Neeraj Chopra and Arshad Nadeem: ಭಾರತದ ನೀರಜ್ ಚೋಪ್ರಾ ಮತ್ತು ಪಾಕಿಸ್ತಾನ ಅರ್ಷದ್ ನದೀಮ್ ಇಬ್ಬರೂ ತಮ್ಮ ತಮ್ಮ ದೇಶಗಳಿಗಾಗಿ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ನೀರಜ್ ವಿಶ್ವ ಚಾಂಪಿಯನ್‌ಶಿಪ್‌’ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರೆ, ಈ ಪಂದ್ಯಾವಳಿಯಲ್ಲಿ ಪದಕ ಗೆದ್ದ ಮೊದಲ ಪಾಕಿಸ್ತಾನಿ ಎಂಬ ಹೆಗ್ಗಳಿಕೆಗೆ ನದೀಮ್ ಪಾತ್ರರಾಗಿದ್ದಾರೆ. ಈ ಪಂದ್ಯದ ಇತಿಹಾಸದ ಹೊರತಾಗಿ ಈ ಇಬ್ಬರು ಆಟಗಾರರು ಸಹೋದರತ್ವ ಮೆರೆದಿದ್ದು, ವಿಶ್ವದ ಗಮನ ಸೆಳೆದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: WACಯಲ್ಲಿ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ ನೀರಜ್ ಚೋಪ್ರಾ 88.17 ಮೀಟರ್ ದೂರ ಜಾವೆಲಿನ್ ಎಸೆದ ವಿಡಿಯೋ


ಅದು ಕ್ರಿಕೆಟ್ ಮೈದಾನವಾಗಲಿ ಅಥವಾ ಹಾಕಿ-ಫುಟ್ಬಾಲ್ ಆಗಿರಲಿ, ಭಾರತ-ಪಾಕಿಸ್ತಾನ ಆಟ ಇದೆ ಎಂದರೆ ಅಲ್ಲಿ ಉತ್ಸಾಹ ಕೊಂಚ ಹೆಚ್ಚೇ ಇರುತ್ತದೆ. ಆದರೆ ಹಂಗೇರಿಯ ಬುಡಾಪೆಸ್ಟ್‌’ನ ಕ್ರೀಡಾಂಗಣ ಈ ವಿಚಾರದಿಂದ ಕೊಂಚ ದೂರವೇ ಇತ್ತು. ಅಷ್ಟೇ ಅಲ್ಲದೆ, ಸಾಂಪ್ರದಾಯಿಕ ವೈರಿಗಳೆಂದು ಹೇಳುತ್ತಿದ್ದ ಉಭಯ ದೇಶಗಳ ಆಟಗಾರರು ಇಲ್ಲಿ ಭ್ರಾತೃತ್ವ ಮೆರೆದಿದ್ದು ಶ್ಲಾಘನೀಯ ಸಂಗತಿ.


ಇದನ್ನೂ ಓದಿ: Yo-Yo Testನಲ್ಲಿ ಫೇಲ್: ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಆಯ್ಕೆಯಾಗಿದ್ದ ಟೀಂ ಇಂಡಿಯಾದ 5 ಆಟಗಾರರು ಔಟ್!


ನೀರಜ್ ಮತ್ತು ನದೀಮ್ ಉತ್ತಮ ಸ್ನೇಹಿತರು. ಇವರಿಬ್ಬರು ಈ ಪಂದ್ಯದಲ್ಲಿ ಕ್ರಮವಾಗಿ ಮೊದಲ ಮತ್ತು ಎರಡನೇ ಸ್ಥಾನ ಗೆದ್ದಿದ್ದಾರೆ. ಆಟದ ಕೊನೆಯಲ್ಲಿ, ಕ್ರೀಡಾಪಟುಗಳು ತಮ್ಮ ದೇಶದ ರಾಷ್ಟ್ರಧ್ವಜದೊಂದಿಗೆ ಫೋಟೋಗೆ ಫೋಸ್ ಕೊಡುತ್ತಿದ್ದರು. ಆದರೆ ಆ ಸಂದರ್ಭದಲ್ಲಿ ಪಾಕಿಸ್ತಾನದ ನದೀಮ್ ಕೈಯಲ್ಲಿ ಪಾಕ್ ಧ್ವಜ ಇರಲಿಲ್ಲ. ಆಗ ನೀರಜ್, ನದೀಮ್ ಅವರನ್ನು ಕರೆದು ಭಾರತದ ಧ್ವಜದ ಒಟ್ಟಿಗೆ ನಿಲ್ಲುವಂತೆ ಕೋರಿದ್ದಾರೆ. ಈ ಫೋಟೋ ಜೊತೆ ನೀರಜ್ ನಡತೆಯನ್ನು ಜಗತ್ತೇ ಕೊಂಡಾಡುತ್ತಿದೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.