Team India : ಬಾಂಗ್ಲಾದೇಶ ಪ್ರವಾಸದಿಂದ ಕೂಡ ರವೀಂದ್ರ ಜಡೇಜಾ ಔಟ್!

ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಈಗ ಅವರ ಸ್ಥಾನಕ್ಕೆ ಸ್ಟಾರ್ ಆಟಗಾರರೊಬ್ಬರು ಅವಕಾಶ ಪಡೆದಿದ್ದಾರೆ. ಈ ಆಟಗಾರ ಕಿಲ್ಲರ್ ಬೌಲಿಂಗ್ ಮತ್ತು ಡ್ಯಾಶಿಂಗ್ ಬ್ಯಾಟಿಂಗ್‌ನಲ್ಲಿ ಪರಿಣತಿ ಹೊಂದಿದ್ದಾರೆ.

Written by - Channabasava A Kashinakunti | Last Updated : Nov 23, 2022, 10:43 PM IST
  • ಬಾಂಗ್ಲಾದೇಶ ಪ್ರವಾಸದಿಂದ ರವೀಂದ್ರ ಜಡೇಜಾ ಔಟ್
  • ದಕ್ಷಿಣ ಆಫ್ರಿಕಾ ವಿರುದ್ಧ ಪದಾರ್ಪಣೆ ಮಾಡಿದ ಶಹಬಾಜ್
  • ಐಪಿಎಲ್‌ನಲ್ಲಿ ಶಕ್ತಿ ಪ್ರದರ್ಶನ ಮಾಡಿದ ಶಹಬಾಜ್
Team India : ಬಾಂಗ್ಲಾದೇಶ ಪ್ರವಾಸದಿಂದ ಕೂಡ ರವೀಂದ್ರ ಜಡೇಜಾ ಔಟ್! title=

Ravindra Jadeja : ನ್ಯೂಜಿಲೆಂಡ್ ಪ್ರವಾಸದ ನಂತರ ಭಾರತ ತಂಡ ಬಾಂಗ್ಲಾದೇಶ ಪ್ರವಾಸಕ್ಕೆ ತೆರಳಲಿದೆ. ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ 3 ಏಕದಿನ ಹಾಗೂ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು ಆಡಲಿದೆ. ಇದೀಗ ಇದಕ್ಕೂ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್ ಎದುರಾಗಿದೆ. ಹೌದು, ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಈಗ ಅವರ ಸ್ಥಾನಕ್ಕೆ ಸ್ಟಾರ್ ಆಟಗಾರರೊಬ್ಬರು ಅವಕಾಶ ಪಡೆದಿದ್ದಾರೆ. ಈ ಆಟಗಾರ ಕಿಲ್ಲರ್ ಬೌಲಿಂಗ್ ಮತ್ತು ಡ್ಯಾಶಿಂಗ್ ಬ್ಯಾಟಿಂಗ್‌ನಲ್ಲಿ ಪರಿಣತಿ ಹೊಂದಿದ್ದಾರೆ.

ಬಾಂಗ್ಲಾದೇಶ ಪ್ರವಾಸದಿಂದ ರವೀಂದ್ರ ಜಡೇಜಾ ಔಟ್

ಭಾರತದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಅವರು ಗಾಯದ ಸಮಸ್ಯೆಯಿಂದ ಬಾಂಗ್ಲಾದೇಶ ಪ್ರವಾಸದಿಂದ ಹೊರಗುಳಿದಿದ್ದಾರೆ. ಗಾಯದ ಕಾರಣ, ಜಡೇಜಾ 2022 ರ ಟಿ 20 ವಿಶ್ವಕಪ್‌ನಲ್ಲಿ ಭಾಗವಹಿಸಿರಲಿಲ್ಲ. ಇದೀಗ ಅವರ ಜಾಗದಲ್ಲಿ ಶಹಬಾಜ್ ಅಹಮದ್ ಅವರಿಗೆ ಅವಕಾಶ ನೀಡಲಾಗಿದೆ. ಶಹಬಾಜ್ ಅಹ್ಮದ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಅತ್ಯುತ್ತಮ ಆಟ ಪ್ರದರ್ಶಿಸುವಲ್ಲಿ ಅವರು ಪರಿಣತಿ ಹೊಂದಿದ್ದಾರೆ.

