ಐಸಿಸಿ ಟಿ20 ವಿಶ್ವಕಪ್‌ಗೆ ಭಾರತೀಯ ತಂಡವನ್ನು ಸೋಮವಾರ ಪ್ರಕಟಿಸಲಾಗಿದ್ದು, ಆಯ್ಕೆಯಲ್ಲಿ ಯಾವುದೇ ಪ್ರಮುಖ ಆಶ್ಚರ್ಯ ಕಂಡುಬಂದಿಲ್ಲ ಎಂದು ಕ್ರಿಕೆಟ್ ವಿಮರ್ಶಕರು ಹೇಳಿದ್ದಾರೆ. ಇನ್ನು ಈ ಕುರಿತಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಜೊತೆಗೆ ಹಲವಾರು ಮಾಜಿ ಆಟಗಾರರು ಭಾರತದ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಟೀಂ ಇಂಡಿಯಾದ ಮಾಜಿ ಆರಂಭಿಕ ಓಪನರ್ ವಾಸಿಂ ಜಾಫರ್ ತಮ್ಮ ಅನಿಸಿಕೆಯನ್ನು ಇಲ್ಲಿ ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: T-20 World Cup 2022 Team Announcement: ಟಿ20 ವಿಶ್ವಕಪ್ ಗೆ ಭಾರತ ತಂಡ ಘೋಷಣೆ: ಇಲ್ಲಿದೆ ಫುಲ್ ಡೀಟೆಲ್ಸ್


ಐಸಿಸಿ ಟಿ20 ವಿಶ್ವಕಪ್‌ ಪಂದ್ಯದಲ್ಲಿ ರಿಷಭ್ ಪಂತ್ ಆರಂಭಿಕರಾಗಿ ಬ್ಯಾಟಿಂಗ್ ಆರಂಭಿಸಲು ಅವಕಾಶ ನೀಡುವಂತೆ ಜಾಫರ್ ಟ್ವೀಟ್ ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಒತ್ತಾಯಿಸಿದ್ದಾರೆ. 2013ರಲ್ಲಿ ಬ್ಯಾಟಿಂಗ್ ಆರಂಭಿಸುವ ಮೂಲಕ ರೋಹಿತ್ ಅವರ ವೃತ್ತಿಜೀವನದ ಹಾದಿಯನ್ನು ಬದಲಿಸಿದ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಅವರ ಉದಾಹರಣೆಯನ್ನೂ ಇಲ್ಲಿ ನೀಡಿದ್ದಾರೆ.


"ಇನ್ನು ಮುಂದೆ T20ಯಲ್ಲಿ ಪಂತ್ ಅವರ ಅತ್ಯುತ್ತಮ ಪ್ರದರ್ಶನವನ್ನು ನೋಡಬಹುದು ಎಂದು ನಾನು ಇನ್ನೂ ಭಾವಿಸುತ್ತೇನೆ. ರೋಹಿತ್ ಶರ್ಮಾ ನಾಲ್ಕನೇ ಕ್ರಮಾಂಗದಲ್ಲಿ ಬ್ಯಾಟಿಂಗ್ ಮಾಡಬಹುದು. 2013 ರಲ್ಲಿ ಎಂ.ಎಸ್ ಧೋನಿಯವರು ರೋಹಿತ್ ರನ್ನು ಆರಂಭಿಕರನ್ನಾಗಿ ಕಣಕ್ಕಿಳಿಸಿದ್ದರು. ಮತ್ತೆ ಕಂಡದ್ದು ಇತಿಹಾಸ. ಇದೀಗ ಇಂತಹ ನಿರ್ಧಾರ ರೋಹಿತ್ ತೆಗೆದುಕೊಳ್ಳುವ ಸಮಯ ಬಂದಿದೆ. ಪಂತ್ ವಿಚಾರವಾಗಿ ರೋಹಿತ್ ಈ ನಿರ್ಧಾರ ಕೈಗೊಳ್ಳಬೇಕು. ನನ್ನ ಪ್ರಕಾರ ಕೆಎಲ್ ರಾಹುಲ್, ರಿಷಬ್ ಪಂತ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸೂರ್ಯ ಕುಮಾರ್ ಯಾದವ್ ಅಗ್ರ ಐದು ಸ್ಥಾನದಲ್ಲಿದ್ದು, ಈ ಕ್ರಮದಲ್ಲಿ ಬ್ಯಾಟಿಂಗ್ ಮಾಡಬೇಕು” ಎಂದು ಜಾಫರ್ ಟ್ವೀಟ್ ಮಾಡಿದ್ದಾರೆ.


ರಿಷಬ್ ಪಂತ್ ಮಧ್ಯಮ ಕ್ರಮಾಂಕದಲ್ಲಿ ಆಟವಾಡುತ್ತಿದ್ದಾರೆ. ಕೆಲವರು ಅವರ ಫಾರ್ಮ್ ಕಂಡು, ಆಯ್ಕೆಗಾರರು ಏನಕ್ಕಾಗಿ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ. ಆದರೆ ಗಮನಿಸಬೇಕಾದ ವಿಷಯವೆಂದರೆ, ಪಂತ್ ಎಂತಹದ್ದೇ ಸಮಯದಲ್ಲಾದರೂ ಪಂದ್ಯವನ್ನು ಗೆಲುವಿನ ಕಡೆ ಕೊಂಡೊಯ್ಯುವ ಸಾಮಾರ್ಥ್ಯ ಹೊಂದಿದ್ದಾರೆ. T20 ಆಟಕ್ಕೆ ಸಂಪೂರ್ಣವಾಗಿ ಸೂಕ್ತವಾಗಿದ್ದಾರೆ. ಅಷ್ಟೇ ಅಲ್ಲದೆ, ಆರಂಭಿಕ ಸ್ಲಾಟ್ ಅವರಿಗೆ ಚೆನ್ನಾಗಿ ಹೊಂದುತ್ತದೆ ಎನ್ನಬಹುದು.


ಇದನ್ನೂ ಓದಿ: T20 World Cup 2022: T20 ವಿಶ್ವಕಪ್ ಪ್ಲೇಯಿಂಗ್ XIನಲ್ಲಿ ಈ ಮೂರು ಆಟಗಾರರಿಗೆ ಸ್ಥಾನ ನೀಡದ ರೋಹಿತ್ ಶರ್ಮಾ: ಕಾರಣ?


ಕೆಎಲ್ ರಾಹುಲ್ ಅವರ ವಿಧಾನ ಮತ್ತು ಫಾರ್ಮ್ ಬಗ್ಗೆ ಸಾಕಷ್ಟು ಪ್ರಶ್ನೆಗಳಿವೆ. ಗಾಯದ ಸಮಸ್ಯೆ ಮತ್ತು ಕೊರೊನಾದಿಂದ ಗುಣಮುಖರಾಗಿ ಹಿಂತಿರುಗಿದ ಬಳಿಕ ಸದೃಢವಾಗಿರುವ ರಾಹುಲ್ ವಿಶ್ವಕಪ್ ನಲ್ಲಿ ಅಬ್ಬರಿಸುವ ಸೂಚನೆ ಕಾಣುತ್ತಿದೆ.


ಭಾರತವು T20 ವಿಶ್ವಕಪ್‌ಗೆ ಮೊದಲು ಎರಡು ಸರಣಿಗಳಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾವನ್ನು ಎದುರಿಸಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.