India vs New Zealand, 1st ODI: ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ T20 ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿರುವ ಟೀಂ ಇಂಡಿಯಾ ಇದೀಗ ಏಕದಿನ ಸರಣಿಯಲ್ಲೂ ಕೀವೀಸ್ ಪಡೆಯನ್ನು ಬಗ್ಗುಬಡಿಯಲು ಸಜ್ಜಾಗಿದೆ. ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಟೀಂ ಇಂಡಿಯಾ 3-0 ಅಂತರದಿಂದ ಗೆದ್ದುಕೊಂಡರೆ, ಐಸಿಸಿ ರ್ಯಾಂಕಿಂಗ್‌ನಲ್ಲಿ ಭಾರತ ನಂಬರ್-1 ಏಕದಿನ ತಂಡವಾಗಿ ಹೊರಹೊಮ್ಮಲಿದೆ.


COMMERCIAL BREAK
SCROLL TO CONTINUE READING

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ ನವೆಂಬರ್ 25, ಶುಕ್ರವಾರದಂದು ಭಾರತೀಯ ಕಾಲಮಾನ ಬೆಳಗ್ಗೆ 7ಗಂಟೆಗೆ ಪ್ರಾರಂಭವಾಗಲಿದೆ.


ಇದನ್ನೂ ಓದಿ: Team India : ಬಾಂಗ್ಲಾದೇಶ ಪ್ರವಾಸದಿಂದ ಕೂಡ ರವೀಂದ್ರ ಜಡೇಜಾ ಔಟ್!


ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯವು ಆಕ್ಲೆಂಡ್‌ ಮೈದಾನದಲ್ಲಿ ನಡೆಯಲಿದೆ. ಟಿ20 ಸರಣಿಗೆ ಮಳೆ ಅಡ್ಡಿ ಆದಂತೆ ಏಕದಿನ ಪಂದ್ಯಕ್ಕೂ ಮಳೆರಾಯ ಉಪಟಳ ನೀಡಲಿದ್ದಾನೆಯೇ ಎಂಬ ಆತಂಕ ಮನೆ ಮಾಡಿದೆ. ಈ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ ನೀಡಿದೆ.


ಟಿ20 ಸರಣಿಯಲ್ಲಿ ಮಳೆಯಿಂದಾಗಿ ಎರಡು ಪಂದ್ಯಗಳು ನೀರಿನಲ್ಲಿ ಕೊಚ್ಚಿ ಹೋಗಿತ್ತು. ಆದರೂ ಟೀಂ ಇಂಡಿಯಾ ಸರಣಿಯನ್ನು 1-0 ಅಂತರದಿಂದ ಗೆದ್ದಿತು.


ಆಕ್ಲೆಂಡ್‌ನ ಹವಾಮಾನ ವರದಿ:


ನಾಳೆ ನಡೆಯಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದ ವೇಳೆ ಆಕ್ಲೆಂಡ್‌ನಲ್ಲಿ ಮಳೆಯಾಗುವ ಸಾಧ್ಯತೆ ಇಲ್ಲ ಎಂದು ಇಲಾಖೆಯು ಮಹತ್ವದ ಮಾಹಿತಿ ನೀಡಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ನೀಡಿದೆ. ಭಾರತ-ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗುವುದಿಲ್ಲ. ಆಕ್ಲೆಂಡ್‌ನಲ್ಲಿ ಸಂಜೆ ತಾಪಮಾನವು ಸುಮಾರು 16 ಡಿಗ್ರಿ ಸೆಲ್ಸಿಯಸ್‌ನಷ್ಟಿರುತ್ತದೆ ಮತ್ತು ಗಾಳಿಯ ವೇಗ ಗಂಟೆಗೆ 16 ಕಿ.ಮೀ ಇರುತ್ತದೆ ಎಂದು ಹವಾಮಾನ ವರದಿ ನೀಡಿದೆ.


ಇದನ್ನೂ ಓದಿ: ICC T20I Rankings : ಟಿ20 ಸರಣಿಯ ನಂತರ ಸೂರ್ಯಕುಮಾರ್ ಯಾದವ್‌ಗೆ ಭರ್ಜರಿ ಗುಡ್ ನ್ಯೂಸ್!


ಟೀಂ ಇಂಡಿಯಾಗೆ ದಾಖಲೆ ಸೃಷ್ಟಿಸುವ ಅವಕಾಶ:


ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಈ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸೇರಿ ಘಟಾನುಘಟಿ ಆಟಗಾರರು ಆಡುತ್ತಿಲ್ಲ. ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ನಾಯಕತ್ವ ಶಿಖರ್ ಧವನ್ ಕೈಯಲ್ಲಿದೆ. ಯುವ ಆಟಗಾರರಾದ ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ ಮತ್ತು ಶಹಬಾಜ್ ಅಹ್ಮದ್ ಏಕದಿನ ಸರಣಿಯಲ್ಲಿ ತಮ್ಮ ಶಕ್ತಿ ಪ್ರದರ್ಶಿಸಲಿದ್ದಾರೆ. ನ್ಯೂಜಿಲೆಂಡ್ ನೆಲದಲ್ಲಿ ಏಕದಿನ ಸರಣಿ ಗೆದ್ದರೆ ಟೀಂ ಇಂಡಿಯಾಗೆ ಇದು ದೊಡ್ಡ ಮಟ್ಟದ ಸಾಧನೆಯಾಗಲಿದೆ ಎಂದು ಹೇಳಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.