Virat Kohli : ಜೂನ್ 8 ರಂದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) 2023 ರ ಫೈನಲ್‌ನಲ್ಲಿ ಭಾರತವು 30/2 ರಲ್ಲಿ ಅನಿಶ್ಚಿತ ಪರಿಸ್ಥಿತಿಯಲ್ಲಿದ್ದಾಗ ವಿರಾಟ್ ಕೊಹ್ಲಿ ಪಿಚ್‌ಗೆ ಕಾಲಿಟ್ಟರು. ಆದ್ರೆ ದುರದೃಷ್ಟವಶಾತ್ 14 ರನ್‌ ಗಳಿಸುವ ಮೂಲ ಔಟ್‌ ಅದ್ರು. ಸ್ವಲ್ಪ ಸಮಯದ ನಂತರ, ರವೀಂದ್ರ ಜಡೇಜಾ ಮತ್ತು ಅಜಿಂಕ್ಯ ರಹಾನೆ ಪ್ರಯತ್ನದಲ್ಲಿ ಚೇತರಿಸಿಕೆ ಕಾಣಿಸಿಕೊಂಡಿತ್ತು.


COMMERCIAL BREAK
SCROLL TO CONTINUE READING

ಇನ್ನು ಇದೇ ವೇಳೆ, ಔಟ್‌ ಆಗಿ ಪೆವಿಲಿಯನ್‌ ಸೇರಿದ್ದ ಕೊಹ್ಲಿ ಭಾರತೀಯ ಡ್ರೆಸ್ಸಿಂಗ್ ರೂಮ್ ಕಡೆಗೆ ಮುಖ ಮಾಡಿದ್ದರು. ಅಲ್ಲಿ ಅವರು ಶುಬ್ಮನ್ ಗಿಲ್, ಇಶಾನ್ ಕಿಶನ್ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಅವರೊಂದಿಗೆ ಊಟ ಸವಿಯುತ್ತಿರುವಾಗ ಸಂಭಾಷಣೆಯಲ್ಲಿ ತೊಡಗಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.


ಇದನ್ನೂ ಓದಿ:  Wrestlers Protest: ಕುಸ್ತಿ ಪ್ರತಿಭಟನೆಗೆ ಹೊಸ ತಿರುವು, ಪೊಲೀಸ್ ರಕ್ಷಣೆಯಲ್ಲಿ ಬ್ರಿಜ್ ಭೂಷಣ್ ಮನೆ ತಲುಪಿದ ಮಹಿಳಾ ಕುಸ್ತಿಪಟು


ಆಟಗಾರರು ಸಂತೋಷದಿಂದ ಮಾತುಕತೆಯಲ್ಲಿ ತೊಡಗಿರುವ ದೃಶ್ಯ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿತ್ತು. ಅವರು ತಮ್ಮ ಕೋಪದಿಂದ ಭಾರತೀಯ ಮಾಜಿ ನಾಯಕ ವಿರಾಟ್‌ ಮೇಲೆ ಕಾಮೆಂಟ್‌ ಮತ್ತು ಟ್ರೋಲ್‌ಗಳ ಮೂಲಕ ಕಿಡಿಕಾರಿದರು. ಕೆಲವರು ಅವರನ್ನು ಸಚಿನ್ ತೆಂಡೂಲ್ಕರ್ ಅವರೊಂದಿಗೆ ಹೋಲಿಸಿ, ಅವರು WTC 2003 ಫೈನಲ್‌ನಲ್ಲಿ ಸ್ಕೋರ್ ಮಾಡಲು ವಿಫಲವಾದ ನಂತರ ಮೂರು ದಿನಗಳವರೆಗೆ ತಿನ್ನಲು ಸಚಿನ್‌ ಅವರಿಗೆ ಸಾಧ್ಯವಾಗಿರಲಿಲ್ಲ ಎನ್ನುವ ಮೂಲಕ  ವಿರಾಟ್‌ ನಡೆಗೆ ವಿರೋಧ ವ್ಯಕ್ತಪಡಿಸಿದ್ದರು.


Wrestlers Protest: 'ಆಕೆಯ ಜೊತೆಗೆ ಅನುಚಿತ ವರ್ತನೆ ನಡೆದಿತ್ತು...' ಬ್ರಿಜ್ ಭೂಷಣ್ ವಿರುದ್ಧ ಅಂತಾರಾಷ್ಟ್ರೀಯ ರೇಫರಿ ಹೇಳಿಕೆ


ಇತ್ತ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಉಲ್ಲೇಖವನ್ನು ಹಂಚಿಕೊಂಡಿದ್ದಾರೆ. "ಬಹುಶಃ ಸ್ವಾತಂತ್ರ್ಯವೆಂದರೆ ಜೀವನವು ಒಂದು ನಿರ್ದಿಷ್ಟ ಮಾರ್ಗವಾಗಿರಬೇಕು ಎಂಬ ನಂಬಿಕೆಯನ್ನು ಬಿಡುವುದು" ಎಂಬ ಉಲ್ಲೇಖವನ್ನು ಹಂಚಿಕೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.