ಪ್ಯಾರಿಸ್ ಒಲಿಂಪಿಕ್ಸ್ 2024: ಒಲಂಪಿಕ್ಸ್ ಕ್ರೀಡಾಪಟುಗಳಿಗೆ ಕೊಹ್ಲಿ ಖಡಕ್ ವಾರ್ನಿಂಗ್..!
Virat Kohli: ಭಾರತ ವಿಶ್ವದ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಭಾರತವನ್ನು ಒಂದು ಕಾಲದಲ್ಲಿ ಬೆಳವಣಿಗೆ ಇಲ್ಲದ ದೇಶ ಎಂದು ಭಾವಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. ಜಾಗತಿಕ ಟೆಕ್ ಹಬ್ ಎಂದು ಕರೆಯಲ್ಪಡುವ ಭಾರತವು ಪ್ರಸ್ತುತ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ದಾಪುಗಾಲು ಹಾಕುತ್ತಿದೆ, ಆದರೆ ಒಲಿಂಪಿಕ್ಸ್‌ನಲ್ಲಿ ಮಾತ್ರ ಹಿಂದುಳಿದಿದೆ ಎಂದು ವಿರಾಟ್ ಕೊಹ್ಲಿ ವಿಡಿಯೋದ ಮೂಲಕ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
Virat Kohli: ಭಾರತ ವಿಶ್ವದ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಭಾರತವನ್ನು ಒಂದು ಕಾಲದಲ್ಲಿ ಬೆಳವಣಿಗೆ ಇಲ್ಲದ ದೇಶ ಎಂದು ಭಾವಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. ಜಾಗತಿಕ ಟೆಕ್ ಹಬ್ ಎಂದು ಕರೆಯಲ್ಪಡುವ ಭಾರತವು ಪ್ರಸ್ತುತ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ದಾಪುಗಾಲು ಹಾಕುತ್ತಿದೆ, ಆದರೆ ಒಲಿಂಪಿಕ್ಸ್‌ನಲ್ಲಿ ಮಾತ್ರ ಹಿಂದುಳಿದಿದೆ ಎಂದು ವಿರಾಟ್ ಕೊಹ್ಲಿ ವಿಡಿಯೋದ ಮೂಲಕ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ 2024ರ ಹಿನ್ನೆಲೆಯಲ್ಲಿ, ವಿರಾಟ್ ಕೊಹ್ಲಿ ಭಾರತೀಯ ಕ್ರೀಡಾಪಟುಗಳನ್ನು ಉದ್ದೇಶಿಸಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಪದಕಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವಂತೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಡೇವಿಡ್ ವಾರ್ನರ್‌ಗೆ ಶಾಕ್ ಕೊಟ್ಟ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ..!
'ಒಂದು ಕಾಲದಲ್ಲಿ ಭಾರತವನ್ನು ಬೆಳವಣಿಗೆ ಇಲ್ಲದ ದೇಶ ಎಂದು ಮಾತ್ರ ಭಾವಿಸಲಾಗಿತ್ತು. ಇದು ಕಾಲಕ್ಕೆ ತಕ್ಕಂತೆ ಬದಲಾಗಿದೆ. ಪ್ರಸ್ತುತ, ಭಾರತವು ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರವಾಗಿದೆ ಮತ್ತು ಜಾಗತಿಕ ತಂತ್ರಜ್ಞಾನದ ಕೇಂದ್ರವಾಗಿದೆ. ಕ್ರಿಕೆಟ್, ಬಾಲಿವುಡ್ ಮತ್ತು ಸ್ಟಾರ್ಟಪ್ ಯುನಿಕಾರ್ನ್‌ಗಳ ಜೊತೆಗೆ ನಾವು ವಿವಿಧ ಕ್ಷೇತ್ರಗಳಲ್ಲಿ ದಾಪುಗಾಲು ಹಾಕುತ್ತಿದ್ದೇವೆ. ನಾವು ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶ ಎಂದು ಗುರುತಿಸಿಕೊಂಡಿದ್ದೇವೆ.
