IND vs AFG : ಬಹಳ ದಿನಗಳ ನಂತರ ಟೀಂ ಇಂಡಿಯಾ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಶತಕ ಸಿಡಿಸಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಹೀಗಾಗಿ, ಕೊಹ್ಲಿ ತಮ್ಮ ಫ್ಯಾನ್ಸ್ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದ ಹೇಳಿದ್ದಾರೆ. ಗುರುವಾರ ನಡೆದ ಏಷ್ಯಾಕಪ್‌ನ ಅಫ್ಘಾನಿಸ್ತಾನ ವಿರುದ್ಧದ ಸೂಪರ್ ಫೋರ್ ಪಂದ್ಯದಲ್ಲಿ ವಿರಾಟ್ ಚೊಚ್ಚಲ ಟಿ20 ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
3 ವರ್ಷಗಳ ನಂತರ ಶತಕ ಬಾರಿಸಿದ ಕೊಹ್ಲಿ
ಸುಮಾರು ಮೂರು ವರ್ಷಗಳ ನಂತರ ಕೊಹ್ಲಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ. ಅವರು ನವೆಂಬರ್ 2019 ರಲ್ಲಿ ತಮ್ಮ 70 ನೇ ಶತಕವನ್ನು ಬಾರಿಸಿದ್ದರು. ವಿರಾಟ್ ಅಫ್ಘಾನಿಸ್ತಾನ ವಿರುದ್ಧ 53 ಎಸೆತಗಳಲ್ಲಿ 100 ರನ್ ಗಡಿ ದಾಟಿದರು. ಅವರು ಅದ್ಭುತ ಸಿಕ್ಸರ್ ಬಾರಿಸುವ ಮೂಲಕ ಈ ಗಮ್ಯಸ್ಥಾನವನ್ನು ತಲುಪಿದರು. ಕೊಹ್ಲಿ ತಮ್ಮ ಅಂತರಾಷ್ಟ್ರೀಯ ವೃತ್ತಿ ಜೀವನದ 71ನೇ ಶತಕ ದಾಖಲಿಸಿದರು. 1019 ದಿನಗಳ ನಂತರ ಈ ಸಾಧನೆಯನ್ನು ಮರುಕಳಿಸಿರುವುದು ತುಂಬಾ ವಿಶೇಷವಾಗಿದೆ.
ಇದನ್ನೂ ಓದಿ : Neeraj Chopra: ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ, ಡೈಮಂಡ್ ಟ್ರೋಫಿ ಗೆದ್ದ ಗೋಲ್ಡನ್ ಬಾಯ್
ಕೊಹ್ಲಿ ಅಭಿಮಾನಿಗಳಿಗೆ ಹೇಳಿದ್ದು ಹೀಗೆ
ತಮ್ಮ ಅಭಿಮಾನಿಗಳಿಗೆ ಮತ್ತು ಬೆಂಬಲಿಗರ ಪ್ರೀತಿಗೆ ಧನ್ಯವಾದ ಹೇಳಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್ ಕೊಹ್ಲಿ, 'ನಾವು ನೆಕ್ಸ್ಟ್ ಟೈಮ್ ಹಿಂತಿರುಗಿದಾಗ, ನಾವು ಸ್ಟ್ರಾಂಗ್ ಆಗಿ ಮತ್ತು ಉತ್ತಮವಾಗಿ ಹಿಂತಿರುಗುತ್ತೇವೆ' ಎಂದು ಬರೆದುಕೊಂಡಿದ್ದಾರೆ.
ಶತಕ ಪೂರೈಸಿದ ಬಳಿಕ ಕೊಹ್ಲಿ ತಮ್ಮ ಕೊರಳಲ್ಲಿ ಹಾಕಿಕೊಂಡಿದ್ದ ಮದುವೆಯ ಉಂಗುರಕ್ಕೆ ಮುತ್ತಿಟ್ಟು ಸಂಭ್ರಮಿಸಿದರು. ಆಗ ಅವರ ಮುಖದಲ್ಲಿ ನಗು ಮತ್ತು ನೆಮ್ಮದಿಯ ನಿಟ್ಟುಸಿರು ಬಿಟ್ಟ ಹಾಗೆ ಆಗಿತ್ತು. ನಾನು ಇಲ್ಲಿ ನಿಂತಿದ್ದೇನೆ ಎಂದರೆ ಅದು ಪತ್ನಿಯ ಬೆಂಬಲ - ಹಾಗಾಗಿ ನನ್ನ ಉಂಗುರಕ್ಕೆ ಮುತ್ತು ಕೊಟ್ಟೆ. ಈ ಶತಕವು ನಮ್ಮ ಪ್ರೀತಿಯ ಮಗಳು ವಾಮಿಕಾಗೆ ಸಮರ್ಪಿತವಾಗಿದೆ ಎಂದು ಹೇಳಿದರು.
