Shoaib Khan 10 Wicket: ಕ್ರಿಕೆಟ್ ಇತಿಹಾಸದಲ್ಲಿ ಬೌಲರ್‌ಗಳು ಇನ್ನಿಂಗ್ಸ್ʼನಲ್ಲಿ ಎಲ್ಲಾ 10 ವಿಕೆಟ್ʼಗಳನ್ನು ಕಬಳಿಸಿದ ಸಂದರ್ಭಗಳು ಬಹಳ ಕಡಿಮೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಂತಹ ಸಾಧನೆ ಕೇವಲ ಮೂರು ಬಾರಿ ನಡೆದಿದೆ. ಇಂಗ್ಲೆಂಡ್ʼನ ಜಿಮ್ ಲೇಕರ್, ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ ಮತ್ತು ಏಜಾಜ್ ಪಟೇಲ್ (ನ್ಯೂಜಿಲೆಂಡ್) ಈ ಸಾಧನೆ ಮಾಡಿದ್ದಾರೆ. ಮೂವರೂ ಟೆಸ್ಟ್ ಕ್ರಿಕೆಟ್‌ನಲ್ಲಿ ಇಂತಹ ಸಾಧನೆ ಮಾಡಿದ್ದಾರೆ.
ಇದೀಗ ಮುಂಬೈನ ಪ್ರತಿಷ್ಠಿತ ಕಂಗಾ ಲೀಗ್‌ನಲ್ಲಿ ಬೌಲರ್ ಒಬ್ಬ ಇನ್ನಿಂಗ್ಸ್‌ನಲ್ಲಿ 10 ರಲ್ಲಿ 10 ವಿಕೆಟ್ ಪಡೆದು ಮಿಂಚಿದ್ದಾರೆ. ಈ ಬೌಲರ್ ಹೆಸರು ಶೋಯಬ್ ಖಾನ್. ಎಡಗೈ ಸ್ಪಿನ್ನರ್ ಶೋಯೆಬ್ ಕಂಗಾ ಲೀಗ್ ಇ-ವಿಭಾಗದ ಗೌಡ್ ಸಾರಸ್ವತ್ ಕ್ರಿಕೆಟ್ ಕ್ಲಬ್ (ಗೌಡ ಸಾರಸ್ವತ್ ಸಿಸಿ) ಪರ ಆಡುತ್ತಿದ್ದರು. ಸರ್ಕಾರಿ ಕಾನೂನು ಕಾಲೇಜಿನ ಪಿಚ್ʼನಲ್ಲಿ ಯಾವುದೇ ವಿರಾಮವಿಲ್ಲದೆ ನಿರಂತರವಾಗಿ 17.4 ಓವರ್ ಬೌಲ್ ಮಾಡಿ ಜಾಲಿ ಕ್ರಿಕೆಟರ್ಸ್ʼನ ಎಲ್ಲಾ 10 ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ್ದಾರೆ.
ಶೋಯೆಬ್ ಖಾನ್ ಅವರ ಕಿಲ್ಲರ್ ಬೌಲಿಂಗ್ ನಿಂದಾಗಿ ಜಾಲಿ ಕ್ರಿಕೆಟರ್ಸ್ ತಂಡ 67 ರನ್ ಗಳಿಗೆ ಆಲೌಟ್ ಆಯಿತು. ಪ್ರತ್ಯುತ್ತರವಾಗಿ ಗೌಡ ಸಾರಸ್ವತ್ ತಂಡ ಅಂಕುರ್ ದಿಲೀಪ್‌ಕುಮಾರ್ ಸಿಂಗ್ ಅವರ ಅಜೇಯ 27 ರನ್ʼಗಳ ನೆರವಿನಿಂದ ಆರು ವಿಕೆಟ್ʼಗೆ 69 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿದರು. ಇದರ ನಂತರ, ಜಾಲಿ ಕ್ರಿಕೆಟರ್ಸ್ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿತು.
