Makara Sankranti 2024 Rashifal: ಇಂದು ದೇಶದೆಲ್ಲೆಡೆ ಮಕರ ಸಂಕ್ರಾಂತಿಯ ಸಂಭ್ರಮ ಮನೆಮಾಡಿದೆ. ಈ ದಿನದಿಂದ ಸೂರ್ಯನು ಉತ್ತರಾಯಣನಾಗುತ್ತಾನೆ. ಈ ಮೂಲಕ ಕೆಲವು ರಾಶಿಗಳಿಗೆ ಅದೃಷ್ಟವನ್ನು ನೀಡುತ್ತದೆ.
ಹೊಸ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಹಿಂದೂಗಳ ಪ್ರಮುಖ ಹಬ್ಬವಾಗಿದೆ. ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದಾಗ ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಂದಹಾಗೆ ಈ ಶುಭ ದಿನದಂದು ದಾನ ಮಾಡಿದರೆ ಅತ್ಯಂತ ಮಂಗಳವಾಗುತ್ತದೆ ಎಂದು ಪರಿಗಣಿಸಲಾಗಿದೆ.
ಇದನ್ನೂ ಓದಿ: ಟಿ20 ಕ್ರಿಕೆಟ್’ನಲ್ಲಿ ರೋಹಿತ್ ವಿಶ್ವದಾಖಲೆ: ಈ ಮೈಲಿಗಲ್ಲು ತಲುಪಿದ ಜಗತ್ತಿನ ಮೊದಲ ಕ್ರಿಕೆಟಿಗ
ಮೇಷ ರಾಶಿ - ಮೇಷ ರಾಶಿಯ ಜನರು ವೃತ್ತಿಜೀವನದಲ್ಲಿ ಹೊಸ ತಿರುವು ಮತ್ತು ಬದಲಾವಣೆಯನ್ನು ಪಡೆಯುತ್ತಾರೆ. ವೈವಾಹಿಕ ಜೀವನದಲ್ಲಿ ಪರಸ್ಪರ ಬೆಂಬಲವಿರುತ್ತದೆ. ಸಂಬಂಧಗಳಲ್ಲಿ ಸರಿಯಾದ ಸಮನ್ವಯವನ್ನು ಕಾಪಾಡಿಕೊಳ್ಳಲು ಪರಸ್ಪರ ತಿಳುವಳಿಕೆ ಬಹಳ ಮುಖ್ಯ.
ವೃಷಭ ರಾಶಿ - ವೃಷಭ ರಾಶಿಯವರಿಗೆ ಇದುವರೆಗೆ ಕೆಲಸದ ವಿಚಾರದಲ್ಲಿ ಇದ್ದ ಚಿಂತೆಗಳು ದೂರವಾಗುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಯುವಕರು ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ,
ಮಿಥುನ - ಮಿಥುನ ರಾಶಿಯ ಉದ್ಯೋಗಸ್ಥರು ತಮ್ಮ ಕೆಲಸದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ, ಆದರೆ ಆ ಸಮಸ್ಯೆಗಳನ್ನು ನಿವಾರಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಕುಟುಂಬದ ಸಂತೋಷ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ದಾನ ಕಾರ್ಯಗಳನ್ನು ಮಾಡಿ. ಆರೋಗ್ಯದ ದೃಷ್ಟಿಯಿಂದ ದಿನವು ಸಾಮಾನ್ಯವಾಗಿದೆ.
ಕಟಕ- ಆರ್ಥಿಕ ದೃಷ್ಟಿಕೋನದಿಂದ ಈ ರಾಶಿಯ ವ್ಯಾಪಾರ ವರ್ಗಕ್ಕೆ ದಿನವು ಸಾಮಾನ್ಯವಾಗಿದೆ. ಸಂಜೆ ಲಕ್ಷ್ಮಿ ದೇವಿಗೆ ಆರತಿ ಬೆಳಗಿ ಭಜನೆಗಳನ್ನು ಮಾಡಿ, ಇದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.
ಸಿಂಹ - ಸಿಂಹ ರಾಶಿಯ ಜನರು ಸಹೋದ್ಯೋಗಿಗಳಿಂದ ಬೆಂಬಲವನ್ನು ಪಡೆಯುತ್ತಾರೆ. ಇಂದು ನೀವು ಕೆಲ ವಿಷಯದಲ್ಲಿ ಅದೃಷ್ಟಶಾಲಿಯಾಗುತ್ತೀರಿ. ದೈಹಿಕ ವ್ಯಾಯಾಮದತ್ತ ಗಮನ ಹರಿಸಬೇಕು,
ಕನ್ಯಾ ರಾಶಿ - ಕನ್ಯಾ ರಾಶಿಯ ಜನರು ಕೆಲ ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಕೆಲಸದ ಬಗ್ಗೆ ನಿರ್ಲಕ್ಷ್ಯ ಬೇಡ. ಉದ್ಯಮಿಗಳು ಹೂಡಿಕೆ ಮಾಡಲು ಉತ್ತಮ ಅವಕಾಶಗಳನ್ನು ಪಡೆಯುತ್ತಾರೆ.
