IND vs WI, T20 Series: ತರುಬಾದಲ್ಲಿ ಗುರುವಾರದಿಂದ ಭಾರತ ವಿರುದ್ಧದ ಐದು ಪಂದ್ಯಗಳ T20 ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗಾಗಿ ವೆಸ್ಟ್ ಇಂಡೀಸ್ ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್ ಶಾಯ್ ಹೋಪ್ ಮತ್ತು ವೇಗದ ಬೌಲರ್ ಒಶಾನೆ ಥಾಮಸ್ ಅವರನ್ನು ಸೇರಿಸಿಕೊಂಡಿದೆ. ರೋವ್‌ಮನ್ ಪೊವೆಲ್ ನೇತೃತ್ವದ ಈ 15 ಸದಸ್ಯರ ತಂಡವು ಎಲ್ಲಾ ಪಂದ್ಯಗಳಿಗೆ ಪ್ರವಾಸ ಮಾಡುತ್ತದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: “ಕೊಹ್ಲಿ, ರೋಹಿತ್ ಇದ್ದರೆ ODIನಲ್ಲಿ ಗೆಲುವು, ಇಲ್ಲದಿದ್ದರೆ…”: ಅಂತಿಮ ಪಂದ್ಯಕ್ಕೂ ಮುನ್ನ ದಿಗ್ಗಜನ ಶಾಕಿಂಗ್ ಹೇಳಿಕೆ


ಭಾರತ ವಿರುದ್ಧದ ಮೂರು ODI ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕರಾಗಿದ್ದ 29 ವರ್ಷದ ಶಾಯ್ ಹೋಪ್, ಕಳೆದ ವರ್ಷ ಫೆಬ್ರವರಿಯಲ್ಲಿ ಭಾರತ ಪ್ರವಾಸದ ಸಂದರ್ಭದಲ್ಲಿ ಕೋಲ್ಕತ್ತಾದಲ್ಲಿ ತಮ್ಮ ಕೊನೆಯ T20 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಡಿದ್ದರು. ಮತ್ತೊಂದೆಡೆ, 26 ವರ್ಷದ ಥಾಮಸ್ ಡಿಸೆಂಬರ್ 2021 ರಲ್ಲಿ ಕರಾಚಿಯಲ್ಲಿ ತನ್ನ ಕೊನೆಯ T20 ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯವನ್ನು ಆಡಿದ್ದರು. ತಂಡದ ಉಪನಾಯಕನಾಗಿ ಕೈಲ್ ಮೈಯರ್ಸ್ ನೇಮಕಗೊಂಡಿದ್ದಾರೆ. ಮುಂದಿನ ವರ್ಷ ತವರು ನೆಲದಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ಆಯ್ಕೆ ಮಾಡಲಾಗಿದೆ ಎಂದು ವೆಸ್ಟ್ ಇಂಡೀಸ್ ಆಯ್ಕೆ ಸಮಿತಿ ಅಧ್ಯಕ್ಷ ಡೆಸ್ಮಂಡ್ ಹೇನ್ಸ್ ಹೇಳಿದ್ದಾರೆ.


ಡೆಸ್ಮಂಡ್ ಹೇನ್ಸ್ ಹೇಳಿಕೆ ನೀಡಿದ್ದು, “ನಾವು ಸರಿಯಾದ ಸಂಯೋಜನೆಯ ಮೂಲಕ ವಿವಿಧ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಮುಂದಿನ ವರ್ಷ ನಾವು ಆಯೋಜಿಸುವ ಜಾಗತಿಕ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡುವಂತ ತಂಡವನ್ನು ಈಗ ತಯಾರಿಸುತ್ತಿದ್ದೇವೆ” ಎಂದಿದ್ದಾರೆ.


