Viral Vdieo: ಜೇಮ್ಸ್ ಆಂಡರ್ಸನ್ ಗೆ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಏನು ಮಾಡಿದ್ದಾರೆ ನೋಡಿ..!
ಈ ಪಂದ್ಯದಲ್ಲಿ ಮೊದಲ ಮತ್ತು 2ನೇ ಇನ್ನಿಂಗ್ಸ್ ನಲ್ಲಿ ಒಟ್ಟು 8 ವಿಕೆಟ್ ಪಡೆದ ಸಿರಾಜ್ ಭಾರತದ ಪರ ಬೌಲಿಂಗ್ ಮಿಂಚಿದರು.
ನವದೆಹಲಿ: ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ಮತ್ತು ಭಾರತ ನಡುವೆ ನಡೆದ 2ನೇ ಟೆಸ್ಟ್(ENG vs IND 2nd Test) ನ 5ನೇ ದಿನದಾಟವು ಅತ್ಯಂತ ಮಹತ್ವವನ್ನು ಪಡೆದಕೊಂಡಿತ್ತು. ಉಭಯ ಆಟಗಾರರ ಫನ್ನಿ ಫನ್ನಿ ಸನ್ನಿವೇಷಗಳಿಗೆ ಮೈದಾನವು ಸಾಕ್ಷಿಯಾಯಿತು. ಪರಸ್ಪರ ಕಿಚಾಯಿಸುತ್ತಾ, ಕಾಲೆಳೆಯುತ್ತಾ ಆಟವಾಡಿದ್ದು ಅಭಿಮಾನಿಗಳಿಗೆ ಭರ್ಜರಿ ಮನರಂಜನೆಯನ್ನು ಒದಗಿಸಿತ್ತು. ಟೀಂ ಇಂಡಿಯಾ ವೇಗಿ ಜಸ್‌ಪ್ರೀತ್ ಬುಮ್ರಾ ಬೌನ್ಸರ್‌ಗಳ ಮೇಲೆ ಬೌನ್ಸರ್ ಎಸೆಯುವ ಮೂಲಕ ಇಂಗ್ಲೆಂಡ್ ತಂಡದ ಆಟಗಾರರನ್ನು ಸುಸ್ತು ಮಾಡಿದರು.
Jasprit Bumrah) ಉದ್ದೇಶಪೂರ್ವಕವಾಗಿಯೇ ಬೌನ್ಸರ್ ಎಸೆಯುವ ಮೂಲಕ ಇಂಗ್ಲೆಂಡ್ ಆಟಗಾರರನ್ನು ಗಲಿಬಿಲಿಗೊಳಿಸಿದ್ದರು. ಹೀಗಾಗಿ ಆಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು ಅಂತಾ ಅಭಿಮಾನಿಗಳು ಮತ್ತು ಕ್ರಿಕೆಟ್ ತಜ್ಞರು ಮಾತನಾಡಿಕೊಂಡಿದ್ದಾರೆ. 5ನೇ ದಿನದಾಟ ಆರಂಭವಾಗುತ್ತಿದ್ದಂತೆ ಪಂದ್ಯ ರೋಚಕ ತಿರುವು ಪಡೆದುಕೊಂಡಿತ್ತು. ಮೊಹಮ್ಮದ್ ಶಮಿ ಜೊತೆ ಬುಮ್ರಾ ಬ್ಯಾಟಿಂಗ್ ಮಾಡುತ್ತಿದ್ದಾಗ ಜೋಸ್ ಬಟ್ಲರ್ ಮತ್ತು ಇತರ ಇಂಗ್ಲೆಂಡ್ ಆಟಗಾರರು ಅವರೊಂದಿಗೆ ಮಾತಿನ ಚಕಮಕಿ ನಡೆಸಿದ್ದರು. ಬುಮ್ರಾ ಕೂಡ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಸಿಕ್ಕ ಅವಕಾಶದಲ್ಲಿಯೇ ಇಂಗ್ಲೆಂಡ್ ಆಟಗಾರರನ್ನು ತಮ್ಮ ಕಟು ಪದಗಳಲ್ಲಿ ಕಿಚಾಯಿಸಿದರು. ಬುಮ್ರಾ ಮಾತಿನ ಹೊಡೆತಕ್ಕೆ ಇಂಗ್ಲೆಂಡ್ ಆಟಗಾರರು ಸುಸ್ತಾಗಿಹೋಗಿದ್ದರು.
