ಸಾರ್ವಜನಿಕ ಸ್ಥಳದಲ್ಲೇ ಕ್ರಿಕೆಟಿಗ ಶಿಖರ್ ಧವನ್ ಕಾಲರ್ ಹಿಡಿದೆಳೆದ ವ್ಯಕ್ತಿ! ಶಾಕಿಂಗ್ ವಿಡಿಯೋ ವೈರಲ್
Shikhar Dhawan Viral Video: 37 ವರ್ಷದ ಶಿಖರ್ ಧವನ್ ಬಹುಶಃ ಇನ್ನು ಮುಂದೆ ಟೀಂ ಇಂಡಿಯಾದ ಭಾಗವಾಗುವುದು ಕಷ್ಟ. ಈ ಮಧ್ಯೆ ಸೋಫಾದ ಮೇಲೆ ಕುಳಿತಿದ್ದ ಶಿಖರ್ ಬಳಿ ಆತನ ತಂದೆ ನಡೆದುಕೊಂಡು ಬಂದು ಆತನ ಕಾಲರ್ ಹಿಡಿದಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
Shikhar Dhawan Viral Video: ಭಾರತ ಕ್ರಿಕೆಟ್ ತಂಡದ ಗಮನ ಈಗ ಏಷ್ಯಾಕಪ್ ಗೆಲ್ಲುವತ್ತ ನೆಟ್ಟಿದೆ. ಸೆಪ್ಟೆಂಬರ್ 2 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ಮಧ್ಯೆ, ಹಿರಿಯ ಬ್ಯಾಟ್ಸ್ಮನ್ ಶಿಖರ್ ಧವನ್ ಕುರಿತಾದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಇದನ್ನೂ ಓದಿ: ಯುಜುವೇಂದ್ರ ಚಾಹಲ್ ಟೀಂ ಇಂಡಿಯಾದಲ್ಲಿರಲು ಅರ್ಹನಲ್ಲ ಎಂದ ಈ ಪಾಕ್ ಆಟಗಾರ..!
37 ವರ್ಷದ ಶಿಖರ್ ಧವನ್ ಬಹುಶಃ ಇನ್ನು ಮುಂದೆ ಟೀಂ ಇಂಡಿಯಾದ ಭಾಗವಾಗುವುದು ಕಷ್ಟ. ಏಷ್ಯಾ ಕಪ್-2023ರಲ್ಲೂ ಅವರು ಆಡುತ್ತಿಲ್ಲ. ಏಷ್ಯನ್ ಗೇಮ್ಸ್’ನಲ್ಲಿ ಅವರು ಟೀಮ್ ಇಂಡಿಯಾದ ನಾಯಕತ್ವವನ್ನು ನಿಭಾಯಿಸುತ್ತಾರೆ ಎಂದು ನಂಬಲಾಗಿತ್ತು. ಆದರೆ ಅದೂ ಕೂಡ ಕೈತಪ್ಪಿತು.
ಈ ಮಧ್ಯೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಧವನ್ ತನ್ನ ತಂದೆಯೊಂದಿಗೆ ಮೋಜು ಮಸ್ತಿ ಮಾಡುತ್ತಿರುವುದನ್ನು ಕಾಣಬಹುದು. ಸೋಫಾದ ಮೇಲೆ ಕುಳಿತಿದ್ದ ಶಿಖರ್ ಬಳಿ ಆತನ ತಂದೆ ನಡೆದುಕೊಂಡು ಬಂದು ಆತನ ಕಾಲರ್ ಹಿಡಿದಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಶಿಖರ್ ತಂದೆ ಸೋಫಾದ ಮೇಲೆ ಒಂದು ಕಾಲು ಇಟ್ಟು, ಕಾಲರ್ ಹಿಡಿದು “ಜೋರಾಗಿ ಮಾತನಾಡಬೇಡ, ನಮಗೆ ಗಲಾಟೆ ಮಾಡಲು ಇಷ್ಟವಿಲ್ಲ” ಎನ್ನುತ್ತಾರೆ.
ಇದನ್ನೂ ಓದಿ: 1983ರಲ್ಲಿ ವಿಶ್ವಕಪ್ ಗೆದ್ದ ಟೀಂ ಇಂಡಿಯಾ ಆಟಗಾರರ ಸಂಬಳ ಎಷ್ಟಿತ್ತು ಗೊತ್ತಾ?
ಧವನ್ ಅವರ ಗೋಲ್ಡನ್ ವೃತ್ತಿಜೀವನ ಇದೀಗ ಕೊನೆಗೊಳ್ಳುತ್ತಿದೆ ಎಂದೆನಿಸುತ್ತಿದೆ. ಇಲ್ಲಿಯವರೆಗೆ 34 ಟೆಸ್ಟ್, 167 ODI ಮತ್ತು 68 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ODIಗಳಲ್ಲಿ, 17 ಶತಕಗಳು ಮತ್ತು 39 ಅರ್ಧ ಶತಕಗಳ ಸಹಾಯದಿಂದ ಒಟ್ಟು 6793 ರನ್ ಗಳಿಸಿದ್ದಾರೆ. ಟಿ20 ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಒಟ್ಟು 1759 ರನ್ ಕಲೆ ಹಾಕಿದ್ದು, 11 ಅರ್ಧಶತಕ ಗಳಿಸಿದ್ದಾರೆ. ಟೆಸ್ಟ್’ನಲ್ಲಿ 7 ಶತಕ ಮತ್ತು 5 ಅರ್ಧ ಶತಕಗಳ ಸಹಾಯದಿಂದ 2315 ರನ್ ಗಳಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.