ಸ್ಟೇವೆಂಜರ್: ಐದು ಬಾರಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್  ಇಲ್ಲಿ ನಡೆಯುತ್ತಿರುವ ಆಲ್ಟಿಬಾಕ್ಸ್ ನಾರ್ವೆ ಚೆಸ್ ಟೂರ್ನಿಯ ಅಂತಿಮ ಐದನೇ ಸುತ್ತಿನಲ್ಲಿ ಮ್ಯಾಗ್ನಸ್ ಕಾರ್ಲ್ಸೊನ್ ವಿರುದ್ದ ಡ್ರಾ ಸಾಧಿಸಿದರು.


COMMERCIAL BREAK
SCROLL TO CONTINUE READING

ಬಿಳಿಕಾಯಿಯೊಂದಿದೆ ಸತತವಾಗಿ ಎರಡು ಪಂದ್ಯವನ್ನು ಗೆದ್ದರೂ ಸಹಿತ ಈ ಬಾರಿ ವಿಶಿ ವಿರುದ್ದ ಕಾರ್ಲ್ಸೊನ್ ಅಷ್ಟು ಪರಿಣಾಮಕಾರಿ ಆಟವಾಡಲಿಲ್ಲ, ಪಂದ್ಯದ ಪ್ರಾರಂಭದಿಂದಲೂ ಸಹಿತ ಆನಂದ್ ತಮ್ಮ ನಡೆಗಳ ಮೂಲಕ ಕಾರ್ಲ್ಸೇನ್ ಅವರನ್ನು ಅಚ್ಚರಿಗೊಳಿಸಿದ್ದರು.


ಸುಮಾರು 45 ನಿಮಿಷಗಳ ಕಾಲ ನಡೆದ ಈ ಪಂದ್ಯವು ಕೊನೆಗೆ ನಿರಾಯಾಸವಾಗಿ ಡ್ರಾ ದಲ್ಲಿ ಮುಕ್ತಾಯವಾಯಿತು.