5 Indian Cricketers Failed In Yo-Yo Test: ಏಷ್ಯಾ ಕಪ್ 2023 ಆರಂಭವಾಗಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ, ಇದಕ್ಕೂ ಮುನ್ನ ಆಟಗಾರರ ಫಿಟ್’ನೆಸ್ ಮಟ್ಟಗಳು ಉತ್ತಮವಾಗಿವೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಭಾರತೀಯ ಕ್ರಿಕೆಟ್ ತಂಡವು ಇತ್ತೀಚೆಗೆ ಯೋ-ಯೋ ಟೆಸ್ಟ್ ನಡೆಸಿತ್ತು.
ಈ ಟೆಸ್ಟ್’ನಲ್ಲಿ ಕೊಹ್ಲಿ 17.2 ಸ್ಕೋರ್ ಮಾಡಿದ್ದು, ಇದರ ಬಗ್ಗೆ ಇನ್’ಸ್ಟಾಗ್ರಾಂನಲ್ಲಿ ಸ್ಟೋರಿ ಶೇರ್ ಮಾಡಿದ್ದರು. ಇನ್ನು ಶುಭ್ಮನ್ ಗಿಲ್ 18.7 ಅಂಕ ಗಳಿಸಿ ಕೊಹ್ಲಿಯನ್ನೂ ಹಿಂದಿಕ್ಕಿದ್ದಲ್ಲದೆ, ಅಗ್ರಸ್ಥಾನಿಯಾಗಿದ್ದರು. ರೋಹಿತ್ ಶರ್ಮಾ, ಕೆಎಲ್ ರಾಹುಲ್ ಕೂಡ ತಮ್ಮ ಯೋ-ಯೋ ಟೆಸ್ಟ್’ನಲ್ಲಿ ತೇರ್ಗಡೆಯಾಗಿದ್ದಾರೆ. ಆದರೆ ಭಾರತೀಯ ಕ್ರಿಕೆಟ್’ನಲ್ಲಿ ಯೋ-ಯೋ ಟೆಸ್ಟ್’ನಲ್ಲಿ ಫೇಲ್ ಆಗಿ 5 ಆಟಗಾರರು ಆಟದಿಂದ ಹೊರಬಿದ್ದಿದ್ದರು. ಆ ಆಟಗಾರರ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.
ಇದನ್ನೂ ಓದಿ: ಬೀಚ್’ನಲ್ಲಿ ಯುಜ್ವೇಂದ್ರ ಚಾಹಲ್ ಪತ್ನಿಯ ಬಿಕಿನಿ ಹಾಟ್ ಫೋಟೋಶೂಟ್!
ಯೋ-ಯೋ ಟೆಸ್ಟ್ ಪ್ರಾರಂಭವಾದದ್ದು ವಿರಾಟ್ ಕೊಹ್ಲಿ ಅವರು ಟೀಂ ಇಂಡಿಯಾದ ನಾಯಕತ್ವ ವಹಿಸಿಕೊಂಡ ಸಮಯದಲ್ಲಿ. ರಾಷ್ಟ್ರೀಯ ತಂಡದಲ್ಲಿ ಆಡಬೇಕೆಂದರೆ ಗಿ ಯೋ-ಯೋ ಟೆಸ್ಟ್’ನಲ್ಲಿ ಪಾಸ್ ಆಗಲೇಬೇಕೆಂಬ ಕಡ್ಡಾಯ ನಿಯಮ ತರಲಾಯಿತು. ಹೀಗಿದ್ದಾಗ ಯೋ ಯೋ ಟೆಸ್ಟ್’ನಲ್ಲಿ ವಿಫಲರಾದ ಐವರು ಭಾರತೀಯ ಕ್ರಿಕೆಟಿಗರು ಯಾರೆಂದು ತಿಳಿಯೋಣ.
ಆಫ್-ಸ್ಪಿನ್ನಿಂಗ್ ಆಲ್-ರೌಂಡರ್ ವಾಷಿಂಗ್ಟನ್ ಸುಂದರ್ 2017 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ T20Is ಗೆ ತಂಡವನ್ನು ಆಯ್ಕೆ ಮಾಡುವ ಮೊದಲು ಯೋ-ಯೋ ಟೆಸ್ಟ್‌ನಲ್ಲಿ ವಿಫಲರಾದರು. ಈ ಕಾರಣದಿಂದ ಅವಕಾಶವನ್ನು ಕಳೆದುಕೊಂಡರು. ಆ ಬಳಿಕ ಫಿಟ್ನೆಸ್ ಕಾಪಾಡಿಕೊಂಡ ಸುಂದರ್ ಶ್ರೀಲಂಕಾ ಸರಣಿಯಲ್ಲಿ ಕಂಬ್ಯಾಕ್ ಮಾಡಿದರು.
ಭಾರತದ ವೇಗಿ ಮೊಹಮ್ಮದ್ ಶಮಿ ಕೂಡ ಈ ಟೆಸ್ಟ್’ನಲ್ಲಿ ವಿಫಲರಾಗಿದ್ದರು. ಆದರೆ ಒಂದು ತಿಂಗಳ ನಂತರ ಎಲ್ಲವನ್ನೂ ಸುಧಾರಿಸಿಕೊಂಡು ಬಂದ ಶಮಿ ಇಂಗ್ಲೆಂಡ್ ಸರಣಿಯಲ್ಲಿ ಅವಕಾಶ ಪಡೆದರು.
2017 ರಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯ ಮೊದಲು, ಯುವರಾಜ್ ಸಿಂಗ್ ಅವರನ್ನು ತಂಡದಿಂದ ಆಶ್ಚರ್ಯಕರವಾಗಿ ಕೈಬಿಡಲಾಯಿತು. ಆ ಬಳಿಕ ಯುವರಾಜ್ ಯೋ-ಯೋ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ ಎಂದು ತಿಳಿದುಬಂತು.
ಇನ್ನು 2018 ರಲ್ಲಿ ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತ ಎ ತಂಡವನ್ನು ಪ್ರಕಟಿಸಿದಾಗ, ಸಂಜು ಸ್ಯಾಮ್ಸನ್ ಅದರ ಭಾಗವಾಗಿದ್ದರು. ಆದರೆ, ಯೋ-ಯೋ ಟೆಸ್ಟ್’ನಲ್ಲಿ ಸ್ಯಾಮ್ಸನ್ ವಿಫಲರಾದ ಕಾರಣ ಅವರನ್ನು ಕೈಬಿಟ್ಟು ಇಶಾನ್ ಕಿಶನ್ ಅವರನ್ನು ಸೇರಿಸಿಕೊಳ್ಳಲಾಯಿತು.
ಇದನ್ನೂ ಓದಿ: ಸೆಹ್ವಾಗ್ ದಾಖಲೆ ಸರಿಗಟ್ಟಿ ತ್ರಿಶತಕ ಸಿಡಿಸಿದ್ದ ಟೀಂ ಇಂಡಿಯಾದ ಆಟಗಾರನಿಗೆ ಅನ್ಯಾಯ!
ಅಂಬಟಿ ರಾಯುಡು ಕೂಡ ಯೋ-ಯೋ ಟೆಸ್ಟ್’ನಲ್ಲಿ ವಿಫಲರಾದರು. ಈ ಕಾರಣದಿಂದ ಸುರೇಶ್ ರೈನಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಆದರೆ ರಾಯುಡು ಫಿಟ್ನೆಸ್ ಕಾಪಾಡಿಕೊಂಡು 2018 ರ ಏಷ್ಯಾ ಕಪ್ ಆಡಲು ಹಿಂತಿರುಗಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.