VR Vanita, Cricket News: ಫೆಬ್ರವರಿಯಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL) ನ ಉದ್ಘಾಟನಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಭಾಗವಾಗಿದ್ದ ವಿ ಆರ್ ವನಿತಾ ಎಲ್ಲರಿಗೂ ಚಿರಪರಿಚಿತ. ಇವರು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಡೆಸುತ್ತಿರುವ ಮಹಾರಾಜ ಟ್ರೋಫಿ, ಟಿ20 ಪಂದ್ಯಾವಳಿಯ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಭಾರತ-ಪಾಕ್ ಪಂದ್ಯದಲ್ಲಿ ಥರ್ಡ್ ಅಂಪೈರ್ ವೈಫಲ್ಯ! ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಯ್ತು ಆ ಒಂದು ಎಸೆತ


ಶಿವಮೊಗ್ಗ ಲಯನ್ಸ್ ತಂಡದ ಜೆರ್ಸಿ ಧರಿಸಿ ಕುಳಿತುಕೊಂಡಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಇನ್ನು ಶಿವಮೊಗ್ಗ ಫ್ರಾಂಚೈಸಿಯ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವ ವನಿತಾಗೆ ಇದು ಹೊಸ ಅನುಭವವಾಗಿದೆ.


ಭಾರತೀಯ ಕ್ರಿಕೆಟ್ ಚಿತ್ರಣವನ್ನು ಒಂದೊಮ್ಮೆ ನೋಡಿದರೆ, ಪುರುಷರ ತಂಡವು ಮಹಿಳಾ ಮುಖ್ಯ ಕೋಚ್ ಅನ್ನು ಹೊಂದಿರುವುದು ಬಲು ಅಪರೂಪ, ಆದರೆ ವನಿತಾಗೆ ಟ್ರೆಂಡ್ ಸೆಟ್ ಮಾಡುವ ಅವಕಾಶ ಇದೀಗ ಸಿಕ್ಕಿದೆ ಎನ್ನಬಹುದು.


“ಪುರುಷರ ಕ್ರಿಕೆಟ್‌ ಗೆ ತರಬೇತಿ ನೀಡಬೇಕು ಮತ್ತು ಅಲ್ಲಿನ ಡೈನಾಮಿಕ್ಸ್ ಅನ್ನು ಅರ್ಥಮಾಡಿಕೊಳ್ಳಬೇಕು ಎಂದು ನಾನು ಬಹಳ ಸಮಯದಿಂದ ಮನಸ್ಸಿನಲ್ಲಿಟ್ಟುಕೊಂಡಿದ್ದೆ. ಬಹುಶಃ ಸಹಾಯಕ ಕೋಚ್ ಆಗಿ ಪುರುಷರ ತಂಡದ ಭಾಗವಾಗಲು ಬಯಸಿದ್ದರೆ. ಆದರೆ ಕೋಚ್ ಆಗುವಷ್ಟು ಉತ್ತಮಳಿದ್ದೇನೆ ಎಂದು ಫ್ರಾಂಚೈಸಿಗಳು ಭಾವಿಸಿವೆ. ಹಾಗಾಗಿ, ನನ್ನ ಮೇಲೆ ವಿಶ್ವಾಸ ತೋರಿಸಿದ್ದಕ್ಕಾಗಿ ಧನ್ಯವಾದಗಳು” ಎಂದು ವನಿತಾ ಹೇಳಿದ್ದಾರೆ.


ಇದನ್ನೂ ಓದಿ: 1 ಶತಕಕ್ಕೆ 7 ವಿಶ್ವದಾಖಲೆಗಳು ಉಡೀಸ್..! ‘ಕಿಂಗ್’ ಕೊಹ್ಲಿ ಬತ್ತಳಿಕೆ ಸೇರಿದ ಸಚಿನ್, ಜಾಕ್ವೆಸ್ ಕಾಲಿಸ್’ರ ಈ ದಾಖಲೆ


2022 ರಲ್ಲಿ ನಿವೃತ್ತಿ ಘೋಷಿಸಿದ ವನಿತಾ, ಅದಕ್ಕೂ ಮೊದಲು 2014 ಮತ್ತು 2016 ರ ನಡುವೆ ಆರು ಮಹಿಳಾ ODI ಮತ್ತು 16 T20I ಗಳನ್ನು ಆಡಿದ್ದಾರೆ. ಆ ನಂತರ ಕರ್ನಾಟಕ U-16 ತಂಡದ ತರಬೇತುದಾರರಾದರು. ಇನ್ನು RCB ಬೆಂಗಳೂರು ಫ್ರಾಂಚೈಸಿಯನ್ನು ಸ್ವಾಧೀನಪಡಿಸಿಕೊಂಡ ನಂತರ ವನಿತಾ ಅವರನ್ನು ಫೀಲ್ಡಿಂಗ್ ಕೋಚ್ ಆಗಿ ನೇಮಿಸಲಾಯಿತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