IND vs AFG 2nd T20I: ಭಾರತೀಯ ಕ್ರಿಕೆಟ್ ತಂಡದ ಏಸ್ ಬ್ಯಾಟ್ಸ್‌’ಮನ್ ವಿರಾಟ್ ಕೊಹ್ಲಿ 14 ತಿಂಗಳ ನಂತರ T20 ಅಂತರಾಷ್ಟ್ರೀಯ ಸ್ವರೂಪಕ್ಕೆ ಮರಳಿದ್ದಾರೆ. ಅಷ್ಟೇ ಅಲ್ಲದೆ, ಕಂಬ್ಯಾಕ್ ಮಾಡಿದ ಮೊದಲ ಪಂದ್ಯದಲ್ಲೇ ಐತಿಹಾಸಿಕ ಸಾಧನೆ ಮಾಡಿದರು. ಇಂದೋರ್‌ನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ 29 ರನ್ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.


COMMERCIAL BREAK
SCROLL TO CONTINUE READING

ಎರಡನೇ ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ 16 ಎಸೆತಗಳಲ್ಲಿ 181.25 ಸ್ಟ್ರೈಕ್ ರೇಟ್‌’ನಲ್ಲಿ 29 ರನ್‌’ಗಳ ಇನ್ನಿಂಗ್ಸ್‌ ಆಡಿದ್ದರು. ಇದರಲ್ಲಿ 5 ಬೌಂಡರಿಗಳು ಸೇರಿದ್ದವು.


ಇದನ್ನೂ ಓದಿ: ಮಕರ ಸಂಕ್ರಾಂತಿ 2024ರ ರಾಶಿಫಲ: ಇಂದು ಈ ರಾಶಿಗೆ ಬರೀ ಶುಭಶಕುನವೇ…ಅದೃಷ್ಟ ತಾನಾಗೇ ಹುಡುಕಿ ಬರುತ್ತೆ


ವಿರಾಟ್ ಕೊಹ್ಲಿ ಐತಿಹಾಸಿಕ ಸಾಧನೆ


ಇಂದೋರ್‌’ನಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಎರಡನೇ ಟಿ 20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 29 ರನ್ ಗಳಿಸಿದ ನಂತರ, ವಿರಾಟ್ ಕೊಹ್ಲಿ ಈ ಸ್ವರೂಪದಲ್ಲಿ ಚೇಸಿಂಗ್ ಮಾಡುವಾಗ 2000 ರನ್ ಪೂರೈಸಿದ್ದಾರೆ. ಇದರೊಂದಿಗೆ, ವಿರಾಟ್ ಕೊಹ್ಲಿ ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ (ಟೆಸ್ಟ್, ODI ಮತ್ತು T20 ಅಂತರರಾಷ್ಟ್ರೀಯ) ಗುರಿಯನ್ನು ಬೆನ್ನಟ್ಟುವ ಸಂದರ್ಭದಲ್ಲಿ 2000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ವಿಶ್ವದ ಏಕೈಕ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.


ಜೊತೆಗೆ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ಗುರಿ ಬೆನ್ನಟ್ಟಿ 2000 ಸಾವಿರ ರನ್ ಗಳಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್.


ಟಿ20 ಪಂದ್ಯದಲ್ಲಿ ಚೇಸಿಂಗ್ ಮಾಡುವಾಗ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು


1. ಪಾಲ್ ಸ್ಟಿರ್ಲಿಂಗ್ (ಐರ್ಲೆಂಡ್) - 2074


2. ವಿರಾಟ್ ಕೊಹ್ಲಿ (ಭಾರತ) - 2000


3. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) - 1788


4. ಬಾಬರ್ ಆಜಮ್ (ಪಾಕಿಸ್ತಾನ) - 1628


5. ರೋಹಿತ್ ಶರ್ಮಾ (ಭಾರತ) - 1465


ಭಾರತಕ್ಕೆ ಸರಣಿ ಗೆಲುವು


ಯಶಸ್ವಿ ಜೈಸ್ವಾಲ್ ಮತ್ತು ಶಿವಂ ದುಬೆ ಅವರ ಅರ್ಧಶತಕಗಳ ನೆರವಿನಿಂದ ಭಾರತವು ಭಾನುವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನವನ್ನು 26 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್‌’ಗಳಿಂದ ಸೋಲಿಸಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು.


ಇದನ್ನೂ ಓದಿ: ಫಿನಾಲೆ ಸಮೀಪದಲ್ಲೇ ‘ಬಿಗ್’ ಟ್ವಿಸ್ಟ್.. 8 ಸ್ಪರ್ಧಿಗಳು ಉಳಿದಿದ್ದರೂ ಈ ವಾರ ಎಲಿಮಿನೇಷನ್ ಕ್ಯಾನ್ಸಲ್ ಆಗೋದಕ್ಕೆ ಇದುವೇ ಕಾರಣ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.