ಭಾರತ ಏನನ್ನಾದರೂ ಸಾಧಿಸಬೇಕೆಂದು ಉಳಿದಿದ್ದರೆ ಅದು ಒಲಿಂಪಿಕ್ಸ್‌ನಲ್ಲಿ ಹೆಚ್ಚು ಪದಕಗಳು ಗಳಿಸುವುದು ಮಾತ್ರ. ಈ ಬಾರಿ ಭಾರತೀಯ ಕ್ರೀಡಾಪಟುಗಳು ಹಿಂದೆಂದಿಗಿಂತಲೂ ಹೆಚ್ಚು ಪದಕಗಳನ್ನು ಗೆಲ್ಲಬೇಕು. ನನ್ನ ಸಹೋದರರು ಮತ್ತು ಸಹೋದರಿಯರು ಪದಕಗಳ ಮೇಲಿನ ಹಸಿವಿನಿಂದ ಪ್ಯಾರಿಸ್‌ಗೆ ಹೋಗುತ್ತಿದ್ದಾರೆ. ಭಾರತೀಯ ಅಥ್ಲೀಟ್‌ಗಳು ಮೈದಾನಕ್ಕೆ ಕಾಲಿಟ್ಟರೆ ಇಡೀ ರಾಷ್ಟ್ರವೇ ಅವರ ಯಶಸ್ಸಿಗಾಗಿ ಕಾತರದಿಂದ ಕಾಯುತ್ತದೆ.
ದೇಶದ ಮೂಲೆ ಮೂಲೆಯಲ್ಲೂ ಭಾರತ, ಭಾರತ ಭಾರತ ಎಂಬ ಘೋಷಣೆಗಳು ಕೇಳಿ ಬರುತ್ತಿವೆ. ದೃಢ ಸಂಕಲ್ಪದಿಂದ ಯಶಸ್ಸಿನಿಂದ ಇಂಚು ದೂರದಲ್ಲಿದ್ದವರ ಮುಖಗಳನ್ನು ಒಮ್ಮೆ ನೆನಪಿಸಿಕೊಳ್ಳಿ. ಜೈಹಿಂದ್, ಗುಡ್ ಲಕ್ ಇಂಡಿಯಾ' ಎಂದು ವಿರಾಟ್ ಕೊಹ್ಲಿ ವಿಡಿಯೋದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಪತಿಯಿಂದ ವಿಚ್ಛೇದನ ಪಡೆದ ರೋಹಿತ್ ಶರ್ಮಾ ಮಾಜಿ ಪ್ರೇಯಸಿ..!ಆಧ್ಯಾತ್ಮ ಆಯ್ದುಕೊಂಡಿದ್ದೇಕೆ ಸುಂದರಿ..?
ಪ್ಯಾರಿಸ್ ಒಲಿಂಪಿಕ್ಸ್‌ಗೆ ವೇದಿಕೆ ಸಿದ್ಧವಾಗಿದೆ. ಇನ್ನು 10 ದಿನಗಳಲ್ಲಿ ಅದ್ಧೂರಿ ಉದ್ಘಾಟನೆ ಆರಂಭವಾಗಲಿದೆ. ಜುಲೈ 26 ರಿಂದ ಆಗಸ್ಟ್ 11 ರವರೆಗೆ ನಡೆಯಲಿರುವ ಈ ಮೆಗಾ ಈವೆಂಟ್‌ನಲ್ಲಿ ಕ್ರೀಡಾಪಟುಗಳು 32 ಕ್ರೀಡೆಗಳಲ್ಲಿ 329 ಸ್ಪರ್ಧೆಗಳಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಲಿದ್ದಾರೆ.
ಭಾರತದಿಂದ ಒಟ್ಟು 111 ಕ್ರೀಡಾಪಟುಗಳು 16 ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ. ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ 124 ಅಥ್ಲೀಟ್‌ಗಳು ಕಣಕ್ಕೆ ಇಳಿದಿದ್ದರೆ, ಈ ಬಾರಿ ಈ ಸಂಖ್ಯೆ 111ಕ್ಕೆ ಇಳಿದಿದೆ. ಕ್ರೀಡೆಗಳ ಸಂಖ್ಯೆಯನ್ನು 18 ರಿಂದ 16 ಕ್ಕೆ ಇಳಿಸಲಾಗಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಫೆನ್ಸಿಂಗ್ ಮತ್ತು ಜಿಮ್ನಾಸ್ಟಿಕ್ಸ್ ಸ್ಪರ್ಧೆಗಳಲ್ಲಿ ಅರ್ಹತೆ ಪಡೆದ ಭಾರತದ ಆಟಗಾರರು ಈ ಬಾರಿ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