Kohli IPL Records: ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಬ್ಯಾಟಿಂಗ್ ಸೂಪರ್‌ ಸ್ಟಾರ್ ವಿರಾಟ್ ಕೊಹ್ಲಿ ದಾಖಲೆ ಸೃಷ್ಟಿಸುವ ತವಕದಲ್ಲಿದ್ದಾರೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಈ ಹೈವೋಲ್ಟೇಜ್ ಪಂದ್ಯದಲ್ಲಿ ಕೊಹ್ಲಿಗೆ ಇತಿಹಾಸ ಸೃಷ್ಟಿಸುವ ಅವಕಾಶವಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಎರಡು ತಂಡಗಳಲ್ಲಿ ಮಹತ್ವದ ಬದಲಾವಣೆ! ತಂಡಕ್ಕೆ ಆಧಾರಸ್ಥಂಭವಾಗಿದ್ದ ಇಬ್ಬರು ಸ್ಟಾರ್ ಪ್ಲೇಯರ್ಸ್ ಔಟ್


ವಿರಾಟ್ ಆರ್‌ ಸಿ ಬಿ ಪರ 239 ಐಪಿಎಲ್ ಪಂದ್ಯಗಳಲ್ಲಿ 237 ಸಿಕ್ಸರ್‌’ಗಳನ್ನು ಬಾರಿಸಿದ್ದಾರೆ. ಐಪಿಎಲ್‌’ನಲ್ಲಿ ಯಾವುದೇ ಒಂದು ತಂಡದ ಪರ ಆಡಿ ಅತಿ ಹೆಚ್ಚು ಸಿಕ್ಸರ್‌’ಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಎಂಬ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಅವರು 239 ಸಿಕ್ಸರ್‌ಗಳನ್ನು ಬಾರಿಸಿದ್ದರು. ಇದೀಗ ಈ ದಾಖಲೆಯನ್ನು ಮುರಿಯಲು ಕೊಹ್ಲಿಗೆ ಕೇವಲ 3 ಸಿಕ್ಸರ್‌’ಗಳ ಅಗತ್ಯವಿದೆ.


ಗೇಲ್ 85 ಐಪಿಎಲ್ ಪಂದ್ಯಗಳಲ್ಲಿ 239 ಸಿಕ್ಸರ್‌’ಗಳೊಂದಿಗೆ ಆರ್‌ ಸಿ ಬಿ ಪರ ನಂಬರ್ 1 ಸ್ಥಾನದಲ್ಲಿದ್ದಾರೆ. ಇನ್ನು ಎಬಿ ಡಿವಿಲಿಯರ್ಸ್ 156 ಐಪಿಎಲ್ ಪಂದ್ಯಗಳಲ್ಲಿ 238 ಸಿಕ್ಸರ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.


ನಿರ್ದಿಷ್ಟ ತಂಡದ ಪರ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಬ್ಯಾಟರ್


ಕ್ರಿಸ್ ಗೇಲ್ (ಆರ್‌ ಸಿ ಬಿ) - 239 ಸಿಕ್ಸರ್‌


ಎಬಿ ಡಿವಿಲಿಯರ್ಸ್ (ಆರ್‌ ಸಿ ಬಿ) - 238 ಸಿಕ್ಸರ್‌


ವಿರಾಟ್ ಕೊಹ್ಲಿ (ಆರ್‌ ಸಿ ಬಿ) - 237 ಸಿಕ್ಸರ್‌


ಕೀರಾನ್ ಪೊಲಾರ್ಡ್ (MI) - 223 ಸಿಕ್ಸರ್‌


ರೋಹಿತ್ ಶರ್ಮಾ (MI) - 210 ಸಿಕ್ಸರ್‌


ಎಂಎಸ್ ಧೋನಿ (CSK) - 209 ಸಿಕ್ಸರ್‌


ಇದನ್ನೂ ಓದಿ: ಒಬ್ಬರಲ್ಲ, ಇಬ್ಬರಲ್ಲ… 8 ನಟಿಯರೊಂದಿಗೆ ಡೇಟ್! ಕಡೆಗೆ ಬ್ರಿಟಿಷ್ ಯುವತಿಯನ್ನು ಪ್ರೀತಿಸಿ 2 ಬಾರಿ ಮದ್ವೆಯಾದ ಟೀಂ ಇಂಡಿಯಾದ ಸ್ಟಾರ್ ಆಲ್’ರೌಂಡರ್!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.