Watch video :ರಾಂಚಿ ಟೆನಿಸ್ ಟೂರ್ನಾಮೆಂಟ್ ನಲ್ಲಿ ಧೋನಿ ಕರಾಮತ್ತು
ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಭಾರತ ತಂಡ ಸೋತ ನಂತರ ಮಾಜಿ ನಾಯಕ ಎಂ.ಎಸ್. ಧೋನಿ ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ.
ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಭಾರತ ತಂಡ ಸೋತ ನಂತರ ಮಾಜಿ ನಾಯಕ ಎಂ.ಎಸ್. ಧೋನಿ ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ.
ಆದರೆ ಕ್ರಿಕೆಟ್‌ನಿಂದ ದೂರವಿದ್ದರೂ ಕೂಡ ಕ್ರೀಡೆಯಿಂದ ಸಂಪೂರ್ಣವಾಗಿ ದೂರವಾಗಿಲ್ಲ. ಈಗ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊವೊಂದರಲ್ಲಿ, ಧೋನಿ ರಾಂಚಿಯಲ್ಲಿ ನಡೆದ ಸ್ಥಳೀಯ ಟೆನಿಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ.
ವೀಡಿಯೊದ ಶೀರ್ಷಿಕೆಯ ಹೇಳುವಂತೆ 37 ವರ್ಷದ ಧೋನಿ ಡಬಲ್ಸ್ ಪಂದ್ಯವನ್ನು ಆಡಿದರು ಮತ್ತು ಅದನ್ನು ಸುಲಭವಾಗಿ ಗೆದ್ದರು ಎನ್ನಲಾಗಿದೆ. ಸುಮೀತ್ ಜೊತೆ ಜೋಡಿಯಾಗಿರುವ ಧೋನಿ, ಮೈಕೆಲ್ ಮತ್ತು ಚೈಸ್ ವಿರುದ್ಧದ ಪಂದ್ಯವನ್ನು 6-0, 6-0 ಅಂತರದಲ್ಲಿ ಗೆದ್ದಿದ್ದಾರೆ ಎಂದು ಸೋಷಿಯಲ್ ಮೀಡಿಯಾ ತಿಳಿಸಲಾಗಿದೆ.