ಭಾರತದ ಮಾಜಿ ನಾಯಕ ಮತ್ತು ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಿರತರಾಗಿದ್ದಾರೆ.  ಚೆನ್ನೈ ಟೆಸ್ಟ್‌ನಲ್ಲಿ ಹೇಳಿಕೊಳ್ಳುವಂಥ ಪ್ರದರ್ಶನ ನೀಡದೇ ಇದ್ದರೂ ಕೊಹ್ಲಿ ಕಾನ್ಪುರದಲ್ಲಿ ಉತ್ತಮವಾಗಿ ಆಡಲಿದ್ದಾರೆ ಎನ್ನುವ ನಿರೀಕ್ಷೆ ಇದೆ. ಈ ವರ್ಷ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೂಡಾ ವಿರಾಟ್ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದಾರೆ.


COMMERCIAL BREAK
SCROLL TO CONTINUE READING

2019-20ರ ನಂತರ ಮೊದಲ ಬಾರಿಗೆ ತನ್ನ ತವರು ತಂಡ ದೆಹಲಿಯ ರಣಜಿ ಟ್ರೋಫಿ ಸಂಭಾವ್ಯರ ಪಟ್ಟಿಯಲ್ಲಿ ಕೊಹ್ಲಿ ಹೆಸರು ಸೇರ್ಪಡೆಯಾಗಿದೆ.ನ್ಯೂಜಿಲೆಂಡ್ ವಿರುದ್ಧದ ಸರಣಿ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ನಡುವೆ ಕೊಹ್ಲಿ  ರಣಜಿ ಟ್ರೋಫಿಯನ್ನು ಆಡುವ ಸಾಧ್ಯತೆ ಕಡಿಮೆ ಎಂದೇ ಹೇಳಲಾಗುತ್ತಿದೆ.ಆದರೆ, ಸಂಭಾವ್ಯ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.ಭಾರತದ ಪ್ರಮುಖ ದೇಶೀಯ ರೆಡ್-ಬಾಲ್ ಪಂದ್ಯಾವಳಿಗಾಗಿ 84 ಆಟಗಾರರ ದೀರ್ಘ ಪಟ್ಟಿಯಲ್ಲಿ ಕೊಹ್ಲಿ ಮಾತ್ರವಲ್ಲ,ರಿಷಬ್ ಪಂತ್ ಹೆಸರು ಕೂಡಾ ಸೇರ್ಪಡೆಯಾಗಿದೆ.ಅಕ್ಟೋಬರ್ 11 ರಂದು ರಣಜಿ ಟ್ರೋಫಿ ಆರಂಭವಾಗಲಿದೆ


ಇದನ್ನೂ ಓದಿ : W,W,W,W,W,W,W... ಒಂದೇ ಪಂದ್ಯದಲ್ಲಿ 10ಕ್ಕೆ 10 ವಿಕೆಟ್‌!‌ ಯುವ ಸ್ಪಿನ್ನರ್‌ ಆಟಕ್ಕೆ ಮನಸೋತ ಕ್ರಿಕೆಟ್‌ ಲೋಕ... ಟೀಂ ಇಂಡಿಯಾಗೆ ಸಿಕ್ಕಾಯ್ತು ಭವಿಷ್ಯದ ಅನಿಲ್‌ ಕುಂಬ್ಳೆ!


ಟೀಕೆಗೆ ಗುರಿಯಾದ ಕೊಹ್ಲಿ-ರೋಹಿತ್:
2012/13ರ ಋತುವಿನಲ್ಲಿ ಕೊನೆಯದಾಗಿ ಕೊಹ್ಲಿ ರಣಜಿ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು.ದುಲೀಪ್ ಟ್ರೋಫಿಯಲ್ಲಿ ಆಡದೇ ಇರುವುದಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು.ವಿರಾಟ್ ಹೊರತುಪಡಿಸಿ ರೋಹಿತ್ ಶರ್ಮಾ ಕೂಡಾ ಈ ಟೂರ್ನಿಯಲ್ಲಿ ಆಡಿರಲಿಲ್ಲ.ಬಿಸಿಸಿಐ ಇಬ್ಬರನ್ನೂ ವಿಶೇಷವಾಗಿ ಪರಿಗಣಿಸುತ್ತಿದೆ ಎಂದು ಈ ಬಗ್ಗೆ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಕಿಡಿ ಕಾರಿದ್ದಾರೆ. ಆಯ್ಕೆಯಾದ ಆಟಗಾರರ ಫಿಟ್ನೆಸ್ ಪರೀಕ್ಷೆಯನ್ನು ಸೆಪ್ಟೆಂಬರ್ 26 ರಂದು ನಡೆಸಲಾಗುವುದು ಎಂದು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.ಇವುಗಳಲ್ಲಿ ಅಂತಾರಾಷ್ಟ್ರೀಯ  ಪದ್ಯಗಳನ್ನು ಆಡುತ್ತಿರುವ ಆಟಗಾರರಿಗೆ ಫಿಟ್ನೆಸ್ ಪರೀಕ್ಷೆ ಇರುವುದಿಲ್ಲ.