ತುಲಾ - ತುಲಾ ರಾಶಿಯವರಿಗೆ ಇಂದು ಹೆಚ್ಚು ತಾಳ್ಮೆ ಬೇಕು, ಕೆಲವೊಮ್ಮೆ ಕೆಲಸ ಮಾಡದಿರುವ ಆಲೋಚನೆಗಳು ಅವರ ಮನಸ್ಸಿನಲ್ಲಿ ಬರಬಹುದು. ನಿಮ್ಮ ಬಗ್ಗೆ ಅಸೂಯೆ ಪಟ್ಟ ಶತ್ರುಗಳು ಮತ್ತು ಜನರಿಂದ ದೂರವಿರಬೇಕು.
ವೃಶ್ಚಿಕ ರಾಶಿ - ವೃಶ್ಚಿಕ ರಾಶಿಯ ಜನರು ತಮ್ಮ ಕೆಲಸವನ್ನು ನಿಯಮಾನುಸಾರ ಮಾಡಬೇಕು, ಸಮಯಕ್ಕೆ ಸರಿಯಾಗಿ ಕೆಲಸವನ್ನು ಪ್ರಾರಂಭಿಸಬೇಕು. ಈ ದಿನವು ಆರ್ಥಿಕ ಸಮಸ್ಯೆಗಳಿಂದ ದೂರವಿರುತ್ತೀರಿ.
ಧನು ರಾಶಿ - ಧನು ರಾಶಿಯ ಜನರು ಮಾಡುವ ಕಠಿಣ ಕೆಲಸವನ್ನು ಸಂಸ್ಥೆಯು ಲಾಭದ ರೂಪದಲ್ಲಿ ಸ್ವೀಕರಿಸಬಹುದು, ಯುವಕರು ಸಾಮಾಜಿಕ ವಿಷಯಗಳ ಬಗ್ಗೆ ಸ್ವಲ್ಪ ಎಚ್ಚರದಿಂದಿರಬೇಕು, ಏನಾದರೂ ಮಾಡುವ ಅಥವಾ ಹೇಳುವ ಮೊದಲು ಎರಡು ಬಾರಿ ಯೋಚಿಸಿ.
ಮಕರ ರಾಶಿ - ಈ ರಾಶಿಯ ಜನರು ಶಾಂತ ಮನಸ್ಸಿನಿಂದ ಕೆಲಸ ಮಾಡಬೇಕು, ವ್ಯಾಪಾರ ವರ್ಗವು ಪ್ರಚಾರದತ್ತ ಗಮನ ಹರಿಸಬೇಕು. ವಿದ್ಯಾರ್ಥಿಗಳ ಕಲಿಕೆಯ ಸಾಮರ್ಥ್ಯವು ಅಭಿವೃದ್ಧಿಗೊಳ್ಳುತ್ತದೆ, ಬೆಲ್ಲದಿಂದ ಮಾಡಿದ ಸಿಹಿಯನ್ನು ಇಂದು ದಾನ ಮಾಡಿದರೆ ಒಳ್ಳೆಯದು.
ಕುಂಭ: ಈ ರಾಶಿಯ ಜನರು ಕೆಲ ವಿಷಯಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ವಿದ್ಯಾರ್ಥಿಗಳು ಓದಿನ ಹೆಚ್ಚಿನ ಗಮನ ಹರಿಸಬೇಕು.
ಮೀನ ರಾಶಿ - ಮೀನ ರಾಶಿಯ ಜನರು ಯಾರ ವಿವಾದದಲ್ಲೂ ಮಧ್ಯಪ್ರವೇಶಿಸದಿರುವುದು ಉತ್ತಮ. ಆರ್ಥಿಕ ಬೆಳವಣಿಗೆಯ ಪ್ರಮಾಣವು ಹೆಚ್ಚಾಗುತ್ತದೆ. ಆರೋಗ್ಯದ ಬಗ್ಗೆ ವಿಶೇಷವಾಗಿ ಜಾಗರೂಕರಾಗಿರಬೇಕು.
ಇದನ್ನೂ ಓದಿ: ವರ್ಷದ ಪ್ರಥಮ ಹಬ್ಬ ಮಕರ ಸಂಕ್ರಾಂತಿ: ಈ 5 ರಾಶಿಗೆ ತರಲಿದೆ ಸುಖದ ಸುಪ್ಪತ್ತಿಗೆ.. ಇನ್ಮುಂದೆ ಕಷ್ಟ-ಚಿಂತೆ ಎಲ್ಲವೂ ದೂರ ದೂರ!
(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.