ನವದೆಹಲಿ: ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಟಾಪ್ ಸ್ಥಾನವನ್ನು ಕಂಡುಕೊಂಡಿದ್ದ ವಿರಾಟ್ ಕೊಹ್ಲಿಗೆ ಈಗ ಕುತ್ತು ಬಂದಿದೆ. ಈ ಹಿಂದೆ ಚೆಂಡನ್ನು ವಿರೂಪಗೊಳಿಸಿದ ಕಾರಣ ಒಂದು ವರ್ಷ ಕ್ರಿಕೆಟ್ ನಿಂದ ಆಸಿಸ್ ನ ಸ್ಟೀವ್ ಸ್ಮಿತ್ ರನ್ನು ನಿಷೇಧಕ್ಕೆ ಒಳಪಡಿಸಲಾಯಿತು. ಈ ಹಿನ್ನಲೆಯಲ್ಲಿ ಕೊಹ್ಲಿ ನಿರಂತರವಾಗಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಟಾಪ್ ಸ್ಥಾನವನ್ನು ಉಳಿಸಿಕೊಂಡಿದ್ದರು.ಆದರೆ ಈಗ ಈ ಸ್ಥಾನಕ್ಕೆ ಆಪತ್ತು ಬಂದಿದೆ.



COMMERCIAL BREAK
SCROLL TO CONTINUE READING

ಈಗ ಸಧ್ಯ ಬಂದಿರುವ ರ್ಯಾಂಕಿಂಗ್ ಪ್ರಕಾರ ನ್ಯೂಜಿಲ್ಯಾಂಡ್ ತಂಡದ ಕೆನ್ ವಿಲಿಯಮ್ಸನ್ ಇನ್ನು ಏಳು ಅಂಕಗಳನ್ನು ಗಳಿಸಿದರೆ ಸಾಕು ಕೊಹ್ಲಿ ಸ್ಥಾನವನ್ನು ಅಲಂಕರಿಸಿದ್ದಾರೆ.900 ಅಂಕಗಳನ್ನು ಗಳಿಸಿದ ಮೊದಲ ನ್ಯೂಜಿಲ್ಯಾಂಡ್ ನ ಬ್ಯಾಟ್ಸಮನ್ ಎನ್ನುವ ಖ್ಯಾತಿ ಪಾತ್ರರಾಗಿದ್ದಾರೆ.


ಕೆನ್ ವಿಲಿಯಮ್ಸನ್ ಪಾಕಿಸ್ತಾನದ ವಿರುದ್ಧ ಮೂರನೇ ಮತ್ತು ಅಂತಿಮ ಟೆಸ್ಟ್ ನಲ್ಲಿ ಉತ್ತಮ ಫಾರ್ಮ್ ನಲ್ಲಿದ್ದರು ಅವರು ಕ್ರಮವಾಗಿ 89 ಮತ್ತು 139 ರನ್ ಗಳಿಸಿದರು.ಆ  ಮೂಲಕ ಈಗ 913 ಅಂಕಗಳನ್ನು ಪಡೆಯುವ ಮೂಲಕ ಆಷ್ಟ್ರೇಲಿಯಾದ ಸ್ಟೀವ್ ಸ್ಮಿತ್ ರನ್ನು ಹಿಂದಿಕ್ಕಿದ್ದಾರೆ. ವಿಶೇಷವೆಂದರೆ ಆಸಿಸ್ ವಿರುದ್ದ ಮೊದಲ ಟೆಸ್ಟ್ ನಲ್ಲಿ ಅತ್ತ್ಯುತ್ತಮ ಪ್ರದರ್ಶನ ನೀಡಿದ ಚೇತೆಶ್ವರ್ ಪೂಜಾರ್ 846 ಅಂಕಗಳನ್ನು ಗಳಿಸುವ ಮೂಲಕ ಈಗ ಟಾಪ್ 5 ರಲ್ಲಿ ಸ್ಥಾನ ಪಡೆದಿದ್ದಾರೆ.