ಟ್ರಿನಿಡಾಡ್‌’ನ ತರೂಬಾದಲ್ಲಿರುವ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ ಗುರುವಾರ ಮೊದಲ ಪಂದ್ಯವನ್ನು ಆಯೋಜಿಸಲಿದೆ. ಇದಾದ ಬಳಿಕ ಎರಡೂ ತಂಡಗಳು ಗಯಾನಾ ರಾಷ್ಟ್ರೀಯ ಕ್ರೀಡಾಂಗಣಕ್ಕೆ ತೆರಳಲಿದ್ದು, ಅಲ್ಲಿ ಆಗಸ್ಟ್ 6 ಮತ್ತು 8ರಂದು ಎರಡು ಮತ್ತು ಮೂರನೇ ಪಂದ್ಯಗಳು ನಡೆಯಲಿವೆ. ಈ ಸರಣಿಯ ನಾಲ್ಕನೇ ಮತ್ತು ಐದನೇ ಪಂದ್ಯಗಳು ಅಮೆರಿಕದ ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿ ನಡೆಯಲಿದೆ.


ವೆಸ್ಟ್ ಇಂಡೀಸ್ ತಂಡ:


ರೋವ್ಮನ್ ಪೊವೆಲ್ (ನಾಯಕ), ಕೈಲ್ ಮೈಯರ್ಸ್ (ಉಪನಾಯಕ), ಜಾನ್ಸನ್ ಚಾರ್ಲ್ಸ್, ರೋಸ್ಟನ್ ಚೇಸ್, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕಿಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಓಬೆಡ್ ಮೆಕಾಯ್, ನಿಕೋಲಸ್ ಪೂರನ್, ರೊಮಾರಿಯೊ ಶೆಫರ್ಡ್, ಓಡಿಯನ್ ಸ್ಮಿತ್, ಓಡಿಯನ್ ಓಶಾನೆ ಥಾಮಸ್.


ಟೀಮ್ ಇಂಡಿಯಾ:


ಇಶಾನ್ ಕಿಶನ್ (WK), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ಉಪನಾಯಕ), ಸಂಜು ಸ್ಯಾಮ್ಸನ್ (WK), ಹಾರ್ದಿಕ್ ಪಾಂಡ್ಯ (ನಾಯಕ), ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಅರ್ಶ್ದೀಪ್ ಸಿಂಗ್ ಉಮ್ರಾನ್ ಮಲಿಕ್, ಅವೇಶ್ ಖಾನ್ ಮತ್ತು ಮುಖೇಶ್ ಕುಮಾರ್.


ಭಾರತ vs ವೆಸ್ಟ್ ಇಂಡೀಸ್ ಟಿ20 ಸರಣಿ ನಡೆಯುವ ಸ್ಥಳ:


  • 1ನೇ ಟಿ20 ಪಂದ್ಯ-ಆಗಸ್ಟ್ 3, ರಾತ್ರಿ 8.00, ಟ್ರಿನಿಡಾಡ್

  • 2ನೇ ಟಿ20 ಪಂದ್ಯ- ಆಗಸ್ಟ್ 6, ರಾತ್ರಿ 8.00, ಗಯಾನಾ

  • 3ನೇ ಟಿ20 ಪಂದ್ಯ-ಆಗಸ್ಟ್ 8, ರಾತ್ರಿ 8.00, ಗಯಾನಾ

  • 4ನೇ ಟಿ20 ಪಂದ್ಯ-ಆಗಸ್ಟ್ 12, ರಾತ್ರಿ 8.00, ಫ್ಲೋರಿಡಾ

  • ಐದನೇ ಟಿ20 ಪಂದ್ಯ- ಆಗಸ್ಟ್ 13, ರಾತ್ರಿ 8.00, ಫ್ಲೋರಿಡಾ


ಇದನ್ನೂ ಓದಿ: ಕ್ರಿಕೆಟ್ ಲೋಕಕ್ಕೆ ನಿವೃತ್ತಿ ಘೋಷಿಸಿದ ಇಬ್ಬರು ದಿಗ್ಗಜರು! ಒಬ್ಬ ಧೋನಿ ಪ್ರಿಯಮಿತ್ರ-ಮತ್ತೊಬ್ಬ ಯುವಿ ಸ್ನೇಹಿತ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.