ಇದನ್ನೂ ಓದಿ: T-20 ವಿಶ್ವಕಪ್ ಕುರಿತು ಕ್ಯಾಪ್ಟನ್ ಕೊಹ್ಲಿ-BCCI ಅಧಿಕಾರಿಗಳ ನಡುವೆ ಅನೌಪಚಾರಿಕ ಸಭೆ
ಇದಲ್ಲದೆ ಮತ್ತೊಂದು ವಿಡಿಯೋ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ವೇಗಿ ಮೊಹಮ್ಮದ್ ಸಿರಾಜ್ ಸೇರಿಕೊಂಡು ಪಂದ್ಯದ ಅಂತಿಮ ದಿನದಂದು ಜೇಮ್ಸ್ ಆಂಡರ್ಸನ್(James Anderson)ಗೆ ಕಿಚಾಯಿಸಿದ್ದಾರೆ. ಇಂಗ್ಲೆಂಡ್ ತಂಡ 120ಕ್ಕೆ 9 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಆಂಡರ್ಸನ್ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಆಗಮಿಸಿದ್ದರು . ಈ ವೇಳೆ ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಸಿರಾಜ್ ಪರಸ್ಪರ ತಲೆ ಅಲ್ಲಾಡಿಸುವ ಮೂಲಕ ಆಂಡರ್ಸನ್ ಕಾಲೆಳೆಯುತ್ತಾರೆ.
ಆಂಡರ್ಸನ್ ವಿರುದ್ಧ ಶಾರ್ಟ್ ಬಾಲ್ ಹಾಕಲು ಕೊಹ್ಲಿ ಮತ್ತು ಸಿರಾಜ್ ಯೋಜನೆ ರೂಪಿಸಿದ್ದರು. ಅದರಂತೆ ತಲೆ ಅಲ್ಲಾಡಿಸುವ ಮೂಲಕ ಆಂಡರ್ಸನ್ ವಿಕೆಟ್ ಪಡೆಯುವ ಬಗ್ಗೆ ಇಬ್ಬರೂ ಮಾಸ್ಟರ್ ಪ್ಲಾನ್ ರೂಪಿಸಿದ್ದರು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣ(Social Media)ಗಳಲ್ಲಿ ವೈರಲ್ ಆಗಿದ್ದು, ಕೊಹ್ಲಿ-ಸಿರಾಜ್ ಫನ್ನಿ ಸನ್ನಿವೇಷ ನೋಡಿ ಅಭಿಮಾನಿಗಳು ಸಖತ್ ಮನರಂಜನೆ ಪಡೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಯು.ಎಸ್.ಓಪನ್ ಟೂರ್ನಿ ತಪ್ಪಿಸಿಕೊಳ್ಳಲಿರುವ ರಾಫೆಲ್ ನಡಾಲ್
ಈ ಪಂದ್ಯದಲ್ಲಿ ಮೊದಲ ಮತ್ತು 2ನೇ ಇನ್ನಿಂಗ್ಸ್ ನಲ್ಲಿ ಒಟ್ಟು 8 ವಿಕೆಟ್ ಪಡೆದ ಸಿರಾಜ್(Mohammed Siraj)ಭಾರತದ ಪರ ಬೌಲಿಂಗ್ ಮಿಂಚಿದರು. ಹೀಗಾಗಿ ಭಾರತ 151 ರನ್ ಗಳ ಅಂತರದಿಂದ ಆಂಗ್ಲರ ವಿರುದ್ಧ ಗೆಲುವು ಸಾಧಿಸಲು ಸಾಧ್ಯವಾಯಿತು. ಐತಿಹಾಸಿಕ ಲಾರ್ಡ್ ಮೈದಾನದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಮಣಿಸುವ ಮೂಲಕ ಅವರದ್ದೇ ನೆಲದಲ್ಲಿ ಅವರಿಗೆ ಮಣ್ಣುಮುಕ್ಕಿಸಿದ ಸಾಧನೆಯನ್ನು ಕೊಹ್ಲಿ ಪಡೆ ಮಾಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