. ಮೂರು ಸೀಸನ್‌ಗಳ ಹಿಂದೆ ಐಪಿಎಲ್‌ನಲ್ಲಿ ಬೆಂಗಳೂರು ತಂಡದ ನಾಯಕರಾಗಿದ್ದ ವಿರಾಟ್ ಕೊಹ್ಲಿ ಮತ್ತೊಮ್ಮೆ ತಂಡವನ್ನು ಮುನ್ನಡೆಸುತ್ತಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಒಂದು ಕಾಲದಲ್ಲಿ ಬೀದಿಯಲ್ಲಿ ಕಸ ಹೆಕ್ಕಿ ಜೀವನ ನಡೆಸಿದಾತ... ಇಂದು ಕ್ರಿಕೆಟ್‌ ಜಗತ್ತಿಗೇ ʼಅರಸʼ! RCBಯ ಈ ಸ್ಟಾರ್‌ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿಯ ಜೀವದ ಗೆಳೆಯನೂ ಹೌದು


ಐಪಿಎಲ್ ರಿಟೈನ್‌ ಗಡುವು ಮುಗಿಯುವ ಮುನ್ನವೇ ಈ ಮಹತ್ವದ ಹೇಳಿಕೆ ಹೊರಬಿದ್ದಿದ್ದು, ಅದರಂತೆ ಕೊಹ್ಲಿ ಮತ್ತೆ ಬೆಂಗಳೂರು ತಂಡದ ನಾಯಕನಾಗಲು ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ. ಈಗ ಇದು ನಿಜವೋ, ಸುಳ್ಳೋ ಎಂಬುದು ಮೆಗಾ ಹರಾಜಿನ ನಂತರವಷ್ಟೇ ತಿಳಿಯಲಿದೆ.


ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ನೀಡಿರುವ ಹೇಳಿಕೆಯನ್ನು ESPN-Cricinfoನ ವೀಡಿಯೊದಲ್ಲಿ ಉಲ್ಲೇಖ ಮಾಡಲಾಗಿದೆ. ಈ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ತಮ್ಮ ಮನದಾಳದ ಭಾವನೆಯನ್ನು RCB ಮ್ಯಾನೇಜ್‌ಮೆಂಟ್‌ ಮುಂದೆ ವ್ಯಕ್ತಪಡಿಸಿದ್ದಾರೆ ಮತ್ತು ಮತ್ತೊಮ್ಮೆ ತಂಡದ ನಾಯಕತ್ವದ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ಕೊಹ್ಲಿ ಸತತ 9 ಸೀಸನ್‌ಗಳಲ್ಲಿ ಆರ್‌ಸಿಬಿ ನಾಯಕರಾಗಿದ್ದರು ಆದರೆ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗದ ಕಾರಣ, 2021 ರ ಋತುವಿನ ನಂತರ ಅವರು ರಾಜೀನಾಮೆ ನೀಡಿದ್ದರು. ಅಂದಿನಿಂದ, ಫಾಫ್ ಡು ಪ್ಲೆಸಿಸ್ ಸತತ ಮೂರು ಋತುಗಳಲ್ಲಿ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡರು.


ಇದನ್ನೂ ಓದಿ: ಕಾಲಿನ ಸ್ಪರ್ಶ ಜ್ಞಾನ, ಬೆನ್ನು ಹುರಿ..! ಅಸಲಿಗೆ ದರ್ಶನ್‌ ಆರೋಗ್ಯ ಸ್ಥಿತಿ ಹೇಗಿದೆ ಗೊತ್ತೆ..?


ಬೆಂಗಳೂರು ಮುಂದಿನ ಋತುವಿನಲ್ಲಿ ಡುಪ್ಲೆಸಿಸ್ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆಗಳು ತೀರಾ ಕಡಿಮೆ. ಇಂತಹ ಪರಿಸ್ಥಿತಿಯಲ್ಲಿ ಕೆಎಲ್ ರಾಹುಲ್, ರಿಷಬ್ ಪಂತ್ ಅಥವಾ ಶ್ರೇಯಸ್ ಅಯ್ಯರ್ ಅವರಲ್ಲಿ ಒಬ್ಬರನ್ನು ಮೆಗಾ ಹರಾಜು ಮೂಲಕ ತಂಡದ ನಾಯಕನನ್ನಾಗಿ ಮಾಡಲು ಆರ್‌ಸಿಬಿ ಪರಿಗಣಿಸುತ್ತಿದೆ ಎಂದು ನಿರಂತರವಾಗಿ ಹೇಳಲಾಗುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