4-1 ಅಂತರದಲ್ಲಿ ಟೆಸ್ಟ್ ಸೋತಿದ್ದಕ್ಕೆ ವಿರಾಟ್ ಕೊಹ್ಲಿ ಹೇಳಿದ ಈ ಮಾತನ್ನೊಮ್ಮೆ ಓದಿ
ಭಾರತ ತಂಡವು ಇಂಗ್ಲೆಂಡ ವಿರುದ್ದ 4-1 ಅಂತರದಲ್ಲಿ ಹಿನಾಯವಾಗಿ ಸೋತಿದೆ.ಆದರೆ ತಂಡದ ನಾಯಕ ಕೊಹ್ಲಿ ಮಾತ್ರ ಇದನ್ನು ಸೋಲನ್ನು ಒಪ್ಪಿಕೊಂಡಿಲ್ಲ ಮತ್ತು ತಂಡ ಟೂರ್ನಿಯೂದ್ದಕ್ಕೂ ನೀಡಿದ ಪ್ರದರ್ಶನವನ್ನು ಕೊಂಡಾಡಿದ್ದಾರೆ.
ನವದೆಹಲಿ: ಭಾರತ ತಂಡವು ಇಂಗ್ಲೆಂಡ ವಿರುದ್ದ 4-1 ಅಂತರದಲ್ಲಿ ಹಿನಾಯವಾಗಿ ಸೋತಿದೆ.ಆದರೆ ತಂಡದ ನಾಯಕ ಕೊಹ್ಲಿ ಮಾತ್ರ ಇದನ್ನು ಸೋಲನ್ನು ಒಪ್ಪಿಕೊಂಡಿಲ್ಲ ಮತ್ತು ತಂಡ ಟೂರ್ನಿಯೂದ್ದಕ್ಕೂ ನೀಡಿದ ಪ್ರದರ್ಶನವನ್ನು ಕೊಂಡಾಡಿದ್ದಾರೆ.
ಪ್ರಶಸ್ತಿ ವಿತರಣಾ ಸಮಾರಂಭದ ನಂತರ ಮಾತನಾಡಿದ ವಿರಾಟ್ ಕೊಹ್ಲಿ "4-1 ಅಂತರದ ಸ್ಕೋರ್ ನಿಜಕ್ಕೂ ಭಾರತ ತಂಡ ಹೇಗೆ ಆಡಿದೆ ಎನ್ನುವುದಕ್ಕೆ ಪ್ರತಿಬಿಂಬವೇನಲ್ಲ, ಆದರೆ ಲಾರ್ಡ್ಸ್ ಟೆಸ್ಟ್ ಒಂದನ್ನು ಹೊರತುಪಡಿಸಿ ಭಾರತ ಅಷ್ಟು ಕೆಟ್ಟದಾಗಿ ಆಡಿಲ್ಲ ಎಂದು ತಿಳಿಸಿದರು.
ಇನ್ನು ಮುಂದುವರೆದು ಈ ಟೆಸ್ಟ್ ಸರಣಿ ಮೂಲಕ ಹಲವು ಸಕಾರಾತ್ಮಕ ಅಂಶಗಳನ್ನು ತಂಡವು ಕಲಿತಿದೆ. ಮುಂದಿನ ದಿನಗಳಲ್ಲಿ ಅದನ್ನು ಅಳವಡಿಸಬೇಕು ಎಂದು ತಿಳಿಸಿದರು.ಅಂತಿಮ ಪಂದ್ಯದಲ್ಲಿ ಭಾರತ ಕನ್ನಡಿಗ ರಾಹುಲ್(149) ಮತ್ತು ರಿಶಬ್ ಪಂತ್(114) ಶತಕದ ನಡುವೆಯೂ ಓವೆಲ್ ಟೆಸ್ಟ್ ನಲ್ಲಿ ಭಾರತ 118 ರನ್ ಗಳ ಅಂತರದಿಂದ ಸೋಲನ್ನು ಅನುಭವಿಸಿತ್ತು.