Virender Sehwag 100 Centuries Record : ಟೀಂ ಇಂಡಿಯಾದ ಲೆಜೆಂಡ್ ಆಟಗಾರ ಆಟಗಾರ ಸಚಿನ್ ತೆಂಡೂಲ್ಕರ್ ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಅವರು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಮತ್ತು ಅತಿ ಹೆಚ್ಚು ಶತಕಗಳನ್ನು ಹೊಂದಿರುವ ಆಟಗಾರ ಕೂಡ ಆಗಿದ್ದರೆ. ತೆಂಡೂಲ್ಕರ್ ಅವರು ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ 100 ಶತಕಗಳನ್ನು ಬಾರಿಸಿದ್ದಾರೆ. ಆದ್ರೆ, ಈಗ ಸಚಿನ್ ಸಹ ಆಟಗಾರ ವೀರೇಂದ್ರ ಸೆಹ್ವಾಗ್ ಈ ಬಗ್ಗೆ  ಭಾರಿ ಹೇಳಿಕೆ ನೀಡಿದ್ದಾರೆ. ಸಚಿನ್ ಅವರ 100 ಶತಕಗಳ ದಾಖಲೆಯನ್ನು ಮುರಿಯಬಲ್ಲ ಆಟಗಾರನ ಹೆಸರನ್ನು ವೀರೇಂದ್ರ ಸೆಹ್ವಾಗ್ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಸಚಿನ್ ಶತಕಗಳ ದಾಖಲೆ ಮುರಿತಾನೆ ಈ ಆಟಗಾರ 


ಕ್ರಿಕೆಟ್ ದೇವರು ಎಂದು ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಅವರ 100 ಶತಕಗಳ ವಿಶ್ವ ದಾಖಲೆಯ ಬಗ್ಗೆ ವೀರೇಂದ್ರ ಸೆಹ್ವಾಗ್ ಭವಿಷ್ಯ ನುಡಿದಿದ್ದಾರೆ. ಇತ್ತೀಚೆಗಷ್ಟೇ ಫಾರ್ಮ್‌ಗೆ ಮರಳಿರುವ ಟೀಂ ಇಂಡಿಯಾದ ಸ್ಟಾರ್ ಮತ್ತು ಮಾಜಿ ಕ್ಯಾಪ್ಟನ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಈ ದೊಡ್ಡ ದಾಖಲೆಯನ್ನು ಮುರಿಯಬಹುದು ಎಂದು ವೀರೇಂದ್ರ ಸೆಹ್ವಾಗ್ ಭವಿಷ್ಯ ನುಡಿದಿದ್ದಾರೆ. ಏಷ್ಯಾಕಪ್ 2022 ರ ಕೊನೆಯ ಪಂದ್ಯದಲ್ಲಿ ಕೊಹ್ಲಿ ತಮ್ಮ 71 ನೇ ಶತಕವನ್ನು ಪೂರ್ಣಗೊಳಿಸಿದರು.


ಇದನ್ನೂ ಓದಿ : Team India : ವಿಶ್ವಕಪ್‌ನಿಂದ ಹೊರಗುಳಿಯಲು ಬೇಕಂತಲೇ ಗಾಯಗೊಂಡ ಈ ಆಲ್‌ರೌಂಡರ್!


ವೀರೇಂದ್ರ ಸೆಹ್ವಾಗ್ ನುಡಿದ ಭವಿಷ್ಯ ಹೀಗಿದೆ


ಕ್ರಿಕ್‌ಬಜ್‌ನಲ್ಲಿ ಮಾತನಾಡಿದ ವೀರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿಯ ಬಗ್ಗೆ ಮಾತನಾಡುತ್ತಾ, 'ವಿರಾಟ್ ಅವರ ಈ ಶತಕದಿಂದ ನಾನು ಮಾತ್ರವಲ್ಲದೆ ಇಡೀ ಭಾರತವೇ ಸಂತೋಷವಾಗಿದೆ, ಅವರ ಅಭಿಮಾನಿಗಳು ಬಹಳ ಸಮಯದಿಂದ ಅದು ಬೇಗನೆ ಬರಬೇಕು, ಅದು ಬೇಗ ಬರಬೇಕು ಎಂದು ಕಾಯುತ್ತಿದ್ದರು. ಹಾಗಾಗಿ ಈಗ ಈ ಸೈಕಲ್ ಶುರುವಾಗಿದೆ, ಆಗ 100ಕ್ಕೆ ನಿಲ್ಲಬೇಕು, ಮಧ್ಯದಲ್ಲಿ ನಿಲ್ಲಬೇಡ. 71 ರಿಂದ ಅವರ ಮುಂದಿನ ನಿಲ್ದಾಣ ನೇರವಾಗಿ 100 ಕ್ಕೆ ನಿಲ್ಲಿಸು, ನಂತರ 101 ನೇ ಶತಕ ಯಾವಾಗ ಸಂಭವಿಸುತ್ತದೆ ಎಂದು ನಾವು ಮತ್ತೆ ನೋಡುತ್ತೇವೆ ಎಂದರು.


1020 ದಿನಗಳ ನಂತರ ಶತಕ


ಏಷ್ಯಾ ಕಪ್ 2022: ವಿರಾಟ್ ಕೊಹ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿದ್ದರು. ವಿರಾಟ್ ಕೊಹ್ಲಿ 2019 ರ ನಂತರ ಮೊದಲ ಬಾರಿಗೆ 100 ರನ್ ಗಡಿ ದಾಟಿದ್ದಾರೆ. ಇದು ಅವರ ವೃತ್ತಿಜೀವನದ 71 ನೇ ಶತಕವಾಗಿದೆ, ಇದರೊಂದಿಗೆ ಅವರು ಸಚಿನ್ ತೆಂಡೂಲ್ಕರ್ ನಂತರ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್ ಆಗಿದ್ದಾರೆ. ಹಾಗೆ, ಇದು ಟಿ20ಯಲ್ಲಿ ವಿರಾಟ್ ಅವರ ಮೊದಲ ಶತಕವಾಗಿದೆ.


ಇದನ್ನೂ ಓದಿ : Virat Kohli : 71ನೇ ಶತಕ ಸಿಡಿಸಿ ಎಲ್ಲರ ಮನ ಗೆದ್ದ ಕೊಹ್ಲಿ : ಫ್ಯಾನ್ಸ್‌ಗಳಿಗೆ ವಿಶೇಷ ಸಂದೇಶ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.