Virat Kohli: ಈ ಮಹಿಳಾ ಕ್ರಿಕೆಟರ್ ದೊಡ್ಡ ಅಭಿಮಾನಿಯಂತೆ ಕಿಂಗ್ ಕೊಹ್ಲಿ: ಯಾರಾಕೆ?

ಕೇಟ್ ಕ್ರಾಸ್ ಟ್ವೀಟ್ ಮಾಡಿದ್ದು, ಅದರಲ್ಲಿ ಸಾರಾ ಟೇಲರ್ ಅನ್ನು ಟ್ಯಾಗ್ ಮಾಡಿ, “ಐದು ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ನಿಮ್ಮನ್ನು ಭೇಟಿಯಾಗಲು ಬಯಸಿದಾಗ” ಎಂದು ಬರೆದುಕೊಂಡಿದ್ದಾರೆ.

Written by - Bhavishya Shetty | Last Updated : Sep 12, 2022, 06:56 PM IST
    • ಟಿ20 ವಿಶ್ವಕಪ್ ಗೆ ಭಾರತ ತಂಡ ಘೋಷಿಸಿದ ಬಿಸಿಸಿಐ
    • ಅಕ್ಟೋಬರ್‌ ನಿಂದ ಆಸ್ಟ್ರೇಲಿಯಾದಲ್ಲಿ ಬಹುನಿರೀಕ್ಷಿತ T20 ವಿಶ್ವಕಪ್‌ ನಡೆಯಲಿದೆ
    • ರೋಹಿತ್ ಶರ್ಮಾ ತಂಡದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ
Virat Kohli: ಈ ಮಹಿಳಾ ಕ್ರಿಕೆಟರ್ ದೊಡ್ಡ ಅಭಿಮಾನಿಯಂತೆ ಕಿಂಗ್ ಕೊಹ್ಲಿ: ಯಾರಾಕೆ?  title=
World Cup

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ವಿಶ್ವದೆಲ್ಲೆಡೆ ಅನೇಕ ಅಭಿಮಾನಿಗಳಿದ್ದಾರೆ. ಆದರೆ ಅಭಿಮಾನಿಗಳ ನೆಚ್ಚಿನ ಈ ಕ್ರಿಕೆಟರ್, ಇಂಗ್ಲೆಂಡಿನ ಮಾಜಿ ಮಹಿಳಾ ಕ್ರಿಕೆಟಿ ಆಟಗಾರ್ತಿಯ ಫ್ಯಾನ್ ಅಂತೆ. 2014ರಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಬಂದಿದ್ದ ವಿರಾಟ್ ಕೊಹ್ಲಿ ಒಮ್ಮೆ ಬೆಳಗಿನ ಜಾವ ಐದು ಗಂಟೆಗೆ ಅವರ ನೆಚ್ಚಿನ ಆಟಗಾರ್ತಿಯನ್ನು ಭೇಟಿಯಾಗಿದ್ದರು.   

ಇದನ್ನೂ ಓದಿ:  T-20 World Cup 2022 Team Announcement: ಟಿ20 ವಿಶ್ವಕಪ್ ಗೆ ಭಾರತ ತಂಡ ಘೋಷಣೆ: ಇಲ್ಲಿದೆ ಫುಲ್ ಡೀಟೆಲ್ಸ್

ಇದನ್ನು ಸಾರಾ ಟೇಲರ್ ಎಂಬ ಆಟಗಾರ್ತಿ ಎಂದರೆ ವಿರಾಟ್ ಗೆ ಅಚ್ಚುಮೆಚ್ಚು. ಅವರ ಸಹ ಆಟಗಾರ ಕೇಟ್ ಕ್ರಾಸ್ ಅವರು ಫೋಟೋವನ್ನು ಬಹಿರಂಗಪಡಿಸುವ ಮೂಲಕ ಈ ವಿಚಾರವನ್ನು ತಿಳಿಸಿದ್ದಾರೆ.

 

 

ಕೇಟ್ ಕ್ರಾಸ್ ಟ್ವೀಟ್ ಮಾಡಿದ್ದು, ಅದರಲ್ಲಿ ಸಾರಾ ಟೇಲರ್ ಅನ್ನು ಟ್ಯಾಗ್ ಮಾಡಿ, “ಐದು ವರ್ಷಗಳ ಹಿಂದೆ ವಿರಾಟ್ ಕೊಹ್ಲಿ ನಿಮ್ಮನ್ನು ಭೇಟಿಯಾಗಲು ಬಯಸಿದಾಗ” ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ಜೊತೆಗೆ, ಕ್ರಾಸ್ ಕೊಹ್ಲಿಯ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಇಂಗ್ಲಿಷ್ ಮಹಿಳಾ ಕ್ರಿಕೆಟಿಗರೊಂದಿಗೆ ನಗುತ್ತಿರುವುದನ್ನು ಕಾಣಬಹುದು.

ಇಂಗ್ಲೆಂಡ್ನ ಮಹಿಳಾ ಕ್ರಿಕೆಟಿ ಆಟಗಾರ್ತಿ ಕೇಟ್ ಕ್ರಾಸ್ ಪ್ರಕಾರ, “ವಿರಾಟ್ ಕೊಹ್ಲಿ ಸ್ವತಃ ಸಾರಾ ಟೇಲರ್ ಅವರನ್ನು ಭೇಟಿ ಮಾಡಲು ಬೆಳಿಗ್ಗೆ ಐದು ಗಂಟೆಗೆ ತೆರಳಿದ್ದರು. ಈ ಚಿತ್ರದಲ್ಲಿ ವಿರಾಟ್ ಕೊಹ್ಲಿ ,ಸಾರಾ ಟೇಲರ್ ಮತ್ತು ಕೇಟ್ ಕ್ರಾಸ್ ರನ್ನು ಕಾಣಬಹುದು. 

ಇದನ್ನೂ ಓದಿ:  Team India Announcement : ಟಿ20 ವಿಶ್ವಕಪ್‌ಗೆ ಇಂದು ಟೀಂ ಇಂಡಿಯಾ ಆಯ್ಕೆ ಪಟ್ಟಿ : ಆಟಗಾರರಿಗೆ ಚಾನ್ಸ್

ಸಾರಾ ಅವರ ನೆಚ್ಚಿನ ಕ್ರಿಕೆಟಿಗ ಕೊಹ್ಲಿ:  ಇಂಗ್ಲೆಂಡ್ ಪರ ಸಾರಾ ಟೇಲರ್ 126 ODIಗಳಲ್ಲಿ 4056 ರನ್, 90 T20 ಗಳಲ್ಲಿ 2177 ರನ್ ಮತ್ತು 10 ಟೆಸ್ಟ್ಗಳಲ್ಲಿ 300 ರನ್ ಗಳಿಸಿದ್ದಾರೆ. ಎಲ್ಲಾ ಮೂರು ಸ್ವರೂಪಗಳಲ್ಲಿ ಆಡಿರುವ ಅವರು ವಿಕೆಟ್ ಕೀಪರ್ ಆಗಿ 232 ವಿಕೆಟ್ ಗಳನ್ನು ಪಡೆದಿದ್ದಾರೆ. ಇದು ದಾಖಲೆಯಾಗಿದೆ. ಆದರೆ 2019 ರಲ್ಲಿ ಒತ್ತಡದಿಂದಾಗಿ ಸಾರಾ ತಮ್ಮ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದರು. ಸಂದರ್ಶನವೊಂದರಲ್ಲಿ ಸಾರಾ ಟೇಲರ್ ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಕ್ರಿಕೆಟಿಗ ಎಂದು ಹೇಳಿದ್ದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News