ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ವಿರಾಟ್ ಕೊಹ್ಲಿ ಟಾಪ್ !
ಕೇವಲ ಒಂದೇ ದಶಕದ ಅವಧಿಯಲ್ಲಿ 20,000 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ರನ್ ಗಳಿಸಿ ನೂತನ ದಾಖಲೆ ಮಾಡಿರುವ ವಿರಾಟ್ ಕೊಹ್ಲಿ, ಈಗ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಕೂಡ ಅಗ್ರಸ್ತಾನ ಪಡೆದಿದ್ದಾರೆ.
ನವದೆಹಲಿ: ಕೇವಲ ಒಂದೇ ದಶಕದ ಅವಧಿಯಲ್ಲಿ 20,000 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ರನ್ ಗಳಿಸಿ ನೂತನ ದಾಖಲೆ ಮಾಡಿರುವ ವಿರಾಟ್ ಕೊಹ್ಲಿ, ಈಗ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಕೂಡ ಅಗ್ರಸ್ತಾನ ಪಡೆದಿದ್ದಾರೆ.
ವಿರಾಟ್ ಕೊಹ್ಲಿ ಟ್ವಿಟರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಪ್ಲಾಟ್‌ಫಾರ್ಮ್‌ನಲ್ಲಿ 30 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಕ್ರಿಕೆಟ್ ಆಟಗಾರ ಎನ್ನುವ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ. ನಂತರದ ಸ್ಥಾನವನ್ನು ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಪಡೆದಿದ್ದಾರೆ. ಅವರು ಟ್ವಿಟ್ಟರ್ನಲ್ಲಿ 30.1 ಮಿಲಿಯನ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಅವರು ಕ್ರಮವಾಗಿ 28 ಮಿಲಿಯನ್ ಮತ್ತು 16.5 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
ಎಂಎಸ್ ಧೋನಿ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚು ಸಕ್ರಿಯವಾಗಿಲ್ಲ, ಆದರೂ ಅವರು ಇನ್‌ಸ್ಟಾಗ್ರಾಮ್‌ನಲ್ಲಿ 15.4 ಮಿಲಿಯನ್, ಟ್ವಿಟರ್‌ನಲ್ಲಿ 7.7 ಮಿಲಿಯನ್ ಮತ್ತು ಫೇಸ್ಬುಕ್ನಲ್ಲಿ 20.5 ಮಿಲಿಯನ್ ಫಾಲೋವರ್ಸ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಈಗ ತಮ್ಮ ಕ್ರಿಕೆಟ ವೃತ್ತಿ ಜೀವನದ ಉತ್ತುಂಗದಲ್ಲಿರುವ ಇಂಡಿಯಾದ ಓಪನರ್ ರೋಹಿತ್ ಶರ್ಮಾ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ.- ಇನ್‌ಸ್ಟಾಗ್ರಾಮ್‌ನಲ್ಲಿ 10.5 ಮಿಲಿಯನ್, ಟ್ವಿಟರ್‌ನಲ್ಲಿ 14.7 ಮಿಲಿಯನ್ ಮತ್ತು ಫೇಸ್ಬುಕ್ನಲ್ಲಿ 11 ಮಿಲಿಯನ್ ಅನುಯೈಗಳನು ಅವರು ಹೊಂದಿದ್ದಾರೆ.
ಇತ್ತೀಚೆಗೆ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದ ಸುರೇಶ್ ರೈನಾ ಟ್ವಿಟ್ಟರ್ನಲ್ಲಿ 16.7 ಮಿಲಿಯನ್, ಇನ್ಸ್ಟಾಗ್ರಾಮ್ನಲ್ಲಿ 9 ಮಿಲಿಯನ್ ಮತ್ತು ಫೇಸ್ಬುಕ್ನಲ್ಲಿ 3.1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.ಯುವರಾಜ್ ಸಿಂಗ್ ಅವರು ಫೇಸ್‌ಬುಕ್‌ನಲ್ಲಿ 14 ಮಿಲಿಯನ್, ಟ್ವಿಟರ್‌ನಲ್ಲಿ 4.7 ಮಿಲಿಯನ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 7.5 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
'ಟರ್ನ್‌ಬನೇಟರ್' ಎಂದೂ ಕರೆಯಲ್ಪಡುವ ಹರ್ಭಜನ್ ಸಿಂಗ್ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿದ್ದಾರೆ. ಅವರು ಟ್ವಿಟ್ಟರ್ನಲ್ಲಿ 10.1 ಮಿಲಿಯನ್, ಇನ್ಸ್ಟಾಗ್ರಾಮ್ನಲ್ಲಿ 3.6 ಮಿಲಿಯನ್ ಮತ್ತು ಫೇಸ್ಬುಕ್ನಲ್ಲಿ 6.6 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.