ಇತಿಹಾಸ:
1956 ರಲ್ಲಿ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಜಿಮ್ ಲೇಕರ್ ಅವರು ಆಸ್ಟ್ರೇಲಿಯಾ ವಿರುದ್ಧ 53 ರನ್‌ಗಳಿಗೆ 10 ವಿಕೆಟ್‌ಗಳನ್ನು ಕಬಳಿಸಿದ ಅದ್ಭುತ ಅಂಕಿಅಂಶಗಳನ್ನು ದಾಖಲಿಸಿದ್ದಾರೆ. 1999ರಲ್ಲಿ ನವದೆಹಲಿಯಲ್ಲಿ ಪಾಕಿಸ್ತಾನದ ವಿರುದ್ಧ 26.3 ಓವರ್‌ಗಳಲ್ಲಿ 74 ರನ್ ನೀಡಿ ಅನಿಲ್ ಕುಂಬ್ಳೆ 10 ವಿಕೆಟ್ ಕಬಳಿಸಿದ್ದರು. ನಂತರ ನ್ಯೂಜಿಲೆಂಡ್‌ನ ಅಜಾಜ್ ಪಟೇಲ್ ಡಿಸೆಂಬರ್ 2021 ರಲ್ಲಿ ಭಾರತ ವಿರುದ್ಧದ ವಾಂಖೆಡೆ ಟೆಸ್ಟ್ ಪಂದ್ಯದಲ್ಲಿ 119 ರನ್‌ಗಳಿಗೆ 10 ವಿಕೆಟ್ ಪಡೆದರು.
ಇದನ್ನೂ ಓದಿ: 17 ಸೀಸನ್ ಮುಗಿದರೂ ಈ ಒಂದು ಕಾರಣಕ್ಕೆ ಇನ್ನೂ ಆರ್‌ಸಿಬಿಯಲ್ಲೇ ಆಡುತ್ತಿದ್ದೇನೆ...ವಿರಾಟ್ ಕೊಹ್ಲಿ
ಮಾಜಿ ಕ್ರಿಕೆಟಿಗ ಡಾ.ಹೊರ್ಮಸ್ಜಿ ಕಂಗಾ ಅವರ ಗೌರವಾರ್ಥ ಕಂಗಾ ಲೀಗ್ ಅನ್ನು ಪ್ರಾರಂಭಿಸಲಾಯಿತು. ಹೊರ್ಮಸ್ಜಿ ಕಂಗಾ ಅವರು 43 ಪ್ರಥಮ ದರ್ಜೆ ಪಂದ್ಯಗಳಲ್ಲಿ 1905 ರನ್ ಗಳಿಸಿದ್ದಾರೆ ಮತ್ತು 33 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ಕಂಗಾ ಲೀಗ್ ಅನ್ನು ಮುಂಬೈನ ವಿವಿಧ ಮೈದಾನಗಳಲ್ಲಿ ಆಡಲಾಗುತ್ತದೆ - ಆಜಾದ್ ಮೈದಾನ, ಶಿವಾಜಿ ಪಾರ್ಕ್, ಕ್ರಾಸ್ ಮೈದಾನ ಇತ್ಯಾದಿ. ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಕೂಡ ಈ ಲೀಗ್‌ನಲ್ಲಿ ಆಡಿದ್ದಾರೆ. ಸಚಿನ್ 1984 ರಲ್ಲಿ ಜಾನ್ ಬ್ರೈಟ್ ಕ್ರಿಕೆಟ್ ಕ್ಲಬ್‌ಗಾಗಿ 11 ನೇ ವಯಸ್ಸಿನಲ್ಲಿ ಈ ಲೀಗ್‌ಗೆ ಪಾದಾರ್ಪಣೆ ಮಾಡಿದರು. ಅವರ ಮಗ ಅರ್ಜುನ್ ತೆಂಡೂಲ್ಕರ್ ಕೂಡ 2013 ರಲ್ಲಿ ಕಂಗಾ ಲೀಗ್‌ಗೆ ಪಾದಾರ್ಪಣೆ ಮಾಡಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.