ನವ ದೆಹಲಿ : ಇಲ್ಲಿನ ಫಿರೋಝೇಶಾ ಕೋಟ್ಲಾದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವಿನ ಮೂರನೇ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ಟೆಸ್ಟ್ ಪಂದ್ಯಗಳಲ್ಲಿ 5000 ರನ್ ಗಳಿಸಿದ 11 ನೇ ಭಾರತೀಯ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. 



COMMERCIAL BREAK
SCROLL TO CONTINUE READING

ಅಲ್ಲದೆ, 105 ಇನ್ನಿಂಗ್ಸ್ನಲ್ಲಿ ವೇಗವಾಗಿ 5000 ರನ್​ ಗಡಿ ದಾಟಿದ ನಾಲ್ಕನೇ ಭಾರತೀಯ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಸುನಿಲ್​ ಗವಾಸ್ಕರ್​(95 ಇನ್ನಿಂಗ್ಸ್), ವೀರೇಂದ್ರ ಸೆಹ್ವಾಗ್​(98 ಇನ್ನಿಂಗ್ಸ್),  ಮತ್ತು ತೆಂಡುಲ್ಕರ್​ (103ಇನ್ನಿಂಗ್ಸ್) 5000 ರನ್​ ದಾಖಲಿಸಿದ್ದರು.



97 ಇನ್ನಿಂಗ್ಸ್ನಲ್ಲಿ ಮೈಲುಗಲ್ಲನ್ನು ಸಾಧಿಸಿದ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಪ್ರಸ್ತುತ ಬ್ಯಾಟ್ಸ್ಮನ್ಗಳ ಪೈಕಿ ಕೋಹ್ಲಿಗಿಂತ ವೇಗವಾಗಿ ದಾಖಲೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ಹಾಶಿಮ್ ಅಮ್ಲಾ ಅವರು 109 ಇನಿಂಗ್ಸ್ಗಳನ್ನು ಪಡೆದರೆ, ನ್ಯೂಜಿಲೆಂಡ್ನ ಕೇನ್ ವಿಲಿಯಮ್ಸನ್ 110 ಇನ್ನಿಂಗ್ಸ್ಗಳಲ್ಲಿ ಈ ದಾಖಲೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.