ಕೊಹ್ಲಿಯನ್ನು ಹಾಡಿಹೊಗಳಿದ ಅನುಭವಿಗಳು
ಕೊಹ್ಲಿ ಶತಕಕ್ಕೆ ಕ್ರಿಕೆಟಿಗರು ಹಾಗೂ ಮಾಜಿ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊಹ್ಲಿಯನ್ನು ಹೊಗಳಿದ ರಾಬಿನ್ ಉತ್ತಪ್ಪ ಅವರು ತಮ್ಮ ಸ್ಟ್ರೋಕ್‌ಪ್ಲೇ ಮೂಲಕ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದ್ದಾರೆ ಎಂದು ಹೇಳಿದ್ದಾರೆ.
ಕು ಆ್ಯಪ್‌ನಲ್ಲಿ ಉತ್ತಪ್ಪ, 'ಗೊರಿಲ್ಲಾ ಹಿಂತಿರುಗಿದೆ ಎಂದು ನಾನು ಹೇಳುತ್ತೇನೆ. ನೀವು ಯಾವ ಇನ್ನಿಂಗ್ಸ್ ಆಡಿದ್ದೀರಿ? ಶತಕ ಪೂರೈಸಿದ ನಂತರ ಸೆಲೆಬ್ರೇಷನ್ ಸ್ಟೈಲ್ ಹೇಗಿತ್ತು. ಈ ಶತಕದೊಂದಿಗೆ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿದ್ದಾರೆ. ಈಗ ಭಾರತದ ಸಚಿನ್ ತೆಂಡೂಲ್ಕರ್ ಮಾತ್ರ 100 ಶತಕಗಳೊಂದಿಗೆ ಅವರಿಗಿಂತ ಮುಂದಿದ್ದಾರೆ.
ಇದನ್ನೂ ಓದಿ : The KING IS BACK: ಸಾವಿರ ದಿನಗಳ ಕಾಯವಿಕೆ ಅಂತ್ಯ, ಶತಕ‘ವೀರ’ನಿಗೆ ಪ್ರಶಂಸೆಗಳ ಮಹಾಪೂರ
ಟಿ20ಯಲ್ಲಿ ದಾಖಲೆ ಬರೆದ ಕೊಹ್ಲಿ
ಪುರುಷರ ಟಿ20ಯಲ್ಲಿ ಕೊಹ್ಲಿ 3500 ರನ್ ಪೂರೈಸಿದ್ದಾರೆ. ಹಾಗೆ, ನಾಯಕ ರೋಹಿತ್ ಶರ್ಮಾ ನಂತರ ಈ ಸಾಧನೆ ಮಾಡಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೊಹ್ಲಿ ಅಜೇಯ 122 ರನ್ ಗಳಿಸಿದ್ದು, ಇದು ಟಿ20ಯಲ್ಲಿ ಭಾರತೀಯ ಆಟಗಾರನೊಬ್ಬನ ಗರಿಷ್ಠ ಸ್ಕೋರ್ ಆಗಿದೆ. ಇದು ಯುಎಇಯಲ್ಲಿ ಟಿ20ಯಲ್ಲಿ ಗರಿಷ್ಠ ಸ್ಕೋರ್ ಆಗಿದೆ. ಏಷ್ಯಾಕಪ್‌ನಲ್ಲಿ ಅಫ್ಘಾನಿಸ್ತಾನವನ್ನು 101 ರನ್‌ಗಳಿಂದ ಸೋಲಿಸಿದೆ. ಭಾನುವಾರ ನಡೆಯಲಿರುವ ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳು ಈಗಾಗಲೇ ಫೈನಲ್ ತಲುಪಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.