ನವದೆಹಲಿ: ಚೀನಾ ಮತ್ತೊಂದು ದೊಡ್ಡ ಹಿನ್ನಡೆ ಅನುಭವಿಸಿದೆ. ಈ ವರ್ಷ ಐಪಿಎಲ್‌ (IPL) ನಲ್ಲಿ ವಿವೋ ಪ್ರಾಯೋಜಕ ಕಂಪನಿಯಾಗಿ ಇರುವುದಿಲ್ಲ ಎನ್ನಲಾಗಿದೆ. ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಚೀನಾ ಮೂಲದ ಈ ಕಂಪನಿಯನ್ನು ಟೂರ್ನಿಯ ಪ್ರಾಯೋಜಕತ್ವ ಸ್ಥಾನದಲ್ಲಿ ಮುಂದುವರೆಸಿದ ಬಳಿಕ, ಮಂಡಳಿಯ ಈ ನಿರ್ಣಯಕ್ಕೆ ವಿರೋಧ ವ್ಯಕ್ತವಾಯಿತು. ಈಗ ಐಪಿಎಲ್ 2020 ರಲ್ಲಿ ವಿವಿ ಪ್ರಾಯೋಜಕರು ಇರುವುದಿಲ್ಲ ಮೂಲಗಳಿಂದ ತಿಳಿದು ಬಂದಿದೆ.


COMMERCIAL BREAK
SCROLL TO CONTINUE READING

ಪಂದ್ಯಾವಳಿಯ ಮುಖ್ಯ ಪ್ರಾಯೋಜಕರಾಗಿ ಚೀನಾದ VIVO ಕಂಪನಿಯೊಂದಿಗೆ  ಮುಂದುವರಿಯಲು ಐಪಿಎಲ್ ಮುಖ್ಯ ಸಂಚಾಲಕ ಸಮಿತಿ ಭಾನುವಾರ ನಿರ್ಧರಿಸಿತ್ತು. ಚೀನಾದ ಮೊಬೈಲ್ ಫೋನ್ ತಯಾರಕ ವಿವೊ ಟಿ -20 ಲೀಗ್‌ನ 'ಟೈಟಲ್'ನ ಪ್ರಾಯೋಜಕ ಕಂಪನಿಯಾಗಿದೆ.


ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 13 ನೇ ಆವೃತ್ತಿ ಸೆಪ್ಟೆಂಬರ್ 19 ರಿಂದ ಯುಎಇಯಲ್ಲಿ ನಡೆಯಲಿದೆ. ಪಂದ್ಯಾವಳಿಯ ಅಂತಿಮ ಪಂದ್ಯ ನವೆಂಬರ್ 10 ರಂದು ನಡೆಯಲಿದೆ. ಪ್ರಸ್ತುತ ಭಾರತ ಮತ್ತು ಚೀನಾ ಉಭಯ ದೇಶಗಳ ನಡುವೆ ಬಿಕ್ಕಟ್ಟಿನ ಸ್ಥಿತಿ ಇರುವ ಕಾರಣ VIVO ಕಂಪನಿಯನ್ನು ಪಂದ್ಯಾವಳಿಯ ಪ್ರಾಯೋಜತಕತ್ವ ಸ್ಥಾನದಲ್ಲಿ ಮುಂದುವರೆಸಿದ್ದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು.

IPLಗಾಗಿ ಚೀನಾ ಪ್ರಾಯೋಜಕರ ಜೊತೆಗೆ ಮುಂದುವರೆಯುವ BCCI ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸ್ವದೇಶಿ ಜಾಗರಣ್ ಮಂಚ್, ಭಾರತೀಯ ನಾಗರಿಕರು ಈ ಟೂರ್ನಿಯನ್ನು ಬಹಿಷ್ಕರಿಸಬೇಕು ಎಂದಿತ್ತು.


ಈ ಕುರಿತು ಹೇಳಿಕೆ ನೀಡಿದ್ದ SMJ ಸಹ ಸಂಯೋಜಕ ಅಶ್ವಿನಿ ಮಹಾಜನ್, BCCI ಹಾಗೂ IPL ಸಂಚಾಲಕ ಸಮಿತಿ, ಚೀನಾ ಸೈನಿಕರ ಜೊತೆಗೆ ಹಿಂಸಾತ್ಮಕ ಘರ್ಷಣೆಯ ವೇಳೆ ಹುತಾತ್ಮರಾದ ಭಾರತೀಯ ಸೈನಿಕರಿಗೆ ಅಗೌರವ ತೋರಿದೆ ಎಂದು ಆರೋಪಿಸಿದ್ದರು.