ನವದೆಹಲಿ:ಲಾಕ್ ಡೌನ್ ಸಮಯದಲ್ಲಿ ಹೆಚ್ಚಿನ ಸಮಯವನ್ನು ಫಾರ್ಮ್ ಹೌಸ್ ನಲ್ಲಿ ಕಳೆಯುತ್ತಿರುವ
ಮಹೇಂದ್ರ ಸಿಂಗ್ ಧೋನಿ (Mahendra Singh Dhoni ) ಈಗ ಕಾರ್, ಹಾಗೋ ಬೈಕ್ ಗಳೆಲ್ಲವನ್ನು ಬಿಟ್ಟು ಟ್ರಾಕ್ಟರ್ ಗೆ ಮೊರೆ ಹೋಗಿದ್ದಾರೆ.


COMMERCIAL BREAK
SCROLL TO CONTINUE READING

ವಿಶ್ವಕಪ್ ನ ಸೆಮಿ ಫೈನಲ್ ನಿಂದ ಭಾರತ ನಿರ್ಗಮಿಸಿದಾಗಿನಿಂದ ಧೋನಿ ಕ್ರಿಕೆಟ್ ಅಂಗಳದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಇನ್ನೊಂದೆಡೆಗೆ ಅವರ ನಿವೃತ್ತಿ ಕುರಿತಾದ ವದಂತಿಗಳು ಆಗಾಗ ಕೇಳಿಬರುತ್ತಿವೆ. ಈ ವಿಚಾರವಾಗಿ ಧೋನಿ ಕೂಡ ಇದುವರೆಗೆ ಬಹಿರಂಗವಾಗಿ ತಮ್ಮ ನಿವೃತ್ತಿ ಬಗ್ಗೆ ಮಾತನಾಡಿಲ್ಲ. ಇತ್ತೀಚಿಗೆ ಅವರ ಪತ್ನಿ ಸಾಕ್ಷಿ ಈ ವಿಚಾರವಾಗಿ ಪ್ರತಿಕ್ರಿಯಿಸುತ್ತಾ ಧೋನಿ ಸಾಮಾಜಿಕ ಮಾಧ್ಯಮದಲ್ಲಿ ಸಕ್ರೀಯರಾಗಿಲ್ಲ, ಈ ತರದ ಸುದ್ದಿಗಳು ಎಲ್ಲಿಂದ ಬರುತ್ತವೆ ಎನ್ನುವುದೇ ತಿಳಿಯುವುದಿಲ್ಲ ಎಂದು ಹೇಳಿದ್ದರು.



ಆದರೆ ಧೋನಿ ಮಾತ್ರ ಇದ್ಯಾವುದಕ್ಕೂ ಚಿಂತಿಸದೆ ತಮ್ಮ ಲಾಕ್ ಡೌನ್ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಈಗ ಚೆನ್ನೈ ಸೂಪರ್ ಕಿಂಗ್ ಹಂಚಿಕೊಂಡಿರುವ ವೀಡಿಯೋ ವೊಂದರಲ್ಲಿ ಧೋನಿ ನೂತನ ಟ್ರ್ಯಾಕ್ಟರ್ ಚಲಾಯಿಸುತ್ತಿರುವುದನ್ನು ಕಾಣಬಹುದು.