ಇದನ್ನೂ ಓದಿ : ICC T20I Rankings : ಟಿ20 ಸರಣಿಯ ನಂತರ ಸೂರ್ಯಕುಮಾರ್ ಯಾದವ್‌ಗೆ ಭರ್ಜರಿ ಗುಡ್ ನ್ಯೂಸ್!

ದಕ್ಷಿಣ ಆಫ್ರಿಕಾ ವಿರುದ್ಧ ಪದಾರ್ಪಣೆ ಮಾಡಿದ ಶಹಬಾಜ್

ಶಹಬಾಜ್ ಅಹ್ಮದ್ ದಕ್ಷಿಣ ಆಫ್ರಿಕಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಶಹಬಾಜ್ ನ್ಯೂಜಿಲೆಂಡ್ ವಿರುದ್ಧದ ಮೂರು ODI ಸರಣಿಯ ಭಾಗವಾಗಿದ್ದಾರೆ. ಅವರು ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ, ಆರು ಪಂದ್ಯಗಳಲ್ಲಿ 51.2 ಓವರ್‌ಗಳಲ್ಲಿ 4.87 ರ ಆರ್ಥಿಕತೆಯಲ್ಲಿ 11 ವಿಕೆಟ್‌ಗಳನ್ನು ಪಡೆದರು. ಅವರು ಕೆಳ ಕ್ರಮಾಂಕದಲ್ಲಿ ಬ್ಯಾಟ್‌ನೊಂದಿಗೆ ಎರಡು ಅರ್ಧ ಶತಕಗಳನ್ನು ಗಳಿಸಿದ್ದಾರೆ.

ಐಪಿಎಲ್‌ನಲ್ಲಿ ಶಕ್ತಿ ಪ್ರದರ್ಶನ ಮಾಡಿದ ಶಹಬಾಜ್

ಐಪಿಎಲ್ 2022 ರಲ್ಲಿ ಶಹಬಾಜ್ ಅಹ್ಮದ್ ಅದ್ಭುತ ಪ್ರದರ್ಶನ ನೀಡಿದರು, ಅದರ ಫಲಿತಾಂಶ ಇದೀಗ ಅವರಿಗೆ ಸಿಕ್ಕಿದೆ. ಅವರು ಐಪಿಎಲ್ 2022 ರಲ್ಲಿ RCB ಗಾಗಿ 16 ಪಂದ್ಯಗಳನ್ನು ಆಡಿದರು, ಅದರಲ್ಲಿ ಅವರು ನಾಲ್ಕು ವಿಕೆಟ್ಗಳನ್ನು ಪಡೆದರು. ಅದೇ ಸಮಯದಲ್ಲಿ, ಅವರು ಈ 16 ಪಂದ್ಯಗಳಲ್ಲಿ 219 ರನ್ ಗಳಿಸಿದರು. ಅಹ್ಮದ್ ಈ ರನ್‌ಗಳನ್ನು 27.38 ಸರಾಸರಿಯಲ್ಲಿ ಗಳಿಸಿದರು ಮತ್ತು ಅವರ ಸ್ಟ್ರೈಕ್ ರೇಟ್ 120.99 ಆಗಿತ್ತು.

ಬಾಂಗ್ಲಾದೇಶ ಪ್ರವಾಸಕ್ಕೆ ಭಾರತ ತಂಡ:

ರೋಹಿತ್ ಶರ್ಮಾ(C), ಕೆಎಲ್ ರಾಹುಲ್(VC), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಬ್ ಪಂತ್ (ಡಬ್ಲ್ಯುಕೆ), ಇಶಾನ್ ಕಿಶನ್ (ಡಬ್ಲ್ಯುಕೆ), ಶಹಬಾಜ್ ಅಹ್ಮದ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ದೀಪಕ್ ಚಹಾರ್, ಕುಲದೀಪ್ ಸೇನ್.

ಇದನ್ನೂ ಓದಿ : Team India : ಟೀಂ ಇಂಡಿಯಾದ ಈ ಆಟಗಾರನ ಪಾಲಿಗೆ ವಿಲನ್ ಆದ ಹಾರ್ದಿಕ್ ಪಾಂಡ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News