ವಿರಾಟ್ ಕೊಹ್ಲಿಯಿಂದ ದ್ವಿಶತಕದ ಸಾಧನೆ
ಇಂದು ಅಂತರಾಷ್ಟ್ರೀಯ ಕ್ರಿಕೆಟ್ ಟೆಸ್ಟ್ ಪಂದ್ಯವೊಂದರಲ್ಲಿ ದ್ವಿಶತಕ ಗಳಿಸುವುದರ ಮೂಲಕ ಅತಿಹೆಚ್ಚು ದ್ವಿಶತಕಗಳನ್ನು ಗಳಿಸಿದ ನಾಯಕ ಎನ್ನುವ ಹಿರಿಮೆಗೆ ಪಾತ್ರರಾದರು
ನವದೆಹಲಿ: ನಾಯಕ ವಿರಾಟ ಕೊಹ್ಲಿ ತಮ್ಮ ಆಟದ ಯಶೋಗಾತೆಯನ್ನು ಮುಂದುವರೆಸಿದ್ದು ಅದರ ಭಾಗವಾಗಿ ಇಂದು ಇಲ್ಲಿನ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ದದ ಮೂರನೆಯ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಅಜೇಯ ದ್ವಿಶತಕವನ್ನು ಗಳಿಸಿದ್ದಾರೆ.
ನಿನ್ನೆ ಭಾರತ ತಂಡವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ನಿರ್ಧಾರಕ್ಕೆ ತಕ್ಕಂತೆ ಬ್ಯಾಟ ಮೂಲಕ ರನ್ನಗಳ ಸುರಿಮಳೆಯನ್ನು ಸುರಿಸುತ್ತಿದಾರೆ.ಇಂದು ದ್ವಿಶತಕದ ಸಾಧನೆಯನ್ನು ಮಾಡುವುದರ ಮೂಲಕ ಟೆಸ್ಟ್ ಪಂದ್ಯವೊಂದರಲ್ಲಿ ನಾಯಕನಾಗಿ ಅತಿಹೆಚ್ಚು ದ್ವಿಶತಕಗಳನ್ನು ಗಳಿಸಿದ ಸಾಧನೆಗೈದರು.ಇದನ್ನು ಕೇವಲ 238 ಎಸೆತಗಳಲ್ಲಿ 200 ರನ್ ಗಳಿಸಿದ ಕೊಹ್ಲಿ ಹಲವಾರು ದಾಖಲೆಗಳನ್ನು ತಮ್ಮದಾಗಿಸಿಕೊಂಡರು.ಇದರಲ್ಲಿ ಭಾರತದ ಪರ ಅತಿಹೆಚ್ಚು ದ್ವಿಶತಕ ಗಳಿಸಿದರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಸೆಹ್ವಾಗ್ ರ ಜೊತೆ ಸ್ಥಾನ ಹಂಚಿಕೊಂಡಿದ್ದಾರೆ.ಅಲ್ಲದೆ 1993 ರಲ್ಲಿ ವಿನೋದ ಕಾಂಬ್ಳಿ ನಂತರ ಸತತವಾಗಿ ಎರಡು ದ್ವಿಶತಕ ಗಳಿಸಿದ ಸಾಧನೆ ಮಾಡಿದರು. ಸದ್ಯ ಜಾಗತಿಕವಾಗಿ ಅತಿ ಹೆಚ್ಚು ದ್ವಿಶತಕ ಗಳಿಸಿದ ಆಟಗಾರರ ಪಟ್ಟಿಯಲ್ಲಿ 6 ಸ್ಥಾನದಲ್ಲಿದ್ದಾರೆ.ಡಾನ್ ಬ್ರಾಡ್ಮನ್ 12 ದ್ವಿಶತಕಗಳಿಂದ ಮೊದಲ ಸ್ಥಾನ ಕಾಯ್ದುಕೊಂಡಿದ್ದಾರೆ.