ಲಿಸ್ಟ್ ನಿಂದ ಇಶಾಂತ್ ಶರ್ಮಾ ಔಟ್ : 
ಪಟ್ಟಿಯಲ್ಲಿರುವ ಹೆಚ್ಚಿನ ಆಟಗಾರರು ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ (DPL 2024) ಭಾಗವಹಿಸಿದ್ದರು.ವೇಗಿಗಳಾದ ನವದೀಪ್ ಸೈನಿ,ಮಯಾಂಕ್ ಯಾದವ್, ಹರ್ಷಿತ್ ರಾಣಾ, ಹಿಮಾಂಶು ಚೌಹಾಣ್ ಮತ್ತು ದಿವಾಜ್ ಮೆಹ್ರಾ ಸಂಭಾವ್ಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.ಆದರೆ,ಈ ಪಟ್ಟಿಯಿಂದ ಇಶಾಂತ್ ಶರ್ಮಾ ಹೆಸರು ನಾಪತ್ತೆಯಾಗಿದೆ. 


ಇದನ್ನೂ ಓದಿ:17 ಸೀಸನ್‌ ಮುಗಿದರೂ ಈ ಒಂದು ಕಾರಣಕ್ಕೆ ಇನ್ನೂ ಆರ್‌ಸಿಬಿಯಲ್ಲೇ ಆಡುತ್ತಿದ್ದೇನೆ... ಸತ್ಯ ಬಹಿರಂಗಪಡಿಸಿದ ವಿರಾಟ್‌ ಕೊಹ್ಲಿ ಹೇಳಿದ್ದೇನು?


ರಣಜಿ ಟ್ರೋಫಿ 2024-25ಕ್ಕೆ ದೆಹಲಿಯ 84 ಸದಸ್ಯರ ಸಂಭಾವ್ಯ ಪಟ್ಟಿ :
ವಿರಾಟ್ ಕೊಹ್ಲಿ, ರಿಷಬ್ ಪಂತ್, ಹಿಮ್ಮತ್ ಸಿಂಗ್, ಪ್ರಾಂಶು ವಿಜಯನ್, ಅನಿರುದ್ಧ್ ಚೌಧರಿ, ಕ್ಷಿತಿಜ್ ಶರ್ಮಾ, ವೈಭವ್ ಕಂಡ್ಪಾಲ್, ಸಿದ್ಧಾಂತ್ ಬನ್ಸಾಲ್, ಸಮರ್ಥ್ ಸೇಠ್, ಜಾಂಟಿ ಸಿಧು, ಸಿದ್ಧಾಂತ್ ಶರ್ಮಾ, ತಿಶಾಂತ್ ದಬ್ಲಾ, ನವದೀಪ್ ಸೈನಿ, ಹರ್ಷ್ ತ್ಯಾಗಿ, ಲಕ್ಷ್ಯ ಥರೇಜಾ (ವಿಕೆಟ್), ಸುಮಿತ್ಕೇರ್ ಥರೇಜಾ (ವಿಕೆಟ್), , ಶಿವಾಂಕ್ ವಶಿಷ್ಠ, ಸಲೀಲ್ ಮಲ್ಹೋತ್ರಾ, ಆಯುಷ್ ಬದೋನಿ, ಗಗನ್ ವಾಟ್ಸ್, ರಾಹುಲ್ ಎಸ್ ಡಾಗರ್, ಹರ್ಷಿತ್ ಶೋಕಿನ್, ಮಯಾಂಕ್ ರಾವತ್, ಅನುಜ್ ರಾವತ್ (ವಿಕೆಟ್ ಕೀಪರ್), ಸಿಮರ್ಜೀತ್ ಸಿಂಗ್, ಶಿವಂ ಕುಮಾರ್ ತ್ರಿಪಾಠಿ, ಕುಲದೀಪ್ ಯಾದವ್, ಲಲಿತ್ ಯಾದವ್, ಶಿವಂ ಕ್ವಿಷ್ ಕುಮಾರ್ ಶಿವಂ ಗುಪ್ತಾ (ವಿಕೆಟ್ ಕೀಪರ್), ವೈಭವ್ ಶರ್ಮಾ, ಜಿತೇಶ್ ಸಿಂಗ್, ರೋಹಿತ್ ಯಾದವ್, ಸುಮಿತ್ ಕುಮಾರ್, ಅನ್ಮೋಲ್ ಶರ್ಮಾ, ಕೇಶವ್ ದಾಬಾ, ಸನತ್ ಸಾಂಗ್ವಾನ್, ಶುಭಂ ಶರ್ಮಾ (ವಿಕೆಟ್ ಕೀಪರ್), ಆರ್ಯನ್ ಚೌಧರಿ, ಆರ್ಯನ್ ರಾಣಾ, ಭಗವಾನ್ ಸಿಂಗ್, ಪ್ರಣವ್ ರಾಜವಂಶಿ (ವಿಕೆಟ್ ಕೀಪರ್), , ಮೋನೆ ಗ್ರೆವಾಲ್, ಕುನ್ವರ್ ಬಿಧುರಿ, ನಿಖಿಲ್ ಸಾಂಗ್ವಾನ್, ಪುನೀತ್ ಚಾಹಲ್, ಪ್ರಿಯಾಂಶ್ ಆರ್ಯ, ಯಶ್ ಧುಲ್, ಪ್ರಿನ್ಸ್ ಯಾದವ್, ಹರ್ಷಿತ್ ರಾಣಾ, ಮಯಾಂಕ್ ಯಾದವ್, ಸುಯ್ಯಾಶ್ ಶರ್ಮಾ, ಅರ್ಪಿತ್ ರಾಣಾ, ದಿವಾಜ್ ಮೆಹ್ರಾ, ಸುಜಲ್ ಸಿಂಗ್, ಹಾರ್ದಿಕ್ ಶರ್ಮಾ, ಹಿಮಾಂಶು ಚೌಹಾನ್, ಅನುಷ್ತ್ ದೋಸೆಜಾ, ಆಯ್ಕಿ ರಾಜೇಶ್ ಕುಮಾರ್, ಧ್ರುವ ಕೌಶಿಕ್, ಅಂಕುರ್ ಕೌಶಿಕ್, ಕ್ರಿಶ್ ಯಾದವ್, ವಂಶ್ ಬೇಡಿ, ಯಶ್ ಸೆಹ್ರಾವತ್, ವಿಕಾಸ್ ಸೋಲಂಕಿ, ರಾಜೇಶ್ ಶರ್ಮಾ, ತೇಜಸ್ವಿ ದಹಿಯಾ (ವಿಕೆಟ್ ಕೀಪರ್), ರೌನಕ್ ವಘೇಲಾ, ಮನ್‌ಪ್ರೀತ್ ಸಿಂಗ್, ರಾಹುಲ್ ಗೆಹ್ಲೋಟ್, ಆರ್ಯನ್ ಸೆಹ್ರಾವತ್, ಶಿವಂ ಶರ್ಮಾ ಸಿಂಘಾಲ, ಯೋಗೇಶ್ ಸಿಂಗ್, ದೀಪೇಶ್ ಬಲಿಯಾನ್, ಸಾಗರ್ ತನ್ವರ್, ರಿಷಬ್ ರಾಣಾ, ಅಖಿಲ್ ಚೌಧರಿ, ದಿಗ್ವೇಶ್ ರಾಠಿ, ಸಾರ್ಥಕ್ ರಂಜನ್, ಅಜಯ್ ಗುಲಿಯಾ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